ನಿಮ್ಮ ನಿರೀಕ್ಷೆ ಮುಟ್ಟಿತೇ 2014 ಫೋರ್ಡ್ ಫಿಯೆಸ್ಟಾ?
ನಿಮಗೆಲ್ಲರಿಗೂ ತಿಳಿದಿರುವಂತೆಯೇ ಕಳೆದ ಫೆಬ್ರವರಿ ತಿಂಗಳಲ್ಲಿ ಸಾಗಿದ 2014 ಆಟೋ ಎಕ್ಸ್ ಪೋದಲ್ಲಿ 2014 ಫೋರ್ಡ್ ಫಿಯೆಸ್ಟಾ ಕಾರನ್ನು ಅನಾವರಣಗೊಳಿಸಲಾಗಿತ್ತು. ಇದರ ಬೆನ್ನಲ್ಲೇ ಸಂಸ್ಥೆಯ ಭಾರತದ ಅಧಿಕೃತ ವೆಬ್‌ಸೈಟ್‌ನಲ್ಲೂ ಇದನ್ನು ಉಲ್ಲೇಖಿಸಲಿದೆ.
ಪ್ರಸ್ತುತ ವೆಬ್‌ಸೈಟ್‌ನಲ್ಲಿ 2014 ಫೋರ್ಡ್ ಫಿಯೆಸ್ಟಾದ ವಿವರಗಳು ಲಭ್ಯವಾಗಿದ್ದು, 360 ಡಿಗ್ರಿ ಕೋನಗಳಲ್ಲೂ ಕಾರಿನ ಚಿತ್ರಣ ಹೊರಬಿಡಲಾಗಿದೆ. ಇಷ್ಟಾದರೂ 2014 ಫೋರ್ಡ್ ಫಿಯೆಸ್ಟಾ ಯಾವಾಗ ಮಾರುಕಟ್ಟೆ ಪ್ರವೇಶಿಸಲಿದೆ ಎಂಬುದರ ಬಗ್ಗೆ ಮಾಹಿತಿ ಲಭಿಸಿಲ್ಲ. ಸದ್ಯ ಸ್ಲೈಡರ್ ಮುಖಾಂತರ 2014 ಫೋರ್ಡ್ ಫಿಯೆಸ್ಟಾ ಮಾಹಿತಿ ಪಡೆದುಕೊಳ್ಳೋಣ ಬನ್ನಿ...

2014 ಫೋರ್ಡ್ ಫಿಯೆಸ್ಟಾ ಕಾರಿನ ಪ್ರಮುಖ ಆಕರ್ಷಣೆ ಏನೆಂದರೆ, ಆಸ್ಟನ್ ಮಾರ್ಟಿನ್ ಶೈಲಿಯ ಫ್ರಂಟ್ ಗ್ರಿಲ್. ಇಲ್ಲಿ ಕ್ರೋಮ್ ಫಿನಿಶಿಂಗ್ ಟಚ್ ಕೊಡಲಾಗಿದೆ. ಇದು ಕಾರಿಗೆ ಹೆಚ್ಚು ಪ್ರೀಮಿಯಂ ಹಾಗೂ ಪಕ್ವತೆಯ ಛಾಯೆ ನೀಡುತ್ತದೆ.

ಹೊಸತಾದ ಫ್ರಂಟ್ ಗ್ರಿಲ್ ಜತೆಗೆ ರಿಯರ್ ಬಂಪರ್, ಫಾಗ್ ಲ್ಯಾಂಪ್ ಹೌಸಿಂಗ್ ಹಾಗೂ ಹೆಡ್‌ಲ್ಯಾಂಪ್ ಸಹ ಹೊಸ ವಿನ್ಯಾಸವನ್ನು ಪಡೆದುಕೊಂಡಿದೆ.

ಹೆಡ್‌ಲೈಟ್ ಬಗ್ಗೆ ಮಾತನಾಡುವುದಾದ್ದಲ್ಲಿ, ಇದು ಫಿಯೆಸ್ಟಾಗೆ ಸ್ಟೈಲಿಷ್ ವಿನ್ಯಾಸ ಪ್ರದಾನ ಮಾಡಿದೆ ಅಂದರೆ ತಪ್ಪಾಗಲಾರದು.

