ದಿಲ್ಲಿಯಲ್ಲಿ 2014 ಫೋರ್ಡ್ ಫಿಯೆಸ್ಟಾ ಅನಾವರಣ
ಪ್ರತಿಷ್ಠಿತ ಇಂಡಿಯಾ ಆಟೋ ಎಕ್ಸ್ ಪೋ ಅಧಿಕೃತ ಚಾಲನೆಗೆ ಒಂದು ದಿನ ಮಾತ್ರ ಬಾಕಿ ಉಳಿದಿರುವಂತೆಯೇ ಬಹುತೇಕ ಎಲ್ಲ ಸಂಸ್ಥೆಗಳು ಎಕ್ಸ್‌ಕ್ಲೂಸಿವ್ ಮೀಡಿಯಾ ಈವೆಂಟ್‌ನಲ್ಲಿ ನೂತನ ಮಾದರಿಗಳನ್ನು ಪ್ರದರ್ಶಿಸುವುದರಲ್ಲಿ ಮಗ್ನವಾಗಿದೆ.
ದೆಹಲಿ ಆಠೋ ಎಕ್ಸ್ ಪೋ ಲೈವ್
ಅಮೆರಿಕ ಮೂಲದ ವಾಹನ ತಯಾರಕ ಸಂಸ್ಥೆಯಾಗಿರುವ ಫೋರ್ಡ್ ಕೂಡಾ ಇದರಿಂದ ಹೊರತಾಗಿಲ್ಲ. ಕಳೆದ ದಿನವಷ್ಟೇ ಫಿಗೊ ಕಾಂಪಾಕ್ಟ್ ಸೆಡಾನ್ ಕಾನ್ಸೆಪ್ಟ್ ಕಾರನ್ನು ಅನಾವರಣಗೊಳಿಸಿದ್ದ ಫೋರ್ಡ್ ಸಂಸ್ಥೆಯು ಮಗದೊಂದು ಬಹುನಿರೀಕ್ಷಿತ ಕಾರನ್ನು ಪ್ರದರ್ಶಿಸಿದೆ. ಅದು ಯಾವುದೇ ಅಂತೀರಾ? ಹೌದು, 2014 ಫೋರ್ಡ್ ಫಿಯೆಸ್ಟಾ ಮಿಡ್ ಸೈಜ್ ಸೆಡಾನ್ ಮಾದರಿ 2014 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಅನಾವರಣ ಕಂಡಿದೆ.

ಯುರೋಪ್ ಫಿಯೆಸ್ಟಾ ಮಾದರಿಯಲ್ಲಿ ನಿರ್ಮಾಣವಾಗಿರುವ ಫೋರ್ಡ್ ಫಿಯೆಸ್ಟಾ ಭಾರತ ಮಾದರಿಯು ಸಂಪೂರ್ಣ ಹೊಸ ವಿನ್ಯಾಸವನ್ನು ಪಡೆದುಕೊಂಡಿದೆ.

ಆಸ್ಟನ್ ಮಾರ್ಟಿನ್ ಶೈಲಿಯ ಫ್ರಂಟ್ ಗ್ರಿಲ್ ನೂತನ ಫೋರ್ಡ್ ಫಿಯೆಸ್ಟಾ ಕಾರಿನ ಪ್ರಮುಖ ವೈಶಿಷ್ಟ್ಯವಾಗಿರಲಿದೆ. ಅಲ್ಲದೆ ಹೊಸ ಫಾಗ್ ಲ್ಯಾಂಪ್, ಪರಿಷ್ಕೃತ ಹೆಡ್ ಲ್ಯಾಂಪ್ ಮತ್ತು ಬೊನೆಟ್ ವಿನ್ಯಾಸ ಸಂಪೂರ್ಣ ಹೊಸ ರಚನೆ ಪಡೆದುಕೊಂಡಿದೆ.

ಇದರಲ್ಲಿ 1.5 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಬಳಕೆಯಾಗಲಿದೆ.ಹಾಗೆಯೇ ಫೈವ್ ಸ್ಪೀಡ್ ಮ್ಯಾನುವಲ್ ಜತೆಗೆ ಸಿಕ್ಸ್ ಸ್ಪೀಡ್ ಆಟೋಮ್ಯಾಟಿಕ್ ಪಡೆದುಕೊಳ್ಳಲಿದೆ.

ಅಂತಿಮವಾಗಿ ಸ್ಮರ್ಧಾತ್ಮಕ ದರಗಳಲ್ಲಿ ಭಾರತೀಯ ಮಾರುಕಟ್ಟೆ ಪ್ರವೇಶಿಸುವಲ್ಲಿ ಯಶಸ್ವಿಯಾದ್ದಲ್ಲಿ ಹೋಂಡಾ ಸಿಟಿ, ನಿಸ್ಸಾನ್, ಸನ್ನಿ, ಫೋಕ್ಸ್‌ವ್ಯಾಗನ್ ವೆಂಟೊ, ಹ್ಯುಂಡೈ ವರ್ನಾ ಮತ್ತಿತ್ತರ ಕಾರುಗಳಿಗೆ ಫೋರ್ಡ್ ಫಿಯೆಸ್ಟಾ ಕಠಿಣ ಪೈಪೋಟಿ ಒಡ್ಡಲಿದೆ.


Click it and Unblock the Notifications








