ಬಜೆಟ್; ದುಬಾರಿಯಾಗಲಿದೆ ಲಗ್ಷುರಿ, ಎಸ್‌ಯುವಿ ಕಾರು
2013-14ನೇ ಸಾಲಿನ ಕೇಂದ್ರ ಬಜೆಟನ್ನು ಸಂಸತ್ತಿನಲ್ಲಿ ವಿತ್ತ ಸಚಿವ ಪಿ. ಚಿದಂಬರಂ ಮಂಡಿಸಿದ್ದು, ಲಗ್ಷುರಿ ಹಾಗೂ ಎಸ್‌ಯುವಿ ಕಾರುಗಳ ಮೇಲಿನ ಅಬಕಾರಿ ಸುಂಕವನ್ನು ಏರಿಸಿದ್ದಾರೆ.
ಇದರಿಂದಾಗಿ ಏಕ ನೋಟದಲ್ಲೇ ಬಜೆಟ್ ಶ್ರೀಮಂತರ ಮೇಲೆ ನೇರ ಹೊಡೆತ ನೀಡಿದಂತಾಗಿದೆ. ಒಂದು ರೀತಿಯಲ್ಲಿ ಹೇಳುವುದಾದರೆ ಉಳ್ಳವರು ವಾಹನ ಖರೀದಿಸುವಾಗ ಇನ್ನು ಹೆಚ್ಚು ದರ ಸುರಿಯಬೇಕಾಗುತ್ತದೆ.
ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ಹಾಗೂ ಐಷಾರಾಮಿ ವಾಹನಗಳ ಮೇಲಿನ ಅಬಕಾರಿ ಸುಂಕವನ್ನು ಶೇಕಡಾ 27ರಿಂದ 30ರ ವರೆಗೆ ಏರಿಸಲಾಗಿದೆ. ಆದರೆ ಇದರಿಂದ ಟ್ಯಾಕ್ಸಿಗಳಿಗಾಗಿ ನೋಂದಾಯಿಸಿಕೊಂಡ ಎಸ್‌ಯುವಿಗಳಿಗೆ ವಿನಾಯಿತಿ ನೀಡಿರುವುದು ಡ್ರೈವಿಂಗ್ ನಂಬಿಕೊಂಡು ಬದುಕುವ ಜನರು ಸ್ವಲ್ಪ ನಿಟ್ಟಿಸಿರು ಬಿಡುವಂತಾಗಿದೆ.
ಇನ್ನು ಐಷಾರಾಮಿ ವಾಹನಗಳ ಆಮದು ಸುಂಕವನ್ನು ಶೇಕಡಾ 75ರಿಂದ 100ಕ್ಕೆ ಏರಿಸಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಲಗ್ಷುರಿ ಕಾರುಗಳ ದರ ಇನ್ನಷ್ಟು ಏರಿಕೆಯಾಗಲಿದೆ ಎಂಬುದಕ್ಕೆ ಸ್ಪಷ್ಟ ಸಂದೇಶ ಲಭಿಸಿದೆ.
ಈ ನಡುವೆ ಆಟೋ-ಟ್ಯಾಕ್ಸಿ ಚಾಲಕರಿಗೂ ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆ ವಿಸ್ತರಣೆ ಮಾಡಿರುವುದು ಕೇಂದ್ರ ಬಜೆಟ್‌ನ ಧನಾತ್ಮಕ ಅಂಶವಾಗಿದೆ.
ಕೇಂದ್ರ ಬಜೆಟ್ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿರಿ...


Click it and Unblock the Notifications









