ವೋಲ್ವೋ ಮಡಚಬಹುದಾದ ಸೋಲರ್ ಪ್ಯಾನೆಲ್ ಕಾರು
ಇಂಧನ ಬೆಲೆ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿರುವ ಹಿನ್ನಲೆಯಲ್ಲಿ ಕಾರು ಕಂಪನಿಗಳು ಇತರ ಬದಲಿ ವ್ಯವಸ್ಥೆಗಳನ್ನು ಹುಡುಕಾಟದಲ್ಲಿವೆ. ಇದರಲ್ಲಿ ಪ್ರಮುಖವಾದುದು ವಿದ್ಯುತ್ ಚಾಲಿತ ಕಾರು, ಹೈಬ್ರಿಡ್ ಕಾರು ಹಾಗೂ ಸೂರ್ಯ ಶಾಖದಿಂದ ನೇರವಾಗಿ ಚೈತನ್ಯ ಪಡೆದುಕೊಳ್ಳಬಹುದಾದ ಸೋಲರ್ ಕಾರುಗಳು.
ಈ ಪೈಕಿ ಸೋಲರ್ ಕಾರುಗಳ ನಿರ್ಮಾಣ ಪ್ರಾಯೋಗಿಕವಾಗಿ ಕಠಿಣ ಅನಿಸಿದರೂ ಆಟೋ ಎಂಜಿನಿಯರ್‌ಗಳ ನಿರಂತರ ಅಧ್ಯಯನದಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದಾರೆ.
ಇದರಂತೆ ಜರ್ಮನಿ ಮೂಲಕ ಪ್ರಮುಕ ಕಾರು ತಯಾರಕ ಸಂಸ್ಥೆ ವೋಲ್ವೋ, ಮಡಚಬಹುದಾದ ಸೋಲರ್ ಪ್ಯಾನೆಲ್ ಕಾರನ್ನು ಅನಾವರಣಗೊಳಿಸಲಿದೆ. ವೋಲ್ವೋ ವಿ60 ಹೈಬ್ರಿಡ್ ಎಲೆಕ್ಟ್ರಿಕ್ ಕಾರಿನಲ್ಲಿ ಲಗತ್ತಿಸಲಾಗಿದೆ.
ಸೆಪ್ಟೆಂಬರ್ ತಿಂಗಳಲ್ಲಿ ರೋಮ್ ಕಾರು ಪ್ರಿಯರು ಈ ತಂತ್ರಜ್ಞಾನದ ಬಗ್ಗೆ ಹೆಚ್ಚು ಮಾಹಿತಿ ಪಡೆಯುವ ಅವಕಾಶ ಗಿಟ್ಟಿಸಿಕೊಳ್ಳಲಿದ್ದಾರೆ. ಇದರಲ್ಲಿ ಹಗುರ ಭಾರದ ಎಚ್‌ಡಿಪಿ ಮೆಶ್ ಸ್ಕಿನ್ ಸೋಲರ್ ಪ್ಯಾನೆಲ್ ಇರಲಿದ್ದು, ಸೂರ್ಯ ಶಾಖವನ್ನು ಹೀರಿಕೊಳ್ಳಲಿದೆ. ಇದು ಕಾರ್ಬನ್ ಫೈಬರ್‌ನಿಂದ ಸುತ್ತುವರಿದಿದ್ದು, ಸುಲಭವಾಗಿ ಮಡಚಬಹುದಾಗಿದೆ.


Click it and Unblock the Notifications









