ಜಪಾನ್ ಪ್ರಾಬಲ್ಯದ ಇಂಡೋನೇಷ್ಯಾದಲ್ಲಿ ಟಾಟಾ ಸೆಡ್ಡು
ಇಂಡೋನೇಷ್ಯಾದಲ್ಲಿ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಸ್ಥಾಪಿಸಲ್ಪಟ್ಟ ಒಂದು ವರ್ಷದ ಬಳಿಕ ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಇಂಡೋನೇಷ್ಯಾ ಮಾರುಕಟ್ಟೆಗಾಗಿ ಮೂರು ನೂತನ ಕಾರುಗಳನ್ನು ಲಾಂಚ್ ಮಾಡಿದೆ.
2012ನೇ ಸಾಲಿನಲ್ಲಿ ಇಂಡೋನೇಷ್ಯಾ ವಾಹನೋದ್ಯಮವು ಶೇಕಡಾ 25ರಷ್ಟು ಶಿಪ್ರಗತಿಯ ಬೆಳವಣಿಗೆ ಸಾಧಿಸಿದೆ. ಇವೆಲ್ಲದ್ದರ ನಡುವೆ ಭಾರತದ ದೈತ್ಯ ಕಂಪನಿಯು ಇಂಡೋನೇಷ್ಯಾ ಎಂಟ್ರಿ ಕೊಟ್ಟಿದೆ.
ನಿಮ್ಮ ಮಾಹಿತಿಗಾಗಿ, ಇಂಡೋನೇಷ್ಯಾದಲ್ಲಿ ಜಪಾನ್ ಮೂಲದ ವಾಹನ ಕಂಪನಿಗಳು ಭದ್ರ ನೆಲೆ ಸ್ಥಾಪಿಸಿವೆ. ಹಾಗಿರುವಾಗ ಈ ಎಲ್ಲ ಸವಾಲನ್ನು ಹಿಮ್ಮೆಟ್ಟಿಸಲು ಹೇಗೆ ಸಾಧ್ಯವಾಗಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಉತ್ತರ ಲಭಿಸಲಿದೆ.
ಸಮಕಾಲೀನ ಪರಿಸ್ಥಿತಿಯಲ್ಲಿ ಇಂಡೋನೇಷ್ಯಾ ಆರ್ಥಿಕ ಬೆಳವಣಿಕೆ ಕುಂಠಿತವಾಗಿದ್ದು, ರಫ್ತು ಸಾಗಾಣಿಕೆ ಬೇಡಿಕೆ ಕಡಿಮೆಯಾಗಿದ್ದು ಹಾಗೂ ಇಂಡೋನೇಷ್ಯಾ ಕರೆನ್ಸಿ ಮೌಲ್ಯ ಕೂಡಾ ಹಿನ್ನಡೆ ಅನುಭವಿಸುತ್ತಿರುವ ಈ ಹಂತದಲ್ಲಿ ಕಾರು ಮಾರುಕಟ್ಟೆಯು ಇನ್ನಷ್ಟು ಕುಸಿತದತ್ತ ಮುಖ ಮಾಡುತ್ತಿದ್ದು, ಹಾಗಿರುವಾಗ ಟಾಟಾದ ಈ ನಡೆ ಇಕ್ಕಟ್ಟಿಗೆ ಸಿಲುಕಿಸುವ ಭೀತಿ ಕೂಡಾ ಹರಡಿದೆ.
ಪ್ರಸ್ತುತ ಇಂಡೋನೇಷ್ಯಾ ಮಾರುಕಟ್ಟೆಗೆ ಟಾಟಾ ಆರಿಯಾ, ಟಾಟಾ ಸಫಾರಿ ಮತ್ತು ಟಾಟಾ ವಿಸ್ಟಾ ಕಾರುಗಳನ್ನು ಪರಿಚಯಿಸಲಾಗಿದೆ. ಹಾಗೆಯೇ ವಿಶೇಷವಾಗಿ ವಿನ್ಯಾಸಗೊಳಿಸಲಾದ ಟಾಟಾ ನ್ಯಾನೋ ಕಾರನ್ನು ಮುಂದಿನ ವರ್ಷ ಬಿಡುಗಡೆಗೊಳಿಸುವ ಯೋಜನೆ ಹೊಂದಿದೆ.
ಮುಂಬರುವ 3-4 ವರ್ಷಗಳಲ್ಲಿ ಭಾರತವನ್ನು ಹೊರತುಪಡಿಸಿ ಇಂಡೋನೇಷ್ಯಾವನ್ನು ಅತಿದೊಡ್ಡ ಮಾರುಕಟ್ಟೆಯಾಗಿ ಬದಲಾಯಿಸುವುದು ಟಾಟಾ ಗುರಿಯಾಗಿದೆ. ಈ ನಿಟ್ಟಿನಲ್ಲಿ ಆರರಿಂದ ಏಳು ನೂತನ ಮಾಡೆಲ್‌ಗಳನ್ನು ನಿಕಟ ಭವಿಷ್ಯದಲ್ಲಿ ಲಾಂಚ್ ಮಾಡಲಾಗುವುದು ಎಂದು ತಿಳಿಸಿದೆ.


Click it and Unblock the Notifications









