ಫೋಕ್ಸ್‌ವ್ಯಾಗನ್‌ನಿಂದಲೂ ಬೆಲೆ ಏರಿಕೆ ಬಿಸಿ
ಜಗತ್ತಿನ ಮುಂಚೂಣಿಯ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಫೋಕ್ಸ್‌ವ್ಯಾಗನ್ ಸಂಸ್ಥೆ ಸಹ ಬೆಲೆ ಏರಿಕೆ ನೀತಿಯನ್ನು ಪ್ರಕಟಿಸಿದೆ. ಪ್ರಸ್ತುತ ದರ ಏರಿಕೆಯು ಮುಂದಿನ ವರ್ಷದಿಂದ ಅನ್ವಯವಾಗಲಿದೆ.
ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಭೇಟಿ ಕೊಡುತ್ತಿರಿ
ಇದರೊಂದಿಗೆ ದೇಶದಲ್ಲಿ ಮಗದೊಂದು ವಾಹನ ತಯಾರಕ ಸಂಸ್ಥೆ ಹೊಸ ವರ್ಷದಲ್ಲಿ ಗ್ರಾಹಕರಿಗೆ ಬೆಲೆ ಏರಿಕೆ ಪೆಟ್ಟು ನೀಡಿದಂತಾಗಿದೆ. ಇತ್ತೀಚೆಗಷ್ಟೇ ಬಿಎಂಡಬ್ಲ್ಯು, ಆಡಿ, ಮರ್ಸಿಡಿಸ್ ಬೆಂಝ್ ಸೇರಿದಂತೆ ದೇಶಿಯ ಕಂಪನಿಗಳು ಸಹ ದರ ಏರಿಕೆಯನ್ನು ಪ್ರಕಟಿಸಿದ್ದವು.

ಫೋಕ್ಸ್‌ವ್ಯಾಗನ್ ಕಾರುಗಳ ದರಗಳಲ್ಲಿ ಶೇಕಡಾ 2.5ರಷ್ಟು ವರ್ಧನೆ ಕಂಡುಬಂದಿದೆ. ಇದು ಜನವರಿ ತಿಂಗಳಿಂದಲೇ ಅನ್ವಯಕ್ಕೆ ಬರಲಿದೆ. ಉತ್ಪಾದನಾ ವೆಚ್ಚ ವರ್ಧಿಸಿರುವುದು, ಮೂಲ ಸಾಮಾಗ್ರಿ ವೆಚ್ಚ ಹೆಚ್ಚಿರುವುದು ದರ ಏರಿಕೆಗೆ ನೀಡಿರುವ ಪ್ರಮುಖ ಕಾರಣವಾಗಿದೆ.
ದರ ಏರಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಕಂಪನಿಯು, ಪ್ರಸ್ತುತ ಮಾರುಕಟ್ಟೆ ಪರಿಸ್ಥಿತಿಯಲ್ಲಿ ಬೆಲೆ ಏರಿಕೆ ಅನಿವಾರ್ಯವಾಗಿದೆ. ಹಾಗಿದ್ದರೂ ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನ ನೀಡುವುದರಲ್ಲಿ ಕಂಪನಿ ಸದಾ ಬದ್ಧವಾಗಿರುತ್ತದೆ ಎಂದಿದೆ.
ದರ ಏರಿಕೆ ಘೋಷಿಸಿರುವ ಇತರ ಸಂಸ್ಥೆಗಳು: ಬಿಎಂಡಬ್ಲ್ಯು, ಆಡಿ, ಮರ್ಸಿಡಿಸ್ ಬೆಂಝ್, ಮಾರುತಿ, ಮಹೀಂದ್ರ, ಹ್ಯುಂಡೈ, ಹೋಂಡಾ, ನಿಸ್ಸಾನ್, ರೆನೊ ಹಾಗೂ ಟಾಟಾ ಮೋಟಾರ್ಸ್.


Click it and Unblock the Notifications








