ಟಾಟಾ ನ್ಯಾನೋಗೆ 30 ಲಕ್ಷ ಅಭಿಮಾನಿಗಳ ಗರಿ

ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ 30 ಲಕ್ಷ ಅನುಯಾಯಿಗಳನ್ನು ಗಿಟ್ಟಿಸಿಕೊಂಡಿರುವ ವಿಶ್ವದ ಅತಿ ಅಗ್ಗದ ಕಾರು ಟಾಟಾ ನ್ಯಾನೋ ದಾಖಲೆ ಸ್ಥಾಪಿಸಿದೆ. ಈ ಮೂಲಕ ದೇಶದ ಆಟೋಮೊಬೈಲ್ ಇತಿಹಾಸದಲ್ಲೇ 3 ಮಿಲಿಯನ್ ಅಭಿಮಾನಿಗಳನ್ನು ಪಡೆದ ಮೊದಲ ಕಾರು ಬ್ರಾಂಡ್ ಎಂಬ ಹೆಗ್ಗಳಿಕೆಗೆ ನ್ಯಾನೋ ಪಾತ್ರವಾಗಿದೆ.

ತನ್ನದೇ ಆದ ಯೂನಿಕ್ ವಿನ್ಯಾಸ ಹೊಂದಿರುವ ನ್ಯಾನೋ ನಿರಂತರ ಪ್ರಯತ್ನಗಳ ಬಳಿಕ ಅವಿಶ್ವಸನೀಯ ರೀತಿಯಲ್ಲಿ ಕೇವಲ 12 ತಿಂಗಳ ಅವಧಿಯಲ್ಲಿ ಈ ಸಾಧನೆ ಮಾಡಿದೆ. ಹಾಗೆಯೇ ನ್ಯಾನೋ ಎಕ್ಸಪರ್ಟ್ ಕ್ವಿಜ್ ಟು ಡ್ರೈವ್ ಹಾಗೂ ನ್ಯಾನೋ ಸ್ಟುಡೆಂಟ್ ಆಫ್ ಇಯರ್‌ಗಳಂತಹ ಅನೇಕ ಚಟುವಟಿಕೆಗಳು ನ್ಯಾನೋ ಪೇಜ್ ಜೀವಂತವಾಗಿಸಲು ನೆರವಾಗಿದ್ದವು.

ದೇಶದ ಎಲ್ಲ ಆಟೋ ಬ್ರಾಂಡ್‌ಗಳ ಪೈಕಿ ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಚಟುವಟಿಕೆಗಳನ್ನು ಹೊಂದಿರುವ ಟಾಟಾ ನ್ಯಾನೋ ಹೆಚ್ಚು ಕ್ರಿಯಾಶೀಲವಾಗಿ ಮೂಡಿಬಂದಿವೆ. ಒಟ್ಟಾರೆಯಾಗಿ 5000ದಷ್ಟು ಕಾರು ಬ್ರಾಂಡ್‌ಗಳನ್ನು ಪರಿಶೀಲನೆಗೆ ಒಳಪಡಿಸಲಾಗಿತ್ತು.

ಟಾಟಾ ನ್ಯಾನೋ ಫ್ಯಾನ್ ಪೇಜ್‌ನಲ್ಲಿ ಕಾರಿನ ವೈಶಿಷ್ಟ್ಯ ಹಾಗೂ ಪ್ರಶಸ್ತಿ ಪುರಸ್ಕಾರಗಳ ಬಗ್ಗೆ ವಿಸೃತ ಮಾಹಿತಿಯನ್ನು ಕೊಡಲಾಗಿದೆ. ಇದು ದೇಶದ ಅತಿ ಅಗ್ಗದ ಕಾರಿನ ಬಗ್ಗೆ ಹೆಚ್ಚು ಅರಿತುಕೊಳ್ಳಲು ಗ್ರಾಹಕರಿಗೆ ನೆರವಾಗುತ್ತಿದೆ.

ಟಾಟಾ ನ್ಯಾನೋ

ಪೇಸ್‌ಬುಕ್ ಫ್ಯಾನ್ ಪೇಜ್‌ನಲ್ಲಿ 30 ಲಕ್ಷ ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿರುವ ನ್ಯಾನೋ ಸಾಧನೆ ಮಾಡಿದೆ.

ಟಾಟಾ ನ್ಯಾನೋ

ತಾಂತ್ರಿಕತೆ ಬಗ್ಗೆ ತಜ್ಞರಿಂದ ಟೀಕೆಗಳು ವ್ಯಕ್ತವಾಗಿದ್ದರೂ ಅವೆಲ್ಲವನ್ನು ಮೆಟ್ಟಿ ನಿಲ್ಲುವಲ್ಲಿ ನ್ಯಾನೊ ಯಶಸ್ವಿಯಾಗಿತ್ತು.

ಟಾಟಾ ನ್ಯಾನೋ

ಇದೀಗಷ್ಟೇ ನಿವೃತ್ತಿ ಘೋಷಿಸಿರುವ ಮಾಜಿ ಮುಖ್ಯಸ್ಥ ರತನ್ ಟಾಟಾ ಅವರು ದೇಶದಲ್ಲಿ ನ್ಯಾನೋ ಇಷ್ಟೊಂದು ಯಶ ಗಳಿಸಲು ಕಾರಣವಾಗಿದ್ದರೆ.

ಟಾಟಾ ನ್ಯಾನೋ

ಮುಂಬರುವ ದಿನಗಳಲ್ಲಿ ಇನ್ನಷ್ಟು ಪವರ್‌ಫುಲ್ ಎಂಜಿನ್‌ನೊಂದಿಗೆ ನ್ಯಾನೋ ಡೀಸೆಲ್ ಆವೃತ್ತಿ ಕೂಡಾ ಮಾರುಕಟ್ಟೆಗೆ ಲಗ್ಗೆಯಿಡಲಿದೆ.

ಟಾಟಾ ನ್ಯಾನೋ

ಈ ಮೂಲಕ ಸಣ್ಣ ಕಾರು ಮಾರುಕಟ್ಟೆಯಲ್ಲಿ ಟಾಟಾ ನ್ಯಾನೋ, ತನ್ನ ಸಮೀಪದ ಪ್ರತಿಸ್ಪರ್ಧಿಗಳಾದ ಮಾರುತಿ ಅಲ್ಟೊಗಳಂತಹ ಕಾರುಗಳಿಗೆ ಪ್ರಬಲ ಪೈಪೋಟಿ ಒಡ್ಡಲಿದೆ.

More from DriveSpark

Article Published On: Thursday, January 3, 2013, 13:53 [IST]
English summary
Tata Nano has become India's first auto brand to cross 3 million Facebook fans. With its unique engagement style and consistent efforts, Tata Nano has achieved this feat in an unbelievable span of just 12 months.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+