ತಮ್ಮದೇ ಬ್ರಾಂಡ್ ಕಾರು ಬಳಸಲು ನೌಕರರಿಗೆ ಟಾಟಾ ಪಾಠ
ಹಾಗೊಂದು ವೇಳೆ ಆ ನಿರ್ದಿಷ್ಠ ಬ್ರಾಂಡ್ ಕಾರನ್ನು ಬಳಸಿಕೊಳ್ಳದಿದ್ದಲ್ಲಿ ನಿಮಗೆ ಕಂಪನಿ ಒಳಗಡೆ ಕಾರು ಪಾರ್ಕಿಂಗ್ ಮಾಡಲು ಅವಕಾಶವಿರುವುದಿಲ್ಲ. ಹೌದು, ಇಂತಹದೊಂದು ಕಟ್ಟುನಿಟ್ಟಿನ ನಿಯಮವನ್ನು ಟಾಟಾ ಮೋಟಾರ್ಸ್ ಹೊರತಂದಿದೆ.
ಕಂಪನಿಯ ಪ್ರಕಾರ ಸಿಬ್ಬಂದಿಗಳು ತಮ್ಮ ಬ್ರಾಂಡ್ ಹೊರತುಪಡಿಸಿ ಇತರ ಬ್ರಾಂಡ್ ಕಾರುಗಳನ್ನು ಬಳಕೆ ಮಾಡಿದ್ದಲ್ಲಿ ಸಂಸ್ಥೆ ನಿಗದಿಪಡಿಸಿರುವ ಪಾರ್ಕಿಂಗ್ ಪ್ರದೇಶದಲ್ಲಿ ಜಾಗ ಅನುವು ಮಾಡಿಕೊಳ್ಳಲಾಗುವುದಿಲ್ಲ. ಇದರಿಂದ ಕಂಪನಿಯ ಬ್ರಾಂಡ್‌ಗೆ ಧಕ್ಕೆಯಾಗುತ್ತಿದೆ ಎಂದಿದೆ.
ಹಾಗಾಗಿ ಬದಲಿ ಜಾಗವನ್ನು ನೌಕರರೇ ಹುಡುಕಿಕೊಳ್ಳಬೇಕಾಗುತ್ತದೆ. ಇಲ್ಲವಾದ್ದಲ್ಲಿ ನೀವು ಟಾಟಾ ಕಾರುಗಳನ್ನು ಖರೀದಿಸುವುದು ಸೂಕ್ತ ಎಂದು ಕಂಪನಿ ಪರೋಕ್ಷವಾಗಿ ಸೂಚನೆ ರವಾನಿಸಿದೆ.
ಅಂದ ಹಾಗೆ ಕೇವಲ ಟಾಟಾ ಮಾತ್ರವಲ್ಲ ಈ ರೀತಿಯ ಯೋಜನೆಗೆ ಮುಂದಾಗಿರುವುದು. ಹ್ಯುಂಡೈ ಈ ಹಿಂದೆಯೇ ಇಂತಹದೊಂದು ನಿಯಮವನ್ನು ರೂಪಿಸಿತ್ತು. ಇನ್ನು ದ್ವಿಚಕ್ರ ತಯಾರಕರ ಪೈಕಿ ಬಜಾಜ್ ಆಟೋ ಕೂಡಾ ಇದೇ ಪಾಲಿಸಿ ಮುಂದುವರಿಸುತ್ತಾ ಬಂದಿದೆ. ಆದರೆ ಇವೆಲ್ಲದಕ್ಕೂ ವಿರುದ್ಧವಾಗಿರುವ ದೇಶದ ನಂ.1 ಕಾರು ತಯಾರಕ ಸಂಸ್ಥೆ ಮಾರುತಿ ಸುಜುಕಿ ಮಾತ್ರ ತಮ್ಮ ಸಂಸ್ಥೆಯ ಉದ್ಯೋಗಿಗಳು ಯಾವ ಬ್ರಾಂಡಿನ ಕಾರೇ ಬಳಸಿದರೂ ತಲೆಕೆಡಿಸಿಕೊಂಡಿಲ್ಲ.
ಒಟ್ಟಿನಲ್ಲಿ ಕಂಪನಿಯ ಬ್ರಾಂಡ್ ಪ್ರಚಾರಕ್ಕಾಗಿ ನೌಕರರ ಮೇಲೆ ಈ ರೀತಿಯ ಒತ್ತಡ ಸೃಷ್ಟಿ ಮಾಡುವುದು ಸರಿಯೇ ಎಂಬ ಪ್ರಶ್ನೆಗೆ ಓದುಗರು ಉತ್ತರಿಸಬೇಕಾಗಿದೆ.


Click it and Unblock the Notifications









