ಇನ್ನು ಮುಂದೆ ಆನ್‌ಲೈನಲ್ಲಿ ಟಾಟಾ ನ್ಯಾನೋ ಖರೀದಿಸಿ
ಇಂದಿನ ಆಧುನಿಕ ಜಗತ್ತು ಎಷ್ಟು ಸಿಂಪಲಾಗಿದೆ ಅಂದರೆ ನಿಮಗೆ ಏನೆ ಬೇಕಾದರೂ ಅಂತರ್ಜಾಲದಲ್ಲಿ ಪಡೆಯುವ ವ್ಯವಸ್ಥೆಯಿದೆ. ಇದೀಗ ಹಲವು ವಿಧದ ಮಾರುಕಟ್ಟೆ ತಂತ್ರ ಅನುಸರಿಸುತ್ತಿರುವ ದೇಶದ ಬಹುದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ತನ್ನ ಅತ್ಯಂತ ಜನಪ್ರಿಯ ನ್ಯಾನೋ ಮಾಡೆಲನ್ನು ಆನ್‌ಲೈನಲ್ಲಿ ಖರೀದಿಸುವ ಯೋಜನೆ ಮುಂದಿರಿಸಿದೆ.
ಇದುವರೆಗೆ ಯಾವುದೇ ಕಾರು ಮಾಡೆಲ್‌ಗಳನ್ನು ಅಂತರ್ಜಾಲದಲ್ಲಿ ಖರೀದಿಸುವ ಆಯ್ಕೆಯಿರಲಿಲ್ಲ. ಸಾಮಾನ್ಯವಾಗಿ ಮೊಬೈಲ್‌ಗಳಂತಹ ಎಲೆಕ್ಟ್ರಾನಿಕ್ ವಸ್ತುಗಳು, ಬಟ್ಟೆ ಬರೆ ಹಾಗೂ ಶೂಗಳನ್ನು ಖರೀದಿಸುವ ಆಯ್ಕೆಯಿತ್ತು.
ಇನ್ನು ಮುಂದೆ ಕಾರನ್ನು ಸಹ ಆನ್‌ಲೈನಲ್ಲಿ ಖರೀದಿಸಬಹುದಾಗಿದೆ. ಈ ಮೂಲಕ ಹೆತ್ತವರು ತಮ್ಮ ಮಕ್ಕಳಿಗಾಗಿ ದುಬಾರಿ ಉಡುಗೊರೆ ನೀಡಬಹುದಾಗಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ವಿಶ್ವದ ಅಗ್ಗದ ಕಾರೆಂಬ ಖ್ಯಾತಿಗೆ ಪಾತ್ರವಾಗಿರುವ ನ್ಯಾನೋ, ದೇಶದ ಮಧ್ಯಮ ವರ್ಗದವರ ಕಾರು ಖರೀದಿಸಬೇಕೆಂಬ ಕನಸನ್ನು ನನಸಾಗಿಸಿದೆ. ಅಂದ ಹಾಗೆ ನ್ಯಾನೋ ಸಿಎನ್‌ಜಿ ಹಾಗೂ ಡೀಸೆಲ್ ವರ್ಷನ್ ಸದ್ಯದಲ್ಲೇ ಲಾಂಚ್ ಆಗಲಿದೆ. ಈ ಮೂಲಕ ಹೆಚ್ಚಿನ ಮಾರುಕಟ್ಟೆ ಗಿಟ್ಟಿಸಿಕೊಳ್ಳುವ ನಿರೀಕ್ಷೆಯನ್ನಿಟ್ಟುಕೊಂಡಿದೆ.


Click it and Unblock the Notifications









