ಬೆಂಗಳೂರಿನಲ್ಲಿ ನಾಳೆ ಟಿ.ಸಿ.ಎಸ್ ವಲ್ಡ್ 10ಕೆ ಓಟದ ಸ್ಪರ್ಧೆ

By Nagaraja

ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆ

ಬೆಂಗಳೂರು ನಗರ - ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ದಿನಾಂಕ 19/05/2013 ರಂದು "ಟಿ.ಸಿ.ಎಸ್ ವಲ್ಡ್ 10ಕೆ ಬೆಂಗಳೂರು- 2013" ಕಾರ್ಯಕ್ರಮವನ್ನು ಬೆಳಗ್ಗೆ 6.30 ಗಂಟೆಯಿಂದ 11-00 ಗಂಟೆಯ ವರೆಗೆ ಏರ್ಪಡಿಸಲಾಗಿರುತ್ತದೆ.

ಈ ಕಾರ್ಯಕ್ರಮದ ಸಂಬಂಧ ಮೇಲ್ಕಂಡ ವೇಳೆಯಲ್ಲಿ ಕಸ್ತೂರ್ಬಾ ರಸ್ತೆ, ಎಂ.ಜಿ. ರಸ್ತೆ (ಅನಿಲ್ ಕುಂಬ್ಳೆ ವೃತ್ತದ ವರೆಗೆ) ಕಬ್ಬನ್ ರಸ್ತೆ, ಕಾಮರಾಜ ರಸ್ತೆ, ಡಿಕನ್ಸನ್ ರಸ್ತೆ, ಹಲಸೂರು ರಸ್ತೆ, ಕ್ವೀನ್ಸ್ ರಸ್ತೆ, ಅಂಬೇಡ್ಕರ್ ವೀದಿ (ಪೂರ್ವ ಭಾಗ) ಮತ್ತು ಗೇಪಾಲಗೌಡ ವೃತ್ತದಿಂದ ಹಡ್ಸನ್ ವೃತ್ತದ ವರೆಗೆ ಇರುವ ಕಬ್ಬನ್ ಪಾರ್ಕ್ ಒಳಗಡೆ ರಸ್ತೆಗಳನ್ನು ಬಳಸಲಾಗುತ್ತದೆ. ಆದುದರಿಂದ ಮೇಲೆ ನಮೂದಿಸಿದ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಬೇಕಾಗಿರುತ್ತದೆ. ಈ ಕಾರ್ಯಕ್ರಮ ಸುಗಮವಾಗಿ ನಡೆಯಲು ಮತ್ತು ಸಾರ್ವಜನಿಕರಿಗೆ ಅನಾನುಕೂಲತೆ ಆಗದಂತೆ ನೋಡಿಕೊಳ್ಳಲು ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಸಲುವಾಗಿ ಈ ಕೆಳಕಂಡಂತೆ ತಾತ್ಕಾಲಿಕವಾಗಿ ಸಂಚಾರ ನಿಯಂತ್ರಣ, ಮಾರ್ಗ ಬದಲಾವಣೆ ಹಾಗೂ ನಿರ್ಬಂಧಗಳನ್ನು ಮಾಡಲಾಗಿದೆ.

T.C.S. World 10k Bangalore-2013: Traffic Arrangements

1. ಕಾರ್ಯಕ್ರಮ ನಡೆಯುವ ಸಮಯದಲ್ಲಿ ಕಸ್ತೂರ್ಬಾ ರಸ್ತೆ, ಎಂ.ಜಿ. ರಸ್ತೆ, (ಅನಿಲ್ ಕುಂಬ್ಳೆ ವೃತ್ತದ ವರೆಗೆ) ಕಬ್ಬನ್ ರಸ್ತೆ, ಕಾಮರಾಜ ರಸ್ತೆ, ಡಿಕನ್ಸನ್ ರಸ್ತೆ, ಹಲಸೂರು ರಸ್ತೆ, ಕ್ವೀನ್ಸ್ ರಸ್ತೆ, ಅಂಬೇಡ್ಕರ್ ವೀದಿ (ಪೂರ್ವ ಭಾಗ) ಮತ್ತು ಗೋಪಾಲಗೌಡ ವೃತ್ತದಿಂದ ಹಡ್ಸನ್ ವೃತ್ತದ ವರೆಗೆ ಇರುವ ಕಬ್ಬನ್ ಪಾರ್ಕ್ ಒಳಗಡೆ ರಸ್ತೆಗಳಲ್ಲಿ ಹೋಗುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

