ಉಜ್ವಲ ಭವಿಷ್ಯದತ್ತ ಕಣ್ಣಾಯಿಸಿದ 5 ಕಾನ್ಸೆಪ್ಟ್ ಬೈಕ್‌ಗಳು

Written By:

ಇತ್ತೀಚೆಗೆ ರಾಷ್ಟ್ರ ರಾಜಧಾನಿಯಲ್ಲಿ ನಡೆದ 2014 ಆಟೋ ಎಕ್ಸ್ ಪೋದಲ್ಲಿ ಅನೇಕ ನೂತನ ವಾಹನಗಳು ಲಾಂಚ್ ಆಗಿದ್ದವು. ಇದೇ ಸಂದರ್ಭದಲ್ಲಿ ದೇಶದ ಮುಂಚೂಣಿಯ ಸಂಸ್ಥೆಗಳು ಭವಿಷ್ಯದ ವೀಕ್ಷಣೆಯೊಂದಿಗೆ ಕಾನ್ಸೆಪ್ಟ್ ವಾಹನಗಳನ್ನು ಪ್ರದರ್ಶಿಸಿತ್ತು.

2014 ಆಟೋ ಎಕ್ಸ್ ಪೋ

12ನೇ ಆಟೋ ಎಕ್ಸ್ ಪೋದಲ್ಲಿ ಕಂಡುಬಂದ ಐದು ಶ್ರೇಷ್ಠ ಕಾನ್ಸೆಪ್ಟ್ ಕಾರುಗಳ ಬಗ್ಗೆ ನಾವು ಲೇಖನವೊಂದನ್ನು ಬರೆದಿದ್ದೆವು. ಇದರ ಮುಂದುವರಿದ ಭಾಗವೆಂಬಂತೆ ಇದೀಗ ಭವಿಷ್ಯದತ್ತ ಕಣ್ಣಾಯಿಸಿರುವ ಐದು ಶ್ರೇಷ್ಠ ಕಾನ್ಸೆಪ್ಟ್ ಬೈಕ್‌ಗಳ ಕುರಿತು ಮಾಹಿತಿ ಕೊಡಲಿದ್ದೇವೆ. ತಂತ್ರಾಂಶದಲ್ಲೂ ಉತ್ಕೃಷ್ಟತೆಯನ್ನು ಪಡೆದಿರುವ ಇಂತಹ ಪರಿಕಲ್ಪನೆಗಳು ನಿಕಟ ಭವಿಷ್ಯದಲ್ಲೇ ದೇಶದ ರಸ್ತೆ ಪ್ರವೇಶಿಸಲಿ ಎಂಬ ನಿರೀಕ್ಷೆಯೊಂದಿಗೆ ಸ್ಲೈಡರ್‌ನತ್ತ ಮುಂದುವರಿಯೋಣ...

ಪಲ್ಸರ್ ಸಿಎಸ್ 400

ಪಲ್ಸರ್ ಸಿಎಸ್ 400

ದೇಶದ ನಂ. 1 ಸ್ಪೋರ್ಟ್ಸ್ ಬೈಕ್ ಎಂದೇ ಖ್ಯಾತಿ ಪಡೆದಿರುವ ಪಲ್ಸರ್‌ನಿಂದಲೇ ನಮ್ಮ ಪಯಣ ಆರಂಭಿಸೋಣವೇ. ನೂತನ ಪಲ್ಸರ್ 375ಸಿಸಿ ಬೈಕ್ ಟ್ರಿಪಲ್ ಸ್ಪಾರ್ಕ್ ಪ್ಲಗ್ ತಂತ್ರಜ್ಞಾನವನ್ನು ಹೊಂದಿದೆ.

ಪಲ್ಸರ್ ಸಿಎಸ್ 400

ಪಲ್ಸರ್ ಸಿಎಸ್ 400

ಪಲ್ಸರ್ ಸಿಎಸ್400 ಎಂದು ಕರೆಯಲ್ಪಡುವ ಈ ಬೈಕ್ ಕ್ರೂಸರ್ ಸ್ಪೋರ್ಟ್ಸ್ ವಿಭಾಗದಲ್ಲಿ ಗುರುತಿಸಿಕೊಳ್ಳಲಿದೆ. ಇದು 1.75 ಲಕ್ಷ ರು.ಗಳ ಅಸುಪಾಸಿನಲ್ಲಿ ಆಗಮನವಾಗುವ ಸಾಧ್ಯತೆಯಿದೆ.

ಹೋಂಡಾ ಸಿಎಕ್ಸ್-01

ಹೋಂಡಾ ಸಿಎಕ್ಸ್-01

ದೇಶದ ಎರಡನೇ ಅತಿದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ, ಅತ್ಯಾಕರ್ಷಕ ಸಿಎಕ್ಸ್-01 ಕಾನ್ಸೆಪ್ಟ್ ಬೈಕನ್ನು ಇದೇ ಆಟೋ ಶೋದಲ್ಲಿ ಪ್ರದರ್ಶಿಸಿತ್ತು.

