ಹೊಸ ರೂಪ ಪಡೆಯಲಿರುವ ಟೊಯೊಟಾ ಇನ್ನೋವಾ!
ದೇಶದ ಅತ್ಯಂತ ಜನಪ್ರಿಯ ಆವೃತ್ತಿಗಳಲ್ಲಿ ಒಂದಾಗಿರುವ ಟೊಯೊಟಾ ಇನ್ನೋವಾ ಮಲ್ಟಿ ಪರ್ಪಸ್ ವೆಹಿಕಲ್ (ಎಂಪಿವಿ) ಸದ್ಯದಲ್ಲೇ ಹೊಸ ರೂಪ ಪಡೆದುಕೊಳ್ಳಲಿದೆ. ಬಲ್ಲ ಮೂಲಗಳ ಪ್ರಕಾರ ಇಂಡೋನೇಷ್ಯಾದಲ್ಲಿ ಇನ್ನೋವಾ ಫೇಸ್‌ಲಿಫ್ಟ್ ವರ್ಷನ್ ಇದೇ ಬರುವ ಆಗಸ್ಟ್ 19, ಸೋಮವಾರದಂದು ಬಿಡುಗಡೆಯಾಗಲಿದೆ.
ಮುಂಭಾಗದಲ್ಲಿ ಹಾಗೂ ಹಿಂದುಗಡೆ ಪರಿಷ್ಕೃತ ವಿನ್ಯಾಸ ಪಡೆದುಕೊಂಡಿರುವುದು ಇನ್ನೋವಾದ ಪ್ರಮುಖ ಆಕರ್ಷಣೆಯಾಗಿರಲಿದೆ. ಇದಕ್ಕೆ ಪೂರಕವೆಂಬಂತೆ ಇನ್ನೋವಾ ರಹಸ್ಯ ಚಿತ್ರಣಗಳು ಈಗಾಗಲೇ ಬಿಡುಗಡೆಗೊಂಡಿವೆ.
ಹಿಂದಿನ ಆವೃತ್ತಿಗೆ ಹೋಲಿಸಿದರೆ ಹೊಸ ಇನ್ನೋವಾ ಹೆಚ್ಚು ದಿಟ್ಟ ಹಾಗೂ ದೊಡ್ಡದಾದ ಗ್ರಿಲ್ ಪಡೆದುಕೊಂಡಿದೆ. ಹಾಗೆಯೇ ಮಿಡ್ಲ್ ವೆರಿಯಂಟ್‌ಗಳಲ್ಲಿ ಎಬಿಎಸ್ ಹಾಗೂ ಡ್ಯುಯಲ್ ಏರ್ ಬ್ಯಾಗ್ ತಂತ್ರಜ್ಞಾನ ಲಭ್ಯವಾಗುವ ಸಾದ್ಯತೆಗಳಿವೆ.
ಹಾಗಿದ್ದರೂ ಭಾರತೀಯ ಗ್ರಾಹಕರು ನೂತನ ಇನ್ನೋವಾ ಬರಮಾಡಿಕೊಳ್ಳಲು ಇನ್ನು ಸ್ವಲ್ಪ ಸಮಯ ಕಾಯಬೇಕಾಗಿದೆ. ಸದ್ಯ ಬಂದಿರುವ ಮಾಹಿತಿ ಪ್ರಕಾರ ಮುಂದಿನ ವರ್ಷ ಅಂದರೆ 2014 ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳ್ಳಲಿರುವ ಇನ್ನೋವಾ ಭಾರತ ಮಾರುಕಟ್ಟೆ ಪ್ರವೇಶಿಸಲಿದೆ. ಅಂದ ಹಾಗೆ ಆಲ್ ನ್ಯೂ ಇನ್ನೋವಾ 2016ರಲ್ಲಿ ಆಗಮನವಾಗುವ ನಿರೀಕ್ಷೆಯಿದೆ.


Click it and Unblock the Notifications









