ಅಬುದಾಬಿ ಶೇಖ್ ಬಳಿಯಿದೆ ವಿಶ್ವದ ಅತಿದೊಡ್ಡ ಟ್ರಕ್
ಆಟೋ ಮೊಬೈಲ್ ಜಗತ್ತಿನ ವಿಸ್ಮಯಕಾರಿ ಸುದ್ದಿಗಳನ್ನು ಓದುಗರಿಗೆ ನೀಡುವುದರಲ್ಲಿ ಸದಾ ಒಂದು ಹೆಜ್ಜೆ ಮುಂದಿರುವ ನಮ್ಮ ಡ್ರೈವ್ ಸ್ಪಾರ್ಕ್ ತಂಡವು ಮತ್ತೊಂದು ರೋಚಕ ಸುದ್ದಿಯನ್ನು ಪ್ರಸ್ತುತ ಪಡಿಸುತ್ತಿದೆ.
ನಾವಿಂದು ಮಾತನಾಡುತ್ತಿರುವುದು ವಿಶ್ವದ ಅತಿ ದೊಡ್ಡ ಟ್ರಕ್ ಬಗ್ಗೆ. ಇದಕ್ಕಾಗಿ ನೀವೆಲ್ಲರು ಅಬುದಾಬಿಗೆ ತೆರಳಬೇಕಾದ ಅಗತ್ಯವಿದೆ. ದೇಶದ ಜನಸಂಖ್ಯೆಯ ಒಂದು ಪಾಲು ಜನರು ತಮ್ಮ ದೈನಂದಿನ ಜೀವನೋಪಯಕ್ಕಾಗಿ ವಿದೇಶಗಳನ್ನು ಆಶ್ರಯಿಸಿಕೊಂಡಿದ್ದಾರೆ. ಈ ಪೈಕಿ ಅರಬ್ ರಾಷ್ಟ್ರ ಕೂಡಾ ಪ್ರಮುಖವಾಗಿದೆ.
ವಿಷಯಕ್ಕೆ ಬರೋಣ, ವಿಶ್ವದ ಅತಿ ದೊಡ್ಡ ಟ್ರಕ್ ಅಬುದಾಬಿಯ ಶೇಖ್ ಹಮಾದ್ ಬಿನ್ ಅಲ್ ನಹ್ಯಾನ್ ಬಳಿಯಿದೆ. ಇದನ್ನು ಡಾಡ್ಜ್ ಪವರ್ ವಾಗನ್‌ನ (Dodge Power Wagon) ನಕಲು ಪ್ರತಿಯೆಂದೇ ವಿಶ್ಲೇಷಿಸಬಹುದು. ಆದರೆ ಆಕಾರ ಮಾತ್ರ ಎಂಟು ಪಟ್ಟು ದೊಡ್ಡದಾಗಿದೆ.
ಇನ್ನು ವಿಶೇಷದ ಸಂಗತಿ ಏನೆಂದರೆ ಶೇಖ್ ಹಮಾದ್ ಬಿನ್ ಅಲ್ ನಹ್ಯಾನ್ ಅವರನ್ನು ಪ್ರೀತಿಯಿಂದ ರೈನ್‌ಬೋ ಶೇಖ್ ಎಂದು ಕರೆಯುತ್ತಾರೆ. ಯಾಕೆಂದರೆ ಅವರಿಗೆ ಈ ಹೆಸರು ಬಂದಿರುವ ಹಿಂದೆ ಕುತೂಹಲಕಾರಿ ಸ್ಟೋರಿ ಅಡಗಿದೆ. ಹಿಂದೊಮ್ಮೆ ಮರ್ಸಿಡಿಸ್ ಬೆಂಝ್ ಸೆಡಾನ್ ಖರೀದಿಸಿದ್ದ ಅವರು ಕಾಮನಬಿಲ್ಲು ಸಂಕೇತವಾದ ಏಳು ವರ್ಣಗಳನ್ನು ಕಾರಿಗೆ ಬಳಿದಿದ್ದರು. ಅಲ್ಲಿಂದ ಬಳಿಕ ರೈನ್‌ಬೋ ಶೇಖ್ ಎಂದೇ ಜನಪ್ರಿಯವಾಗಿದ್ದರು.

