ಮಹೀಂದ್ರ ವೆರಿಟೊ ವೈಬ್‌ಗೆ ಬಿತ್ತು ಬ್ರೇಕ್?
ಸಬ್ ಫೋರ್ ಮೀಟರ್ ಪರಿಮಿತಿಯೊಳಗೆ ಆಗಮನವಾಗಿದ್ದ ಮಹೀಂದ್ರ ಆಂಡ್ ಮಹೀಂದ್ರದ ನೂತನ ವೆರಿಟೊ ವೈಬ್ ಮಾರುಕಟ್ಟೆಯಲ್ಲಿ ನಿರೀಕ್ಷಿಸಿದಷ್ಟು ಯಶ ಸಾಧಿಸುವಲ್ಲಿ ವಿಫಲವಾಗಿದೆ. ಜುಲೈ ತಿಂಗಳ ಮಾರಾಟ ಇದನ್ನು ಸಾಬೀತುಪಡಿಸಿದೆ.
ಇತರ ಕಾರುಗಳಿಗಿಂತ ಭಿನ್ನವಾಗಿ ತನ್ನದೇ ಆದ ವಿಶಿಷ್ಟ ವಿನ್ಯಾಸ ಪಡೆದುಕೊಂಡಿದ್ದ ವೆರಿಟೊ ವೈಬ್ ಸೇಲ್ಸ್ ಬಗ್ಗೆ ಭಾರಿ ಕುತೂಹಲ ಮೂಡಿತ್ತು. ಆದರೆ ಸಂಪೂರ್ಣವಾಗಿಯೂ ಗ್ರಾಹಕರ ಮನ ಗೆಲ್ಲುವಲ್ಲಿ ಮಾತ್ರ ವೈಫಲ್ಯತೆಯನ್ನು ಕಂಡಿದೆ.

ಅಂದ ಹಾಗೆ ವೆರಿಟೊ ವೈಬ್ ಕಾಂಪಾಕ್ಟ್ ಸೆಡಾನ್ ಕಾರನ್ನು ಜೂನ್ 5ರಂದು ಬಿಡುಗಡೆಗೊಳಿಸಲಾಗಿತ್ತು. ಹಾಗಿದ್ದರೂ ಜೂನ್ ತಿಂಗಳ ಮಾರಾಟದಲ್ಲಿ ಮಹೀಂದ್ರ ಶೇಕಡಾ 13ರಷ್ಟು ಕುಸಿತ ಅನುಭವಿಸಿತ್ತು. ಎಸ್‌ಯುವಿ ಕಾರುಗಳು ಸಹ ಹಿನ್ನಡೆ ಅನುಭವಿಸಿರುವುದು ಮಹೀಂದ್ರ ಕುಸಿತಕ್ಕೆ ಎಡೆ ಮಾಡಿಕೊಟ್ಟಿತ್ತು.
ಇದು ಜುಲೈ ತಿಂಗಳಲ್ಲೂ ಮುಂದುವರಿದಿದ್ದು ಮಹೀಂದ್ರ ಶೇಕಡಾ 29ರಷ್ಟು ಹಿನ್ನಡೆ ಅನುಭವಿಸಿತ್ತು. ಇವೆಲ್ಲವೂ ಮಾರುಕಟ್ಟೆಯಲ್ಲಿ ವೆರಿಟೊ ವೈಬ್ ಬೇಡಿಕೆ ಕುಸಿತಕ್ಕೆ ಕಾರಣವಾಗುತ್ತಿದೆ. ಅಂದ ಹಾಗೆ ವೆರಿಟೊ ವೈಬ್ ಮುಂಬೈ ಎಕ್ಸ್ ಶೋ ರೂಂ ದರ 5.63 ಲಕ್ಷ ರು.ಗಳಾಗಿವೆ. ಒಟ್ಟು ಮೂರು ವೆರಿಯಂಟ್‌ಗಳಲ್ಲಿ ಮಹೀಂದ್ರ ವೆರಿಟೊ ಆಗಮನವಾಗಿದ್ದು, ಇವೆಲ್ಲದರಲ್ಲೂ ಡೀಸೆಲ್ ಎಂಜಿನ್ ಆಯ್ಕೆ ಲಭ್ಯವಿರುತ್ತದೆ.


Click it and Unblock the Notifications









