ರಸ್ತೆಗಿಳಿದಿದೆ ಟೊಯೊಟಾ ಇನ್ನೋವಾ ಫೇಸ್‌ಲಿಫ್ಟ್ ವರ್ಷನ್

By Nagaraja

ದೇಶದ ಅತ್ಯಂತ ಯಶಸ್ವಿ ಮಲ್ಟಿ ಪರ್ಪಸ್ ವಾಹನ (ಎಂಪಿವಿ) ಟೊಯೊಟಾ ಇನ್ನೋವಾದ ಫೇಸ್‌ಲಿಫ್ಟ್ ವರ್ಷನ್ ಇಂಡೋನೇಷ್ಯಾ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದೆ. ನಿಕಟ ಭವಿಷ್ಯದ ಟೊಯೊಟಾ ಇನ್ನೋವಾ ಭಾರತ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎಂಬುದು ವಾಹನ ವಲಯದ ಬ್ರೇಕಿಂಗ್ ನ್ಯೂಸ್ ಆಗಿದೆ.

ಮಹೀಂದ್ರ ಕ್ಸೈಲೋ, ನಿಸ್ಸಾನ್ ಇವಾಲಿಯಾಗಳಂತಹ ಪ್ರತಿಸ್ಪರ್ಧಿಗಳಿದ್ದರೂ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ್ದ ಟೊಯೊಟಾ ಇನ್ನೋವಾ ಎಂಪಿವಿ ಸೆಗ್ಮೆಂಟ್‌ನಲ್ಲಿ ದೇಶದ ಅತ್ಯಂತ ಜನಪ್ರಿಯ ಕಾರೆನಿಸಿಕೊಂಡಿತ್ತು.


ಭಾರತದಲ್ಲಿ ಲಾಂಚ್ ಆದ ಬಳಿಕ ಎರಡು ಬಾರಿ ಫೇಸ್‌ಲಿಫ್ಟ್ ವರ್ಷನ್ ಪರಿಚಯಿಸಲಾಗಿತ್ತು. ಕೊನೆಯ ಬಾರಿ 2012ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗಿತ್ತು. ಇದೀಗ ಮತ್ತೊಂದು ಫೇಸ್‌ಲಿಫ್ಟ್ ವರ್ಷನ್ ಭಾರತ ರಸ್ತೆಗಿಳಿಯಲು ಸಿದ್ಧಗೊಳ್ಳುತ್ತಿದೆ. ಇಂಡೋನೇಷ್ಯಾದಲ್ಲಿ ಕಿಜಾಂಗ್ (kijang) ಎಂದು ಅರಿಯಲ್ಪಡುವ ಇನ್ನೋವಾ ಮತ್ತೆ ಮಾರುಕಟ್ಟೆಗೆ ಬಿಸಿ ಮುಟ್ಟಿಸುವ ತಯಾರಿಯಲ್ಲಿದೆ.

ಚಿತ್ರದಲ್ಲಿ ನೀವು ನೋಡುತ್ತಿರುವಂತೆಯೇ ಹಿಂದಿನ ಇನ್ನೋವಾ ಆವೃತ್ತಿಗಿಂತಲೂ ನೂತನ ವರ್ಷನ್ ತುಂಬಾನೇ ವಿಭಿನ್ನವಾಗಿದೆ. ಇದರ ಫ್ರಂಟ್ ಗ್ರಿಲ್ ಅತ್ಯಧಿಕ ಕ್ರೋಮ್ ಫಿನಿಶಿಂಗ್ ಪಡೆದುಕೊಂಡಿದೆ. ಫಾಗ್ ಲ್ಯಾಂಪ್ ಕೂಡಾ ಹೊಸ ವಿನ್ಯಾಸ ಪಡೆದುಕೂಂಡಿದೆ. ಹಿಂದುಗಡೆಯ ಡೋರ್ ಹ್ಯಾಂಡಲ್ ಸಮೀಪ ಉದ್ದವಾದ ಕ್ರೋಮ್ ಫಿನಿಶಿಂಗ್ ಕೂಡಾ ನೋಡಬಹುದಾಗಿದೆ.


ಇನ್ನು ಎಬಿಎಸ್, ಇಬಿಡಿಗಳಂತಹ ಸುರಕ್ಷತಾ ಮಾನದಂಡಗಳನ್ನು ಟೊಯೊಟಾ ಕಿಜಾಂಗ್ ಆವೃತ್ತಿಯಲ್ಲಿದೆ. ಹಾಗಿದ್ದರೂ ಎಂಜಿನ್ ಆಯ್ಕೆಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. 2014 ದೆಹಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಾಣಲಿರುವ ನೂತನ ಇನ್ನೋವಾ ತದಾ ಬಳಿಕ ಭಾರತ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಗಳಿವೆ.

More from DriveSpark

Article Published On: Wednesday, August 21, 2013, 15:44 [IST]
English summary
India's most successful large MPV, Toyota Innova has carved out a separate market for itself which remains unaffected even with the appearance of new models from competitors. However, every once in awhile Toyota does need to bring out a facelifted version to attract new customer and get back old ones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+