1. ಜೆ.ಸಿ ರಸ್ತೆಯಿಂದ ವಿಧಾನಸೌಧ, ಶಿವಾಜಿನಗರ ಮತ್ತು ರಾಜಭವನ ರಸ್ತೆ ಕಡೆಗೆ ಹೋಗುವವರು ಪೊಲೀಸ್ ಕಾರ್ನರ್- ಕೆ.ಜಿ ರಸ್ತೆ- ಹಳೇ ಅಂಚೆ ಕಚೇರಿ ರಸ್ತೆ, ಕೆ. ಆರ್. ವೃತ್ತದ ಮಾರ್ಗವಾಗಿ ಅಂಬೇಡ್ಕರ್ ವೀದಿ ಮೂಲಕ ಸಾಗಬಹುದಾಗಿದೆ.

3. ಜೆ. ಸಿ. ರಸ್ತೆ ಮತ್ತು ನೃಪತುಂಗ ರಸ್ತೆ ಕಡೆಯಿಂದ ಹಳೆ ಮದ್ರಾಸ್ ರಸ್ತೆ, ಎಂ.ಜಿ.ರಸ್ತೆ, ಹಲಸೂರು, ಮಾರತ್ ಹಳ್ಳಿ ಕಡೆಗೆ ಹೋಗುವವರು ಹಡ್ಸನ್ ವೃತ್ತದಿಂದ ದೇವಾಂಗ ರಸ್ತೆ, ಮಿಷನ್ ರಸ್ತೆ ಮೂಲಕ ಹಾದು ರಿಚಮಂಡ ಮೇಲು ಸೇತುವೆ ಮೂಲಕ ಬಂದು ಅಲ್ಲಿಂದ ರೆಸಿಡೆಸ್ನಿ ರಸ್ತೆಯಲ್ಲಿ ಕ್ಯಾಷ್ ಫಾರ್ಮಸಿ ಮೂಲಕ ಮುಂದಕ್ಕೆ ಸಾಗಬಹುದಾಗಿದೆ.

4. ಶಿವಾಜಿನಗರ ಕಡೆಯಿಂದ ಹೋಗುವ ವಾಹನಗಳು ಬಾಳೆಕುಂದ್ರಿ ವೃತ್ತಕ್ಕೆ ಬಂದು ಅಲ್ಲಿಂದ ಬಲಕ್ಕೆ ತಿರುಗಿ ಕನ್ನಿಂಗ್ ಹ್ಯಾಂ ರಸ್ತೆ ಮೂಲಕ ಚಂದ್ರಿಕಾ ಹೋಟೆಲ್ ವೃತ್ತ, ಎಲ್.ಆರ್ ಡಿ ಐ, ಬಸವೇಶ್ವರ ವೃತ್ತಕ್ಕೆ ಬಂದು ಮುಂದಕ್ಕೆ ಹೋಗಬಹುದು.

5. ಬಾಳೆಕುಂದ್ರಿ ವೃತ್ತದಿಂದ ಬರುವ ವಾಹನಗಳು ಟ್ರಾಫಿಕ್ ಹೆಡ್ ಕ್ವಾರ್ಟರ್ಸ್ ಜಂಕ್ಷನ್‌ನಲ್ಲಿ ಕಡ್ಡಾಯ ಎಡ ತಿರುವು ಪಡೆದು ಇನ್‌ಫೆಂಟ್ರಿ ರಸ್ತೆಮ ಮೂಲಕವೇ ಚಲಿಸುವುದು.

6. ಕೆ. ಆರ್. ವೃತ್ತದಿಂದ ಕಬ್ಬನ್ ಪಾರ್ಕ್ ಒಳಗೆ ವಾಹನಗಳ ಪ್ರವೇಶವಿರುವುದಿಲ್ಲ. ಈ ವಾಹನಗಳು ನೃಪತುಂಗ ರಸ್ತೆ ಮುಖಾಂತರ ಚಲಿಸುವುದು.

7. ಅನಿಲ್ ಕುಂಬ್ಳೆ ವೃತ್ತದಿಂದ ಬರುವ ವಾಹನಗಳು ಕ್ವೀನ್ಸ್ ವೃತ್ತದಲ್ಲಿ ಎಡ ತಿರುವು ಪಡೆದು ಲ್ಯಾವೆಲ್ಲೆ ರಸ್ತೆ ಅಥವಾ ಕರ್ಸೂರ್ಬಾ ರಸ್ತೆಯ ಮೂಲಕವೇ ಚಲಿಸುವುದು.

