ಫೋಕ್ಸ್‌ವ್ಯಾಗನ್ ಪೊಲೊ ಬುಕ್ಕಿಂಗ್ ಆರಂಭ; 29ಕ್ಕೆ ಲಾಂಚ್
ಭಾರತೀಯ ಮಾರುಕಟ್ಟೆಗೆ ಫೋಕ್ಸ್‌ವ್ಯಾಗನ್ ನೂತನ ಪೊಲೊ ಜಿಟಿ ಕಾರನ್ನು ಪರಿಚಯಿಸಲಿದೆ. ಹೊಸ ಕಾರು 2013 ಎಪ್ರಿಲ್ 29ರಂದು ಲಾಂಚ್ ಆಗಲಿದೆ.
ನೂತನ ಆವೃತ್ತಿಯಲ್ಲಿ 1.6 ಬದಲು 1.2 ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಹಾಗೆಯೇ ಬಿಡುಗಡೆ ಮೊದಲೇ ಬುಕ್ಕಿಂಗ್ ಪ್ರಕ್ರಿಯೆ ಆರಂಭಗೊಂಡಿದೆ.
ಫೋಕ್ಸ್‌ವ್ಯಾಗನ್ ಪೊಲೊ ಜಿಟಿ ಮುಂಗಡ ಬುಕ್ಕಿಂಗ್‌ಗಾಗಿ 50,000 ರು. ಪಾವತಿಸಬೇಕಾಗಿದ್ದು, ಮೇ ಮೊದಲ ವಾರದಿಂದ ಕಾರು ನಿಮ್ಮ ಕೈ ಸೇರಲಿದೆ.
ಇದರ 1.2 ಲೀಟರ್ ಟಿಎಸ್‌ಐ ಎಂಜಿನ್ 105 ಹಾರ್ಸ್ ಪವರ್ (175 ಎನ್‌ಎಂ ಟರ್ಕ್ಯೂ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 7 ಸ್ಪೀಡ್ ಆಟೋಮ್ಯಾಟಿಕ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಇರಲಿದೆ.
ಇನ್ನು ದರದ ಬಗ್ಗೆ ಯಾವುದೇ ಮಾಹಿತಿಯನ್ನು ಕಂಪನಿಯು ಬಹಿರಂಗಪಡಿಸಿಲ್ಲ. ಇಂಟಿರಿಯರ್ ಹಾಗೂ ಎಕ್ಸ್‌ಟೀರಿಯರ್ ಭಾಗಗಳು ಅಂದತೆಯನ್ನು ಹೆಚ್ಚಿಸಿದೆ.


Click it and Unblock the Notifications









