ಟಾಟಾ ಇಂಡಿಗೊ ಟ್ಯಾಕ್ಸಿ ಲಾಂಚ್; ದರ 4.97 ಲಕ್ಷ ರು.
ಕಳೆದ ಹಲವಾರು ದಶಕಗಳಲ್ಲಿ ದೇಶದ ಟ್ಯಾಕ್ಸಿ ವಿಭಾಗವನ್ನು ಪರಿಗಣಿಸಿದರೆ ಅದರಲ್ಲೂ ವಿಶೇಷವಾಗಿ ಕೋಲ್ಕತ್ತಾ ಟ್ಯಾಕ್ಸಿ ಸೆಗ್ಮೆಂಟ್‌ನಲ್ಲಿ ಹಿಂದೂಸ್ತಾನ್ ಮೋಟಾರ್ಸ್‌ನ ಅಂಬಾಸಿಡರ್ ಬಹಳಷ್ಟು ಪ್ರಾಬಲ್ಯ ಸ್ಥಾಪಿಸಿದೆ.
ಇದರತ್ತ ಕಣ್ಣಾಯಿಸಿರುವ ಟಾಟಾ ಮೋಟಾರ್ಸ್, ನೂತನ ಇಂಡಿಗೊ ಸೆಡಾನ್ ಕಾರನ್ನು ಲಾಂಚ್ ಮಾಡಿದೆ. ಇದರ ದರ 4.97 ಲಕ್ಷ ರು.ಗಳಾಗಿವೆ.
ಎಸಿ, ಪವರ್ ಸ್ಟೀರಿಂಗ್ ಕೊರತೆ
ಹಾಗಿದ್ದರೂ ನೂತನ ಇಂಡಿಗೊ ಸೆಡಾನ್‌ಗೆ ಎಸಿ ಹಾಗೂ ಪವರ್ ಸ್ಟೀರಿಂಗ್ ಅಲಭ್ಯತೆ ಕಾಡಲಿದೆ. ನೂತನ ಇಂಡಿಗೊ ಕಪ್ಪು ಹಾಗೂ ಹಳದಿ ಬಣ್ಣದ ಮಿಶ್ರಣದೊಂದಿಗೆ ಬರಲಿದೆ. ಇದು ಕೊಲ್ಕತ್ತಾದಲ್ಲಿ ಅಂಬಾಸಿಡರ್ ಟ್ಯಾಕ್ಸಿಗೆ ಸಾಮತ್ಯೆ ಪಡೆದುಕೊಳ್ಳಲಿದೆ. ಈ ಮೂಲಕ ಆಕರ್ಷಕ ದರ ಹಾಗೂ ಅತ್ಯಧಿಕ ಇಂಧನ ಕ್ಷಮತೆಯೊಂದಿಗೆ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುವ ನಿರೀಕ್ಷೆಯನ್ನು ಕಂಪನಿ ಹೊಂದಿದೆ.
ಕಳೆದ 10 ವರ್ಷಗಳಿಂದ ಟಾಟಾ ಇಂಡಿಗೊ ಕಪ್ಪು ಹಾಗೂ ನೀಲಿ ಮಿಶ್ರಿತ ಬಣ್ಣಗಳ ಟ್ಯಾಕ್ಸಿ ಕೊಲ್ಕತಾ ರಸ್ತೆಗಳಲ್ಲಿ ಓಡಾಡುತ್ತಿವೆ. ಆದರೆ ಈ ಬಾರಿ ಟ್ಯಾಕ್ಸಿಗೆ ಹೊಸ ಬಣ್ಣವನ್ನು ಬಳಿಯಲು ಕಂಪನಿ ನಿರ್ಧರಿಸಿದೆ. ಅಲ್ಲದೆ ಹೊಸ ಆವೃತ್ತಿಗೆ ಉತ್ತಮ ಬೇಡಿಕೆ ಕಂಡುಬಂದಿದೆ ಎಂದು ಕಂಪನಿ ತಿಳಿಸಿದೆ.


Click it and Unblock the Notifications