ವಿಶ್ವದ ಅತಿ ದೊಡ್ಡ ಟ್ರಕ್
ಅಬುದಾಬಿಯ ಶೇಖ್ ಹಮಾದ್ ಬಿನ್ ಅಲ್ ನಹ್ಯಾನ್ ಅಥವಾ ರೈನ್‌ಬೋ ಶೇಖ್ ಗ್ಯಾರೇಜ್ ಬಳಿ 200ಕ್ಕೂ ಹೆಚ್ಚು ಕಾರು ಕಲೆಕ್ಷನ್‌ಗಳಿವೆ. ಇದಕ್ಕೆ ವಿಶ್ವದ ಅತಿ ದೊಡ್ಡ ಟ್ರಕ್ ಸೇರ್ಪಡೆಗೊಳಿಸುವ ಮೂಲಕ ತಮ್ಮ ನಾಮವನ್ನುಗಿನ್ನೆಸ್ ಪುಟಕ್ಕೆ ಹೆಸರಿಸಿದ್ದಾರೆ.

ವಿಶ್ವದ ಅತಿ ದೊಡ್ಡ ಟ್ರಕ್
ಪಿರಾಮಿಡ್ ಆಕಾರದಲ್ಲಿ ನಿರ್ಮಾಣಗೊಂಡಿರುವ ಎಮಿರೇಟ್ಸ್ ನ್ಯಾಷನಲ್ ಆಟೋ ಮ್ಯೂಸಿಯಂನಲ್ಲಿ ಈ ಎಲ್ಲ ಕಾರುಗಳ ಪ್ರದರ್ಶನ ಲಭ್ಯವಿದೆ.

ವಿಶ್ವದ ಅತಿ ದೊಡ್ಡ ಟ್ರಕ್
ಅಂದ ಹಾಗೆ ವಿಶ್ವದ ಅತಿ ದೊಡ್ಡ ಟ್ರಕ್‌ನ ಭಾರ 50 ಟನ್ ಆಗಿದೆ. ಹಾಗೆಯೇ ಎಲ್ಲ ಐಷಾರಾಮಿ ಸೌಲಭ್ಯಗಳನ್ನು ಆಳವಡಿಸುವ ಪ್ರಯತ್ನ ಮಾಡಲಾಗಿದ್ದು, ನಾಲ್ಕು ದೊಡ್ಡದಾದ ಎಸಿ ಬೆಡ್ ರೂಂಗಳು, ಲಿವಿಂಗ್ ರೂಂ, ಶೌಚಾಲಯ ಹಾಗೂ ತೆರೆದ ಬೆಡ್ ಸೌಲಭ್ಯವನ್ನು ಹೊಂದಿದೆ.

ವಿಶ್ವದ ಅತಿ ದೊಡ್ಡ ಟ್ರಕ್
ಇಷ್ಟೊಂದು ಭಾರವಿರುವ ಟ್ರಕ್ ಅನ್ನು ಮ್ಯೂಸಿಯಂನೊಳಗೆ ಕೊಂಡೊಯ್ಯುವುದು ಕಷ್ಟ ಎಂದು ಅಂದುಕೊಂಡಿದ್ದರೆ ತಪ್ಪಾದಿತು. ಯಾಕೆಂದರೆ ಆರಂಭದಲ್ಲಿ ಮ್ಯೂಸಿಯಂ ಹೊರಗಡೆ ತಯಾರಿಸಲಾಗಿದ್ದ ಟ್ರಕ್ ಬಳಿಕವಷ್ಟೇ ಒಳಗಡೆ ಕೊಂಡೊಯ್ಯಲಾಗಿತ್ತು.

