ಆಲ್ಟೊ 'ಗೋಲ್'ಮಾಲ್; ನಂ.1 ಸ್ಥಾನದಿಂದ ಔಟ್

By Nagaraja

ಕಳೆದೊಂದು ದಶಕದಲ್ಲಿ ದೇಶದ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಾರುತಿ ಸುಜುಕಿ ಸಣ್ಣ ಕಾರಾದ ಆಲ್ಟೊಗೆ ನಂ.1 ನಷ್ಟವಾಯಿತೇ ಎಂಬ ವಿಚಾರ ನಿಮ್ಮಲ್ಲಿ ಆಶ್ಚರ್ಯಕ್ಕೆ ಕಾರಣವಾಗಿರಬಹದು.

ಆದರೆ ನಿಮ್ಮ ಮಾಹಿತಿಗಾಗಿ, ಮಾರುತಿಗೆ ನಂ.1 ನಷ್ಟವಾಗಿರುವುದು ದೇಶದ ಮಾರುಕಟ್ಟೆಯಲ್ಲಲ್ಲ. ಬದಲಾಗಿ ಜಾಗತಿಕ ಮಾರುಕಟ್ಟೆಯನ್ನು ಆಧಾರವಾಗಿಟ್ಟುಕೊಂಡು ಈ ವರದಿ ಬಿಡುಗಡೆಗೊಂಡಿದೆ.

ಕಳೆದ ಎರಡು ವರ್ಷಗಳಲ್ಲಿ ಅಗ್ರಸ್ಥಾನ ಆಲಂಕರಿಸಿರುವ ಮಾರುತಿ ಆಲ್ಟೊವನ್ನು ಹಿಂದಿಕ್ಕಿರುವ ಫೋಕ್ಸ್‌ವ್ಯಾಗನ್ ಗೋಲ್ ನಂ.1 ಸ್ಥಾನಕ್ಕೇರಿದೆ. ಪ್ರಸ್ತುತ ಕಾರು ಬ್ರೆಜಿಲ್‌ನಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿದೆ.

2010ರಲ್ಲಿ ಜಾಗತಿಕವಾಗಿ ಅತಿ ಹೆಚ್ಚು ಮಾರಾಟಗೊಂಡಿದ್ದ ಮಾರುತಿ ಆಲ್ಟೊ 2011ನೇ ಸಾಲಿನಲ್ಲೂ ಈ ಸ್ಥಾನವನ್ನು ಉಳಿಸಿಕೊಂಡಿತ್ತು. ಆದರೆ 2012ರಲ್ಲಿ ಆಲ್ಟೊ ಪಾಲಿಗೆ ಹಿನ್ನಡೆಯಾಗಿದೆ. ಪೆಟ್ರೋಲ್ ದರ ಏರಿಕೆ ಕಂಡಿರುವುದು ಹಾಗೂ ಡೀಸೆಲ್ ಕಾರುಗಳ ಬೇಡಿಕೆ ಹೆಚ್ಚಳಗೊಂಡಿರುವುದ ಆಲ್ಟೊ ಮಾರಾಟ ಶೇಕಡಾ 9.28ರಷ್ಟು ಕುಸಿಯಲು ಕಾರಣವಾಗಿತ್ತು. 2012ನೇ ಸಾಲಿನಲ್ಲಿ ಮಾರುತಿಯ ಆಲ್ಟೊ 286,833 ಯುನಿಟ್‌ಗಳು ಮಾರಾಟವಾಗಿದ್ದವು.

ಅಂದ ಹಾಗೆ ಇದು ಮೊದಲ ಬಾರಿಯೇನಲ್ಲ ಫೋಕ್ಸ್‌ವ್ಯಾಗನ್ ಗೋಲ್ ಅಗ್ರಸ್ಥಾನ ವಶಪಡಿಸಿಕೊಳ್ಳುತ್ತಿರುವುದು. ಈ ಹಿಂದೆಯೇ ಅಗ್ರಸ್ಥಾನ ಆಲಂಕರಿಸಿದ್ದ ಗೋಲ್ 2012 ಸಾಲಿನಲ್ಲಿ ಒಟ್ಟು 293,293 ಯುನಿಟ್ ಮಾರಾಟದ ದಾಖಲೆ ಮಾಡಿದೆ.

ಜಾಗತಿಕವಾಗಿ ಅತಿ ಹೆಚ್ಚು ಮಾರಾಟವಾದ ಕಾರುಗಳ ಪೈಕಿ ಮೂರನೇ ಸ್ಥಾನವನ್ನು ಫಿಯೆಟ್ ಯುನೊ ಪಡೆದುಕೊಂಡಿದೆ. ಇದು ಕೂಡಾ ಬ್ರೆಜಿಲ್‌ನಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿದ್ದು, ಫೋಕ್ಸ್‌ವ್ಯಾಗನ್ ಗೋಲ್ ನಂತರದ ಸ್ಥಾನದಲ್ಲಿದೆ. ಫಿಯೆಟ್ ಯುನೊ 2012ನೇ ಸಾಲಿನಲ್ಲಿ 255,838 ಕಾರುಗಳು ಮಾರಾಟವಾಗಿವೆ.