8. ಅನಿಲ್ ಕುಂಬ್ಳೆ ವೃತ್ತದಲ್ಲಿ ಎಂ.ಜಿ ರಸ್ತೆ ಹಾಗೂ ಸೆಂಟ್ ಮಾರ್ಕ್ಸ್ ರಸ್ತೆಯಿಂದ ಬರುವ ವಾಹನಗಳಿಗೆ ಬಿ.ಆರ್.ವಿ. ರಸ್ತೆ ಕಡೆಗೆ ಪ್ರವೇಶವಿರುವುದಿಲ್ಲ. ಆದ್ದರಿಂದ ಸದರಿ ವಾಹನಗಳು ಕಡ್ಡಾಯವಾಗಿ ನೇರವಾಗಿ ಮತ್ತು ಬಲ ತಿರುವು ಪಡೆದು ಮುಂದಕ್ಕೆ ಸಾಗುವುದು.

9. ಹಳೇ ಮದ್ರಾಸ್ ರಸ್ತೆಯಿಂದ ನಗರಕ್ಕೆ ಪ್ರವೇಶಿಸುವ ಟೆಂಪೊ, ಸರಕು ಸಾಗಾಣಿಕೆ ಹಾಗೂ ಇತರೆ ವಾಹನಗಳು ಸುರಂಜನ್ ದಾಸ್ ರಸ್ತೆ ಮೂಲಕ ಏರ್ ಪೋರ್ಟ್ ರಸ್ತೆ ಸೇರಿ ಮುಂದಕ್ಕೆ ಸಾಗುವುದು. ಅದೇ ತರಹ ಹಲಸೂರು ಕೆರೆ ಕಡೆಯಿಂದ ಸೆಂಟ್ ಜಾನ್ಸ್ ಚರ್ಚ್ ರಸ್ತೆ ಮೂಲಕ ಕಂಟೋನ್ಮೆಂಟ್ ರೈಲ್ವೆ ರಸ್ತೆ, ಜಯಮಹಲ್ ರಸ್ತೆ ಮುಖೇನ ಮೇಖ್ರಿ ವೃತ್ತ ತಲುಪಿ ಮುಂದವರಿಯಬಹುದಾಗಿದೆ.

10. ಕಬ್ಬನ್ ರಸ್ತೆಯಲ್ಲಿ ವಾಹನಗಳ ಸಂಚಾರ ನಿಷೇಧಿಸಿದ್ದು ಇನ್‌ಫೆಂಟ್ರಿ ರಸ್ತೆ ಮತ್ತು ಎಂ.ಜಿ ರಸ್ತೆಯನ್ನು ಬಳಸಿಕೊಳ್ಳುವುದು. ಇನ್‌ಫೆಂಟ್ರಿ ರಸ್ತೆಯಿಂದ ಬರುವ ವಾಹನಗಳು ಡಿಕೆನ್ಸೆನ್ ರಸ್ತೆ, ಸೆಂಟ್ ಜಾನ್ ರಸ್ತೆ, ಗಂಗಾಧರ ಚೆಟ್ಟಿ ರಸ್ತೆ ಮೂಲಕ ಹಾಯ್ದು ಹಳೆ ಮದ್ರಾಸ್ ರಸ್ತೆ ಸೇರುವುದು.

11. ಜೆ.ಸಿ. ರಸ್ತೆಯಲ್ಲಿ ಮಿನರ್ವ ವೃತ್ತದ ಕಡೆಯಿಂದ ಬಂದು ಶಿವಾಜಿನಗರ, ಎಂ.ಜಿ ರಸ್ತೆ, ಹಲಸೂರು ಕಡೆಗೆ ಹೋಗುವ ಎಲ್ಲ ಬಗೆಯ ವಾಹನಗಳಿಗೆ ಜೆ.ಸಿ. ರಸ್ತೆ ಭಾರತ್ ಜಂಕ್ಷನ್‌ನಲ್ಲಿ ಬಲ ತಿರುವು ತೆಗೆದುಕೊಂಡು ಹೆಚ್. ಸಿದ್ದಯ್ಯ ರಸ್ತೆ-ಊರ್ವಶಿ ಚಿತ್ರ ಮಂದಿರ ಜಂಕ್ಷನ್ - ಕೆಂಗಲ್ ಹನುಮಂತಯ್ಯ ರಸ್ತೆಯ (ಡಬಲ್ ರಸ್ತೆ) ರಿಚ್‌ಮಂಡ್ ವೃತ್ತ ಮುಖಾಂತರ ಮುಂದುವರಿಯಬಹುದು.

