ಇದೀಗ ನ್ಯಾನೋ ಖರೀದಿ ಬೈಕ್‌ಗಿಂತಲೂ ಸುಲಭ!
ಹಾಗೊಂದು ವೇಳೆ ನೀವು ಬೈಕ್ ಖರೀದಿಸಲು ಯೋಚನೆ ಹಾಕಿಕೊಂಡಿದ್ದೀರಾ? ತಡೆಯಿರಿ, ಒಂದು ನಿಮಿಷ ನಾವಿಲ್ಲಿ ಹೇಳಲಿರುವ ವಿಷಯವನ್ನು ಒಮ್ಮೆ ಗಮನವಿಟ್ಟು ಕೇಳಿ ನೋಡಿರಿ.
ನೀವು ಯಾವ ನ್ಯಾನೋ ಕಾರು ಖರೀದಿಸ್ತೀರಾ?
ಇದೀಗ ವಿಶ್ವದ ಅತಿ ಅಗ್ಗದ ಕಾರಾಗಿರುವ ನ್ಯಾನೋ ಖರೀದಿ ಬೈಕ್‌ಗಿಂತಲೂ ಸುಲಭವಾಗಲಿದೆ. ಹೌದು, ದೇಶದ ಜನಸಾಮ್ಯಾನರ ಕಾರು ಕನಸನ್ನು ನನಸಾಗಿಸಿರುವ ಟಾಟಾ ಮೋಟಾರ್ಸ್ 'ಅಲ್ಟಿಮೇಟ್ ಡಿಸೆಂಬರ್ ಆಫರ್ 2013'ರಲ್ಲಿ ಇಂತಹದೊಂದು ಅವಕಾಶವೊದಗಿಸುತ್ತಿದೆ.

ನೀವೀಗ ಕೇವಲ 20,000 ರುಪಾಯಿ ಪಾವತಿಸಿ (ಡೌನ್ ಪೇಮೆಂಟ್) ನಿಮ್ಮ ನ್ಯಾನೋ ಕಾರನ್ನು ಮನೆಗೆ ಒಯ್ಯಬಹುದಾಗಿದೆ. ಅಲ್ಲದೆ ಗರಿಷ್ಠ 55,000 ರು.ಗಳ ವರೆಗೂ ಪ್ರಯೋಜನ ಪಡೆಯಬಹುದಾಗಿದೆ. ಪ್ರಸ್ತುತ ಆಫರ್ 2013 ಡಿಸೆಂಬರ್ 31ರ ವರೆಗೆ ಚಾಲ್ತಿಯಲ್ಲಿರಲಿದೆ. ಈ ಮೂಖಾಂತರ ಆಸಮ್‌ನೆಸ್ ಕುಟುಂಬಕ್ಕೆ ನ್ಯಾನೋ ನಿಮ್ಮನ್ನು ಸ್ವಾಗತಿಸುತ್ತಿದೆ.
ಟಾಟಾ ನ್ಯಾನೋ ಸ್ಟಾಂಡರ್ಡ್ ಪೆಟ್ರೋಲ್ ವೆರಿಯಂಟ್ ದರ 1.50 ಲಕ್ಷ ರು.ಗಳಿಂದ ಆರಂಭವಾಗುತ್ತಿದೆ. ಇದೀಗ ಇಂತಹದೊಂದು ಆಫರ್ ಮುಂದಿರಿಸಿರುವುದು ನಿಜಕ್ಕೂ ಗ್ರಾಹಕರಲ್ಲಿ ಸಂತಸಕ್ಕೆ ಕಾರಣವಾಗಿದೆ. ಇನ್ನು ನ್ಯಾನೋ ಪ್ರತಿ ಲೀಟರ್‌ಗೆ 25 ಕೀ.ಮೀ. ವರೆಗೆ ಮೈಲೇಜ್ ನೀಡುವ ಕ್ಷಮತೆ ಹೊಂದಿರುವುದು ಇನ್ನಷ್ಟು ಖುಷಿಗೆ ಹೇತುವಾಗಿದೆ.


Click it and Unblock the Notifications