Dodge Power Wagon
ಇದುವೇ ನಿಜವಾದ Dodge Power Wagon ಟ್ರಕ್ ಆಗಿದ್ದು, ಇದರ ಆಧಾರದಲ್ಲಿ ಶೇಖ್ ಟ್ರಕ್ ನಿರ್ಮಾಣವಾಗಿದೆ.

Dodge Power Wagon
ನೈಜ ಡಾಡ್ಜ್ ಪವರ್ ವಾಗನ್‌ಕ್ಕಿಂತಲೂ ಶೇಖ್ ಅವರ ಈ ಅದ್ದೂರಿ ಟ್ರಕ್, ಎಂಟು ಪಟ್ಟು ದೊಡ್ಡದಾಗಿದೆ.

Dodge Power Wagon
ನಿಜವಾದ Dodge Power Wagon ಆರು ಸಿಲಿಂಡರ್ ಎಂಜಿನ್ ಹೊಂದಿದ್ದು, 300 ಬಿಎಚ್‌ಪಿ ಪವರ್ ಉತ್ಪಾದಿಸುವ ಸಾಮರ್ಥ್ಯವಿದೆ.

ನೂತನ ಕಾನ್ಸೆಪ್ಟ್
ಇದು Dodge Power Wagonನಿಂದ ಆಗಮನವಾಗಿರುವ ನೂತನ ಕಾನ್ಸೆಪ್ಟ್
ವಿಶ್ವದ ಅತಿ ದೊಡ್ಡ ಟ್ರಕ್
ಇಲ್ಲಿ ಕೊಡಲಾಗಿರುವ ವೀಡಿಯೋ ಚಿತ್ರಣ ಮೂಲಕ ಅಬುದಾಬಿ ಶೇಖ್ ಟ್ರಕ್ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಪ್ರಯತ್ನಿಸಿ. ಅಂತೆಯೇ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಲು ಮರೆಯದಿರಿ.

ಪಿರಾಮಿಡ್ ಆಕಾರದಲ್ಲಿರುವ ರೈನ್‌ಬೋ ಶೇಖ್‌ನ ಕಾರು ಮ್ಯೂಸಿಯಂ

ಅಬುದಾಬಿ ಶೇಖ್‌ನ ರೈನ್‌ಬೋ ಕಾರು

ರೈನ್‌ಬೋ ಶೇಖ್‌ನ ಕಾರು ಕಲೆಕ್ಷನ್


ಸಕತ್ ಕಲೆಕ್ಷನ್

ಸಕತ್ ಕಲೆಕ್ಷನ್

ಸಕತ್ ಕಲೆಕ್ಷನ್

ಸಕತ್ ಕಲೆಕ್ಷನ್

ಸಕತ್ ಕಲೆಕ್ಷನ್

ಸಕತ್ ಕಲೆಕ್ಷನ್

ಸಕತ್ ಕಲೆಕ್ಷನ್

ಸಕತ್ ಕಲೆಕ್ಷನ್

ಸಕತ್ ಕಲೆಕ್ಷನ್

ಸಕತ್ ಕಲೆಕ್ಷನ್

ಸಕತ್ ಕಲೆಕ್ಷನ್

ಸಕತ್ ಕಲೆಕ್ಷನ್

ಸಕತ್ ಕಲೆಕ್ಷನ್

ಸಕತ್ ಕಲೆಕ್ಷನ್

ಸಕತ್ ಕಲೆಕ್ಷನ್

ಸಕತ್ ಕಲೆಕ್ಷನ್

ಸಕತ್ ಕಲೆಕ್ಷನ್

ಸಕತ್ ಕಲೆಕ್ಷನ್

ಸಕತ್ ಕಲೆಕ್ಷನ್

ಸಕತ್ ಕಲೆಕ್ಷನ್

ಸಕತ್ ಕಲೆಕ್ಷನ್

ಸಕತ್ ಕಲೆಕ್ಷನ್


Click it and Unblock the Notifications








