2014 ಆಸ್ಟನ್ ಮಾರ್ಟಿನ್ ರ‌್ಯಾಪಿಡ್ ಎಸ್ ಫಸ್ಟ್ ಲುಕ್
ದೇಶದಲ್ಲಿರುವ ಆಸ್ಟನ್ ಮಾರ್ಟಿನ್ ಗ್ರಾಹಕರಿಗೆ ಶುಭ ಸುದ್ದಿ ಬಂದು ತಲುಪಿದ್ದು, ಮುಂದಿನ ವರ್ಷದಲ್ಲಿ ವಿಶ್ವದ ಅತಿ ಸೊಗಸಾದ ಫೋರ್ ಡೋರ್ ಸ್ಪೋರ್ಟ್ಸ್ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರ‌್ಯಾಪಿಡ್ ಎಸ್ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.
ಪ್ರಸಕ್ತ ಬಂದಿರುವ ಮಾಹಿತಿ ಪ್ರಕಾರ 2014ನೇ ಸಾಲಿನ ಮೊದಲಾರ್ಧದಲ್ಲಿ ಆಸ್ಟನ್ ಮಾರ್ಟಿನ್ ರ‌್ಯಾಪಿಡ್ ಎಸ್ ಮಾರುಕಟ್ಟೆಗೆ ತಲುಪಲಿದೆ. ಅಂತೆಯೇ ಬ್ರಿಟನ್ ವಾಹನ ತಯಾರಕ ಕಂಪನಿಯು ಈಗಾಗಲೇ ರ‌್ಯಾಪಿಡ್ ಎಸ್ ಕಾರನ್ನು ಅನಾವರಣಗೊಳಿಸಿದೆ.
ದೇಶದಲ್ಲಿರುವ ರ‌್ಯಾಪಿಡ್ ಆವೃತ್ತಿಯನ್ನು ರ‌್ಯಾಪಿಡ್ ಎಸ್ ಹಿಮ್ಮೆಟ್ಟಿಸಲಿದೆ. ಅನೇಕ ಆಧುನಿಕ ಸೌಲಭ್ಯಗಳು ಈ ಪುರಾತನ ಕಾರು ತಯಾರಕ ಕಂಪನಿಯ ಪ್ರಮುಖ ಅಂಶವಾಗಿರಲಿದೆ.

2014 ಆಸ್ಟನ್ ಮಾರ್ಟಿನ್ ರ‌್ಯಾಪಿಡ್ ಎಸ್
ಆಸ್ಟನ್ ಮಾರ್ಟಿನ್ 2014 ಕಾರು ಪೋರ್ಷೆ ಟರ್ಬೊ, ರೋಲ್ಸ್ ರಾಯ್ಸ್‌ಗಳಂತಹ ಕಾರುಗಳಿಗೆ ಪ್ರಬಲ ಪೈಪೋಟಿ ನೀಡುವ ಸಾಧ್ಯತೆಯಿದ್ದು, ಭಾರತೀಯ ರುಪಾಯಿ ಪ್ರಕಾರ ಮೂರು ಕೋಟಿ ಅಸುಪಾಸಿನಲ್ಲಿರಲಿದೆ.

2014 ಆಸ್ಟನ್ ಮಾರ್ಟಿನ್ ರ‌್ಯಾಪಿಡ್ ಎಸ್
ಆಸ್ಟನ್ ಮಾರ್ಟಿನ್ ರ‌್ಯಾಪಿಡ್ ಎಸ್ 550 ಎಚ್‌ಪಿ, 6.0 ಲೀಟರ್ ವಿ-12 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.

2014 ಆಸ್ಟನ್ ಮಾರ್ಟಿನ್ ರ‌್ಯಾಪಿಡ್ ಎಸ್
ಖಂಡಿತವಾಗಿಯೂ ಈ ಐಷಾರಾಮಿ ಕಾರು ನಿಮ್ಮ ಮನದಲ್ಲಿ ಆನಂದಕ್ಕೆ ಕಾರಣವಾಗಲಿದೆ. ಅಲ್ಲದೆ ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರಲಿದೆ.

2014 ಆಸ್ಟನ್ ಮಾರ್ಟಿನ್ ರ‌್ಯಾಪಿಡ್ ಎಸ್
ಆಸ್ಟನ್ ಮಾರ್ಟಿನ್ ರ‌್ಯಾಪಿಡ್ ಎಸ್ ಐಷಾರಾಮಿ ಫೀಚರ್‌ಗಳೊಂದಿಗೆ ಆಗಮನವಾಗಿದ್ದು, ಫೋರ್ ಸೀಟ್ ಇಂಟಿರಿಯರ್ ಹೆಚ್ಚು ಆಕರ್ಷಣೆ ನೀಡುವಂತಾಗಿದೆ.

2014 ಆಸ್ಟನ್ ಮಾರ್ಟಿನ್ ರ‌್ಯಾಪಿಡ್ ಎಸ್
0ರಿಂದ 100 ಕೀ. ಮೀ. ದೂರವನ್ನು ಕೇವಲ 4.7 ಸೆಕೆಂಡುಗಳಲ್ಲಿ ವೇಗವರ್ಧಿಸುವ ಸಾಮರ್ಥ್ಯವನ್ನು ರ‌್ಯಾಪಿಡ್ ಎಸ್ ಹೊಂದಿದೆ.

2014 ಆಸ್ಟನ್ ಮಾರ್ಟಿನ್ ರ‌್ಯಾಪಿಡ್ ಎಸ್
ನೀವು ಆಸ್ಟನ್ ಮಾರ್ಟಿನ್ ಅಭಿಮಾನಿಯಾಗಿದ್ದರೆ ಖಂಡಿತ ಇದರ ವೈಶಿಷ್ಟ್ಯಗಳು ನಿಮ್ಮ ಗಮನ ಸೆಳೆಯಬಹುದು, ಅಲ್ಲವೇ?


Click it and Unblock the Notifications