ಇನ್ನು ಹಿಂದುಗಡೆಯೂ ಟೈಲ್ ಲ್ಯಾಂಪ್ ಪರಿಷ್ಕೃತಗೊಳಿಸಲಾಗಿದೆ. ಹಾಗೆಯೇ ರಿಯರ್ ಬಂಪರ್ ಸ್ಪೋರ್ಟಿ ಲುಕ್ ನೀಡುವಲ್ಲಿ ಯಶಸ್ವಿಯಾಗಿದೆ.

ಇಲ್ಲಿದೆ ನೋಡಿ ರಿಯರ್ ಟೈಲ್ ಲ್ಯಾಂಪ್. ಇಲ್ಲಿ ಕ್ರೀಡಾತ್ಮಕ ರಿಯರ್ ಬಂಪರ್ ಸಹ ನೀವು ನೋಡಬಹುದಾಗಿದೆ.

ನೂತನ 2014 ಫೋರ್ಡ್ ಫಿಯೆಸ್ಟಾ ದೇಹವನ್ನು ಸಾಮಾನ್ಯ ಸ್ಟೀಲ್‌ಗಿಂತ ನಾಲ್ಕು ಪಟ್ಟು ಹೆಚ್ಚು ಶಕ್ತಿಯುತವಾದ ಬೊರನ್ ಸ್ಟೀಲ್ ಅಲಾಯ್‌ನಿಂದ ತಯಾರಿಸಲಾಗಿದೆ.

ಅಂತೆಯೇ ಹೊಸತಾದ ಅಲಾಯ್ ವೀಲ್ ಸಹ ಆಕರ್ಷಕವಾಗಿದೆ. ಇದು ಟಾಪ್ ಎಂಡ್ ವೆರಿಯಂಟ್‌ನಲ್ಲಿ ಮಾತ್ರ ಲಭ್ಯವಾಗಲಿದೆ.

ಇನ್ನೊಂದು ಪ್ರಮುಖ ವೈಶಿಷ್ಟ್ಯ ಏನೆಂದರೆ ನೂತನ 2014 ಫಿಯೆಸ್ಟಾದಲ್ಲಿ ಫೋರ್ಡ್ ಸಿಂಕ್ ಫೀಚರ್ ಆಳವಡಿಸಲಾಗಿದೆ. ಇದು ಹ್ಯಾಂಡ್ಸ್ ಫ್ರಿ ಕಾಲ್, ಹ್ಯಾಂಡ್ಸ್ ಫ್ರಿ ಮ್ಯೂಸಿಕ್ ಪ್ಲೇಬ್ಯಾಕ್, ಟೆಕ್ಸ್ಟ್ ಮೆಸೇಜ್ ರೀಡ್ ಔಟ್, ಅಪ್ ಲಿಂಕ್ ಹಾಗೂ ರೆಡಿಯೋಗಳಂತಹ ಸ್ಮಾರ್ಟ್‌ಫೋನ್ ಅಪ್ಲಿಕೇಷನ್ ಕನೆಕ್ಟ್ ಮಾಡಬಹುದಾಗಿದೆ. ಅಲ್ಲದೆ ಎರ್ಮಜನ್ಸಿ ವಾಯ್ಸ್ ಅಸಿಸ್ಟ್ ಸೇವೆ ಕೂಡಾ ಇರಲಿದೆ.

ಹಾಗೆಯೇ ಹೈ ಎಂಡ್ ವೆರಿಯಂಟ್ ಬಗ್ಗೆ ಮಾತನಾಡುವುದಾದ್ದಲ್ಲಿ, ಫುಶ್ ಬಟನ್ ಸ್ಟಾರ್ಟ್/ಸ್ಟಾಪ್, ರೈನ್ ಸೆನ್ಸಿಂಗ್ ವೈಪರ್ ಹಾಗೂ ಆಟೋ ಹೆಡ್‌ಲೈಟ್‌ಗಳಂತಹ ಸೌಲಭ್ಯಗಳು ಲಭಿಸಲಿದೆ. ಇದಲ್ಲದೆ ಡ್ಯುಯಲ್ ಟೋನ್ ಇಂಟಿರಿಯರ್ ಸಹ ಪಡೆದುಕೊಳ್ಳಲಿದೆ.

ಅಂತಿಮವಾಗಿ 2014 ಫೋರ್ಡ್ ಫಿಯೆಸ್ಟಾ 1.5 ಲೀಟರ್ ಟಿಡಿಸಿಐ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 90 ಪಿಎಸ್ ಪವರ್ ಉತ್ಪಾದಿಸಲಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಸ್ಟಾಂಡರ್ಡ್ ಆಗಿರಲಿದೆ.


Click it and Unblock the Notifications