12. ಹಳೇ ಏರ್ ಪೋರ್ಟ್ ರಸ್ತೆ, ದೊಮ್ಮಲೂರು ಹಾಗೂ ಇತರೆ ಬಡಾವಣೆಗಳಿಂದ ಟ್ರಿನಿಟಿ ವೃತ್ತದ ಮುಖೇನ ಎಂ.ಜಿ. ರಸ್ತೆ ಮೂಲಕ ಸಂಚರಿಸುವ ವಾಹನಗಳನ್ನು ಎ.ಎಸ್. ಸಿ ಸೆಂಟರ್ ಹತ್ತಿರ ನಿರ್ಬಂಧಿಸಿದ್ದು, ಈ ವಾಹನಗಳು ಎ.ಎಸ್.ಸಿ ಮುಖೇನ ಇಂಡಿಯಾ ಗ್ಯಾರೇಜ್, ಪಾಮ್‌ಗ್ರೂವ್ ರಸ್ತೆ ಮಾರ್ಗವಾಗಿ ಡಿಸೋಜ ವೃತ್ತದಿಂದ ರಿಚ್‌ಮಂಡ್ ರಸ್ತೆಯನ್ನು ಸೇರಿ ಮುಂದುವರಿಯಬಹುದಾಗಿದೆ.

13. ಮೇಲೆ ನಮೂದಿಸಿರುವ ಎಲ್ಲಾ ರಸ್ತೆಗಳು ಅಂದರೆ ಕಸ್ತೂರ್ಬಾ ರಸ್ತೆ, ವಿಠಲ್ ಮಲ್ಯ ರಸ್ತೆ, ಆರ್.ಆರ್.ಎಂ.ಆರ್. ರಸ್ತೆ, ಕಬ್ಬನ್ ರಸ್ತೆ, ಕ್ವೀನ್ಸ್ ರಸ್ತೆ, ಕಾಮರಾಜ ರಸ್ತೆ, ಅಂಬೇಡ್ಕರ್ ವೀದಿ, ಕಬ್ಬನ್ ಪಾರ್ಕ್ ಒಳಗಡೆ ರಸ್ತೆ, ಇನ್‌ಫೆಂಟ್ರಿ ರಸ್ತೆಗಳಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

ವಿಶೇಷ ಸೂಚನೆ: ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ತಮ್ಮ ವಾಹನಗಳನ್ನು ಯು.ಬಿ.ಸಿಟಿಯ ಪಾರ್ಕಿಂಗ್ ಆವರಣದಲ್ಲಿ ನಿಲ್ಲಿಸಲು ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಅದೇ ತರಹ ಈ ಕಾರ್ಯಕ್ರಮವನ್ನು ವೀಕ್ಷಿಸಲು ಬರುವ ಸಾರ್ವಜನಿಕರು ಮತ್ತು ತಮ್ಮ ವಾಹನಗಳನ್ನು, ಬನ್ನಪ್ಪ ಪಾರ್ಕ್‌ನಲ್ಲಿ ಮತ್ತು ಮಿಷನ್ ರಸ್ತೆಯ ಸಿ.ಎಸ್.ಐ, ಕಾಂಪೌಂಡಿನೊಳಗೆ ಹಾಗೂ ಕೆ.ಜಿ. ರಸ್ತೆಯ ಎಡ ಪಾರ್ಶದಲ್ಲಿ ತಾತ್ಕಾಲಿಕವಾಗಿ ನಿಲುಗಡೆ ಮಾಡಬಹುದಾಗಿದೆ.

ಮೇಲ್ಕಂಡ ಸಂಚಾರ ಮಾರ್ಪಾಡುಗಳಿಂದ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಲು ಕೋರಲಾಗಿದೆ.

More from DriveSpark

Article Published On: Saturday, May 18, 2013, 12:28 [IST]
English summary
bangalore traffic police, bangalore traffic rules, bangalore, ಬೆಂಗಳೂರು, ಬೆಂಗಳೂರು ಟ್ರಾಫಿಕ್ ಪೊಲೀಸ್, ಬೆಂಗಳೂರು ಟ್ರಾಫಿಕ್ ನಿಯಮ,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+