2012ನೇ ಅವಧಿ ಆಲ್ಟೊ ಪಾಲಿಗೆ ಕೆಟ್ಟದಾಗಿತ್ತು ಎಂಬುದನ್ನು ಮಾರುತಿ ಸುಜುಕಿ ಒಪ್ಪಿಕೊಂಡಿದೆ. ಆದರೆ ಆಲ್ಟೊ ನೂತನ ಆವೃತ್ತಿ ಬಿಡುಗಡೆಯ ಬೆನ್ನಲ್ಲೇ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಕಂಡುಬಂದಿದ್ದು, 2013ನೇ ಸಾಲಿನಲ್ಲೂ ಇದನ್ನು ಮುಂದುವರಿಸುವ ವಿಶ್ವಾಸ ಹೊಂದಿದೆ.

ಫೋಕ್ಸ್‌ವ್ಯಾಗನ್ ಗೋಲ್

ಫೋಕ್ಸ್‌ವ್ಯಾಗನ್ ಗೋಲ್

ಇಡೀ ವಿಶ್ವದಲ್ಲಿ ಕ್ಷಿಪ್ರ ಗತಿಯಲ್ಲಿ ಬೆಳೆದು ಬರುತ್ತಿರುವ ಬ್ರೆಜಿಲ್ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡಿರುವ ಫೋಕ್ಸ್‌ವ್ಯಾಗನ್ ಗೋಲ್ ಜಾಗತಿಕವಾಗಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಫೋಕ್ಸ್‌ವ್ಯಾಗನ್ ಗೋಲ್

ಫೋಕ್ಸ್‌ವ್ಯಾಗನ್ ಗೋಲ್

1987ನೇ ಇಸವಿಯಿಂದ ಬ್ರೆಜಿಲ್‌ನಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಎಂಟ್ರಿಲ್ ವೆವೆಲ್ ಬೀಟ್ಲ್ ಕಾರನ್ನು ಹಿಂದಿಕ್ಕಿದ್ದ ಫೋಕ್ಸ್‌ವ್ಯಾಗನ್ ಗೋಲ್ ಅಗ್ರಸ್ಥಾನ ವಶಪಡಿಸಿಕೊಂಡಿತ್ತು.

ಮಾರುತಿ ಆಲ್ಟೊ

ಮಾರುತಿ ಆಲ್ಟೊ

ಇನ್ನು ಆಲ್ಟೊ ಬಗ್ಗೆ ಹೇಳುವುದಾದರೆ ಕಳೆದೊಂದು ದಶಕದಲ್ಲಿ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಕಾರು ಎಂಬ ಗೌರವವನ್ನು ಆಲ್ಟೊ ಹೊಂದಿದೆ. 2012ನೇ ಸಾಲಿನಲ್ಲಿ ಮಾರಾಟ ಕುಸಿತ ಅನುಭವಿಸಿದ್ದರ ಹೊರತಾಗಿಯೂ ನಂ. 1 ಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೆ ಆಲ್ಟೊ ಆವೃತ್ತಿ ಉತ್ತೇಜನ ನೀಡುವಲ್ಲಿ ನೆರವಾಗಿತ್ತು.

ಮಾರುತಿ ಆಲ್ಟೊ

ಮಾರುತಿ ಆಲ್ಟೊ

2012ನೇ ಸಾಲಿನ ಅಂತ್ಯದ ವೇಳೆಯಲ್ಲಿ ಆಲ್ಟೊ 800 ಪರಿಷ್ಕೃತ ಆವೃತ್ತಿಯನ್ನು ಮಾರುತಿ ಬಿಡುಗಡೆಗೊಳಿಸಿತ್ತು. ಅಲ್ಲದೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಫಿಯೆಟ್ ಯುನೊ

ಫಿಯೆಟ್ ಯುನೊ

ವಿಶ್ವದ ಅತಿ ಹೆಚ್ಚು ಮಾರಾಟವಾಗುವ ಕಾರುಗಳ ಪೈಕಿ ಫಿಯೆಟ್ ಯುನೊ ಮೂರನೇ ಸ್ಥಾನ ಪಡೆದಿದೆ. 2012ನೇ ಸಾಲಿನಲ್ಲಿ ಫಿಯೆಟ್ ಯುನೊ 255,838 ಕಾರುಗಳು ಮಾರಾಟವಾಗಿದ್ದವು.

ಫಿಯೆಟ್ ಯುನೊ

ಫಿಯೆಟ್ ಯುನೊ

ಫಿಯೆಟ್ ಯುನೊಗೆ ಜಾಗತಿಕವಾಗಿ ಉತ್ತಮ ಮಾರುಕಟ್ಟೆಯಿದ್ದರೂ ಬ್ರೆಜಿಲ್‌ನಲ್ಲಿ ಫೋಕ್ಸ್‌ವ್ಯಾಗನ್ ಗೋಲ್ ನಂತರದ ಸ್ಥಾನ ಪಡೆದುಕೊಂಡಿದೆ.

World's 3 Best Selling Cars

ಜಾಗತಿಕ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಕಾರುಗಳು

More from DriveSpark

Article Published On: Thursday, January 10, 2013, 11:42 [IST]
English summary
The Maruti Suzuki Alto, India's best selling car, is no longer the world's best selling car. The Indian small car which occupied the top spot for two years has been overtaken by the Volkswagen Gol, Brazil's best selling car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+