ಟಾಟಾ ಧಾರವಾಡ ಘಟಕಕ್ಕೆ ರಾಜ್ಯ ಮಟ್ಟದ 'ಸುರಕ್ಷತಾ ಪ್ರಶಸ್ತಿ'
ರಾಜ್ಯ ಸರಕಾರದ ಕಾರ್ಖಾನೆ, ಬಾಯ್ಲರ್, ಕೈಗಾರಿಕಾ ಸುರಕ್ಷತೆ ಹಾಗೂ ಆರೋಗ್ಯ ಇಲಾಖಾ ವಿಭಾಗದ ವತಿಯಿಂದ ಈ ಪ್ರಶಸ್ತಿ ಪ್ರದಾನವಾಗಿದ್ದು, ಟಾಟಾದ ಧಾರವಾಡ ಘಟಕವು ಎಲ್ಲ ಹಂತದಲ್ಲೂ ರಕ್ಷಣಾ ವ್ಯವಸ್ಥೆ ಕಾಪಾಡುವಲ್ಲಿ ಯಶಸ್ವಿಯಾಗಿದೆ.
42ನೇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ ಕಾರ್ಯಕ್ರಮವದಲ್ಲಿ ಪ್ರಶಸ್ತಿ ವಿಜೇತ ಟಾಟಾ ಮೋಟಾರ್ಸ್ ಧಾರವಾಡ ಘಟಕವನ್ನು ಸನ್ಮಾನಿಸಲಾಗಿತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕೈಗಾರಿಕೋಮ್ಯದ ಪ್ರತಿನಿಧಿಗಳು ಹಾಜರಿದ್ದರು.
ಟಾಟಾ ಮೋಟಾರ್ಸ್‌ನ ಧಾರವಾಡ ಘಟಕ ಆರಂಭಿಸಿ ಒಂದು ವರ್ಷ ಆಗುವುದರೊಳಗೆ ಇಂತಹದೊಂದು ಪ್ರತಿಷ್ಠಿತ ಪ್ರಶಸ್ತಿ ಹರಸಿಕೊಂಡು ಬಂದಿದೆ. ಟಾಟಾದ ಧಾರವಾಡ ಘಟಕಕ್ಕೆ ನೇಮಕಗೊಳ್ಳುವ ಪ್ರತಿಯೊಬ್ಬ ನೌಕರನೂ ಕಡ್ಡಾಯವಾಗಿ ಸುರಕ್ಷತೆಯ ತರಬೇತಿಗೆ ಒಳಗಾಗಬೇಕಾಗುತ್ತದೆ. ಹಾಗೆಯೇ ಘಟಕದಲ್ಲಿ ಅತ್ಯಂತ ಹೆಚ್ಚಿನ ಸುರಕ್ಷತಾ ಮಾನದಂಡಗಳನ್ನು ಅನುಸರಿಸಲಾಗುತ್ತಿದೆ.
ಟಾಟಾ ಮೋಟಾರ್ಸ್ ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿದ್ದು, ವಾಣಿಜ್ಯ ಹಾಗೂ ಪ್ರಯಾಣಿಕ ವಾಹನಗಳನ್ನು ಉತ್ಪಾದಿಸುವುದರಲ್ಲಿ ಅಗ್ರಗಣ್ಯ ಎನಿಸಿಕೊಂಡಿದೆ. ಹಾಗೆಯೇ ವಿಶ್ವದ ನಾಲ್ಕನೇ ಅತಿದೊಡ್ಡ ಟ್ರಕ್ ಹಾಗೂ ಬಸ್ ಉತ್ಪಾದಕ ಸಂಸ್ಥೆಯಾಗಿದೆ.


Click it and Unblock the Notifications









