2014ರಲ್ಲಿ ಸುಜುಕಿ ರಫ್ತು ಪೂರ್ಣವಾಗಿಯೂ ಭಾರತಕ್ಕೆ ಶಿಫ್ಟ್

By Nagaraja

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಅಂಗಸಂಸ್ಥೆಯಾಗಿರುವ ಸುಜುಕಿ, 2014ರ ಅಂತ್ಯದ ವೇಳೆಗೆ ತನ್ನ ಸಂಪೂರ್ಣ ರಫ್ತು ಪ್ರಕ್ರಿಯೆಯನ್ನು ಭಾರತಕ್ಕೆ ಸ್ಥಳಾಂತರಗೊಳಿಸಲಿದೆ.

ಈ ಬಗ್ಗೆ ತಿಳಿಸಿರುವ ಮಾರುತಿ ಸಜುಕಿ ಮುಖ್ಯಸ್ಥ ಆರ್. ಸಿ. ಭಾರ್ಗವ, ರಫ್ತು ಪ್ರಕ್ರಿಯೆಯನ್ನು ತವರೂರಿನಿಂದ ಸಂಪೂರ್ಣವಾಗಿ ಭಾರತಕ್ಕೆ ಸ್ಥಳಾಂತರಿಸಲಾಗುತ್ತಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಮಧ್ಯ ಪೂರ್ವ, ಆಫ್ರಿಕಾ, ದಕ್ಷಿಣ ಅಮೆರಿಕ ಹಾಗೂ ಇತರ ದಕ್ಷಿಣ ಪೂರ್ವ ಏಷ್ಯಾ ರಾಷ್ಟ್ರಗಳ ಪ್ರಮುಖ ರಫ್ತು ಕೇಂದ್ರವಾಗಿ ಭಾರತ ಪರಿವರ್ತನೆಗೊಳ್ಳಲಿದೆ ಎಂದಿದ್ದಾರೆ.

Suzuki

ದೆಹಲಿಯಲ್ಲಿರುವ ವಸಂಗ್ ಕುಂಜ್ ಕಾರ್ಯಾಲಯದ ತಲಹದಿಯಲ್ಲಿ ಈ ಎಲ್ಲ ಪ್ರಕ್ರಿಯೆಗಳು ನಿಯಂತ್ರಣದಲ್ಲಿರಲಿದೆ. ಸುಜುಕಿ ಇಂತಹದೊಂದು ನಡೆಯ ಹಿಂದೆ ಹಲವಾರು ಕಾರಣಗಳಿವೆ. ಈ ಪೈಕಿ ತವರೂರಾದ ಜಪಾನ್, ವಯಸ್ಸಾದ ಜನಸಂಖ್ಯೆಯಾಗಿ ಮಾರ್ಪಾಡುಗೊಳ್ಳುತ್ತಿರುವುದು ಹಾಗೂ ವೇತನವು ಹೆಚ್ಚುತ್ತಿರುವುದು ಪ್ರಮುಖ ಕಾರಣವಾಗಿದೆ. ಇನ್ನೊಂದೆಡೆ ರಫ್ತು ಪ್ರಕ್ರಿಯೆಗೆ ಭಾರತದಲ್ಲಿ ಅನುಕೂಲಕರ ಪರಿಸ್ಥಿತಿಯನ್ನು ಹೊಂದಿದೆ.

ಅಮೆರಿಕ ಡಾಲರ್ ಎದುರುಗಡೆ ರುಪಾಯಿ ಮೌಲ್ಯ ಕುಸಿತವು ಭಾರತದಿಂದ ವಿದೇಶಗಳಿಗೆ ರಫ್ತು ವೆಚ್ಚವನ್ನು ಕಡಿತಗೊಳಿಸುತ್ತಿದೆ. ಅಲ್ಲದೆ ಹಲವಾರು ಬೃಹತ್ ಬಂದರುಗಳಿಂದ ರಫ್ತು ಮಾಡುವುದು ಸುಲಭವಾಗಿದೆ ಎಂದಿದೆ.

ಕಳೆದ ಕೆಲವು ವರ್ಷಗಳಿಂದ ಜಗತ್ತಿನ ಪ್ರಮುಖ ವಾಹನ ತಯಾರಕ ಸಂಸ್ಥೆಗಳು ತನ್ನ ರಫ್ತು ಕೇಂದ್ರವನ್ನು ಭಾರತದಲ್ಲಿ ಸ್ಥಾಪಿಸುತ್ತಾ ಬಂದಿದೆ. ಈ ಪೈಕಿ ಹ್ಯುಂಡೈ, ರೆನೊ-ನಿಸ್ಸಾನ್ ಮತ್ತು ಫೋರ್ಡ್ ಮೋಟಾರು ಕಂಪನಿ ಪ್ರಮುಖವಾಗಿದೆ.

ಇನ್ನೊಂದೆಡೆ ಶೇಕಡಾ 56ರಷ್ಟು ಶೇರು ಹೊಂದಿರುವ ಮಾರುತಿ ಸಂಸ್ಥೆಯಲ್ಲಿ ನಿರ್ಭರವಾಗಿರುವ ಸುಜುಕಿ, ಕಳೆಗುಂದಿನ ಮಾರುಕಟ್ಟೆಗೆ ಉತ್ತೇಜನ ನೀಡಲು ಹೊಸ ನೀತಿಯನ್ನು ಅನುಸರಿಸುತ್ತಿದೆ.

More from DriveSpark

Article Published On: Wednesday, December 18, 2013, 15:03 [IST]
English summary
Suzuki will shift almost it's entire export operations to India before the end of the 2014 fiscal year, R.C. Bhargava, chairman of Maruti Suzuki India Ltd has said.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+