ಹಳೆಯ ಬೈಕ್‌ಗಳನ್ನು ಹೊಸ ನ್ಯಾನೋ ಜತೆ ಎಕ್ಸ್‌ಚೇಂಜ್ ಮಾಡಿರಿ!

By Nagaraja

ನಿಮ್ಮ ಬಳಿ ಹಳೆ ಬೈಕ್ ಅಥವಾ ಹಳೆಯ ಕಾರುಗಳಿವೆ? ಹಾಗಿದ್ದರೆ ಮತ್ಯಾಕೆ ತಡ ಈವಾಗಲೇ ಎಕ್ಸ್‌ಚೇಂಜ್ ಆಫರ್ ಮೂಲಕ ಹೊಸ ನ್ಯಾನೋ ಕಾರನ್ನು ನಿಮ್ಮದಾಗಿಸಿಕೊಳ್ಳಿರಿ.

ಹೌದು, ಕಳೆಗುಂದಿರುವ ಮಾರಾಟಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮುಂದಾಗಿರುವ ದೇಶದ ಮುಂಚೂಣಿಯ ಕಂಪನಿ ಟಾಟಾ ಮೋಟಾರ್ಸ್, ತನ್ನ ಅತ್ಯಂತ ಜನಪ್ರಿಯ ಅಗ್ಗದ ನ್ಯಾನೋ ಕಾರಿಗೆ ವಿನೂತನ ಆಫರ್ ಮುಂದಿಟ್ಟಿದೆ.


ಇದರಂತೆ ನಿಮ್ಮ ಬಳಿ ಹಳೆಯ ಬೈಕ್ ಅಥವಾ ಕಾರುಗಳಿದ್ದರೆ ಹೊಸ ನ್ಯಾನೋ ಖರೀದಿ ವೇಳೆ ರಿಯಾಯಿತಿ ದರ ಲಭಿಸಲಿದೆ. ಈ ಮೂಲಕ ಮಾರಾಟವನ್ನು ಉತ್ತೇಜಿಸುವ ಪ್ರಯತ್ನ ಮಾಡಲಾಗುತ್ತಿದೆ. ನೀವು ದ್ವಿಚಕ್ರ ವಾಹನ ಎಕ್ಸ್‌ಚೇಂಜ್ ಮಾಡಲು ಬಯಸಿದ್ದೇ ಆದ್ದಲ್ಲಿ ರು. 15,000ಗಳ ವರೆಗೆ ರಿಯಾಯಿತಿ ದರ ದೊರಕಲಿದೆ. ಹಾಗೆಯೇ ಹಳೆ ಕಾರುಗಳಿಗೆ 40,000 ರು.ಗಳ ವರೆಗೆ ಡಿಸ್ಕೌಂಟ್ ಲಭ್ಯವಾಗುವುದು ಎಂದು ಕಂಪನಿ ತಿಳಿಸಿದೆ. (ವಿ.ಸೂ: ಷರತ್ತು ಅನ್ವಯ)

ಈ ಹಿಂದೆಯೂ ಹಲವು ಆಫರ್‌ಗಳನ್ನು ಮುಂದಿಟ್ಟಿದ್ದರೂ ಗ್ರಾಹಕರನ್ನು ನಿರೀಕ್ಷಿಸಿದಷ್ಟು ಪ್ರಮಾಣದಲ್ಿಲ ಆಕರ್ಷಿಸುವಲ್ಲಿ ನ್ಯಾನೋ ವಿಫಲವಾಗಿತ್ತು. ಹಾಗಿದ್ದರೂ ತೀರಾ ವೈಫಲ್ಯ ಅನುಭವಿಸಿರುವ ಮಾಡೆಲ್ ಅನ್ನು ಮತ್ತೆ ಉತ್ತೇಜಿಸುವ ಪ್ರಯತ್ನ ಮಾಡಲಾಗುತ್ತಿದೆ.

ಅಂದ ಹಾಗೆ ಟಾಟಾ ನ್ಯಾನೋ ಪರಿಷ್ಕೃತ ವರ್ಷನ್ ಸದ್ಯದಲ್ಲೇ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ. ಹಾಗೆಯೇ ಸಿಎನ್‌ಜಿ ಹಾಗೂ ಡೀಸೆಲ್ ವರ್ಷನ್ ನಿಕಟ ಭವಿಷ್ಯದಲ್ಲಿ ಆಗಮನವಾಗಲಿದೆ.

More from DriveSpark

Article Published On: Thursday, June 6, 2013, 12:36 [IST]
English summary
Tata is now offering to buy your old two wheelers or four wheeler in exchange for a cash discount on a new Nano. On exchanging any two wheeler Tata will offer a discount of Rs 15,000 on a new Nano, while exchanging a four wheeler will get you a discount of Rs 40,000. The latter is subjected to conditions.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+