ಹೋಂಡಾ ಸಿಎಕ್ಸ್-01

ಹೋಂಡಾ ಸಿಎಕ್ಸ್-01

ಸದ್ಯ ಮಾರುಕಟ್ಟೆಯಲ್ಲಿರುವ ಸಿಬಿಆರ್ 250ಆರ್ ನೆಕ್ಡ್ ವರ್ಷನ್ ತರಹನೇ ಇರುವ ಈ ಬೈಕ್, ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡುವ ಸಾಧ್ಯತೆಯಿದೆ. ಈ 250 ಸಿಸಿ ಬೈಕ್ ಹೆಚ್ಚು ಗ್ರೌಂಡ್ ಕ್ಲಿಯರನ್ಸ್ ಪಡೆದುಕೊಳ್ಳಲಿದೆ.

ಟಿವಿಎಸ್ ಡ್ರೇಕನ್

ಟಿವಿಎಸ್ ಡ್ರೇಕನ್

ಒಂದು ಕಾಲದಲ್ಲಿ ದೇಶದ ಬೈಕ್ ಉತ್ಸಾಹಿಗಳು ಟಿವಿಎಸ್‌ನ ಪ್ರತಿಯೊಂದು ಬೆಳವಣಿಗೆಯನ್ನು ಬಹಳ ಕುತೂಹಲದಿಂದ ಎದುರು ನೋಡುತ್ತಿದ್ದರು. ಪ್ರಸ್ತುತ ಗತ ಕಾಲದ ವೈಭವ ಮರುಕಳಿಸುವ ಪ್ರಯತ್ನದಲ್ಲಿರುವ ಟಿವಿಎಸ್ ನೂತನ ಡ್ರೇಕನ್ ಕಾನ್ಸೆಪ್ಟ್ ಬೈಕ್ ಪ್ರದರ್ಶಿಸಿದೆ.

ಟಿವಿಎಸ್ ಡ್ರೇಕನ್

ಟಿವಿಎಸ್ ಡ್ರೇಕನ್

ಪ್ರಸ್ತುತ 250 ಸಿಸಿ ಬೈಕ್ ಭವಿಷ್ಯದ ಅಪಾಚೆ ಎಂದು ಗುರುತಿಸಲ್ಪಡಲಿದೆ. ಜತೆಗೆ ಫೋರ್ ಸ್ಟ್ರೋಕ್, ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಯುನಿಟ್‌ನಿಂದ ನಿಯಂತ್ರಿಸಲ್ಪಡಲಿದ್ದು, ಆರು ಸ್ಪೀಡ್ ಟ್ರಾನ್ಸ್‌ಮಿಷನ್ ಸಹ ಒಳಗೊಂಡಿರಲಿದೆ.

ಯಮಹಾ ಆರ್25

ಯಮಹಾ ಆರ್25

ಈ ನಡುವೆ ಎಲ್ಲರ ಕಣ್ಮಣ ಸೆಳೆಯುವಲ್ಲಿ ಅಕ್ಷರಶ: ಯಮಹಾ ಆರ್25 ಯಶಸ್ವಿಯಾಗಿದೆ. 2014 ಆಟೋ ಎಕ್ಸ್ ಪೋದಲ್ಲಿ ಯಮಹಾದಿಂದ ಇದೊಂದು ಅನಿರೀಕ್ಷಿತ ಉಡುಗೊರೆಯಾಗಿತ್ತು ಅಂದರೆ ತಪ್ಪಾಗಲಾರದು.

ಯಮಹಾ ಆರ್25

ಯಮಹಾ ಆರ್25

ಪ್ರಸ್ತುತ ಮೊದಲ ಮಾದರಿಯ ಹಂತದಲ್ಲಿರುವ ಯಮಹಾ ಆರ್25 ಉತ್ಪಾದನೆ ಸದ್ಯದಲ್ಲೇ ಆರಂಭವಾಗಲಿದೆ.ಇದು ಟ್ವಿನ್ ಸಿಲಿಂಡರ್ ಎಂಜಿನ್ ಪಡೆದುಕೊಳ್ಳಲಿದೆ.

ಹೀರೊ ಹ್ಯಾಸ್ಟರ್

ಹೀರೊ ಹ್ಯಾಸ್ಟರ್

ದೇಶದ ನಂ.1 ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೀರೊ ಮಗದೊಮ್ಮೆ ಮೋಡಿ ಮಾಡಿದೆ. ಅಲ್ಲದೆ 620 ಸಿಸಿ ಹ್ಯಾಸ್ಟರ್ ಕಾನ್ಸೆಪ್ಟ್ ಬೈಕನ್ನು ಪ್ರದರ್ಶಿಸಿದೆ.

ಉಜ್ವಲ ಭವಿಷ್ಯದತ್ತ ಕಣ್ಣಾಯಿಸಿದ 5 ಕಾನ್ಸೆಪ್ಟ್ ಬೈಕ್‌ಗಳು

ಪ್ರಸ್ತುತ ಬೈಕ್ ಕೇವಲ 3.8 ಸೆಕೆಂಡುಗಳಲ್ಲಿ 0-100 ಕೀ.ಮೀ. ವರೆಗೆ ವೇಗವರ್ಧಿಸಲಿದೆ. ಅದೇ ರೀತಿ ಗಂಟೆಗೆ 240 ಕೀ.ಮೀ. ಗರಿಷ್ಠ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

English summary
The recent Auto Expo was filled with launches and facelifts, however among all the ruckus there were concepts of the future. Here is our top 5 of the best concept bikes at Auto Expo 2014. We expect these bikes to come soon and hope they look identical as showcased here.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark