Activa VS Access: ಧೀರ್ಘ ಕಾಲದ ಪ್ರತಿಸ್ಪರ್ಧಿಗಳು: ಇಂದಿಗೂ ಅದೇ ಗತ್ತು, ಆದರೆ ಬೆಸ್ಟ್ ಯಾವುದು?

ಭಾರತದಲ್ಲಿ 125 ಸಿಸಿ ಸ್ಕೂಟರ್ ಕ್ಷೇತ್ರವು ಅತ್ಯಂತ ಸ್ಪರ್ಧಾತ್ಮಕ ದ್ವಿಚಕ್ರ ವಾಹನ ವಿಭಾಗಗಳಲ್ಲಿ ಒಂದಾಗಿದೆ. ಈ ವಿಭಾಗದಲ್ಲಿ ಎಷ್ಟೇ ಸ್ಕೂಟರ್‌ಗಳು ಬಿಡುಗಡೆಯಾದರೂ ಸುಜುಕಿ ಆಕ್ಸೆಸ್ 125 (Suzuki Access 125) ಮತ್ತು ಹೋಂಡಾ ಆಕ್ಟಿವಾ 125 (Honda Activa 125) ಮಾತ್ರ ಧೀರ್ಘ ಕಾಲದ ಪ್ರತಿಸ್ಪರ್ಧಿಗಳಾಗಿ ಉಳಿದಿವೆ. ಪ್ರಸ್ತುತ ಎರಡೂ ಸ್ಕೂಟರ್‌ಗಳು ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ ಪೈಪೋಟಿಯೊಂದಿಗೆ ಅಪ್‌ಡೇಟ್‌ಗಳನ್ನು ಪಡೆದುಕೊಂಡು ಗ್ರಾಹಕರನ್ನು ಸೆಳೆದಿವೆ. ಇದೀಗ ಸುಜುಕಿ ಇತ್ತೀಚೆಗೆ ಆಕ್ಸೆಸ್ 125 ನವೀಕರಿಸಿದ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ಸ್ಕೂಟರ್ ಅನ್ನು ಆಕ್ಟಿವಾ 125 ಗೆ ಹೋಲಿಕೆ ಮಾಡಿದ್ದೇವೆ.

ಬೆಲೆ: ಸುಜುಕಿ ಆಕ್ಸೆಸ್ 125 ಆರಂಭಿಕ ಎಕ್ಸ್-ಶೋರೂಂ ಬೆಲೆಗಳು 78,184 ರೂ.ಗಳಿಂದ ಪ್ರಾರಂಭವಾಗುತ್ತದೆ. ಸಂಪೂರ್ಣವಾಗಿ ಲೋಡ್ ಮಾಡಲಾದ ಸುಜುಕಿ ಆಕ್ಸೆಸ್ ರೈಡ್ ಕನೆಕ್ಟ್ TFT ABS ವೇರಿಯೆಂಟ್ ಬೆಲೆಯು 98,378 ರೂ.ಗಳವರೆಗೆ ಇದೆ. ಹಾಗೆಯೇ ಹೋಂಡಾ ಆಕ್ಟಿವಾ 125 ಸ್ಕೂಟರ್ ಬೆಲೆಗಳು 89,652 ರೂ.ಗಳಿಂದ ಪ್ರಾರಂಭವಾಗಿ 94,096 ರೂ. (ಎಲ್ಲವೂ ಎಕ್ಸ್‌ ಶೋರೂಂ ಬೆಲೆಗಳು)ಗಳವರೆಗೆ ಇದೆ.

honda-activa-125-vs-suzuki-access-125-price-features-mileage

ಫೀಚರ್ಸ್: ಹೋಂಡಾ ಆಕ್ಟಿವಾ ಕರೆ ಮತ್ತು SMS ಎಚ್ಚರಿಕೆಗಳೊಂದಿಗೆ ನ್ಯಾವಿಗೇಷನ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದ್ದು, ಸಂಪೂರ್ಣ LED ಲೈಟ್‌ಗಳನ್ನು ಪಡೆಯುತ್ತದೆ. ಹಾಗೆಯೇ ಹೋಂಡಾದ H-ಸ್ಮಾರ್ಟ್ ಕೀ ಸಿಸ್ಟಮ್ ಹೊಂದಿದ್ದು, ಇದು ಸ್ಮಾರ್ಟ್ ಅನ್‌ಲಾಕ್, ಸ್ಮಾರ್ಟ್ ಫೈಂಡ್‌ನಂತಹ ಕಾರ್ಯಗಳನ್ನು ನೀಡುತ್ತದೆ. ಇದು ಹೋಂಡಾ ರೋಡ್‌ಸಿಂಕ್ ಅಪ್ಲಿಕೇಶನ್ ಮೂಲಕ ಬ್ಲೂಟೂತ್ ಸಂಪರ್ಕದೊಂದಿಗೆ 4.2-ಇಂಚಿನ TFT ಡಿಜಿಟಲ್ ಡಿಸ್ಪ್ಲೇಯನ್ನು ಸಹ ಪಡೆದಿದೆ.

ಸುಜುಕಿ ಆಕ್ಸೆಸ್ 125 ಫೀಚರ್ಸ್ ವಿಷಯಕ್ಕೆ ಬಂದರೆ ತನ್ನ ರೈಡ್ ಕನೆಕ್ಟ್ ತಂತ್ರಜ್ಞಾನದ ಮೂಲಕ ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ 4.2-ಇಂಚಿನ TFT ಡಿಜಿಟಲ್ ಡಿಸ್ಪ್ಲೇಯನ್ನು ಪಡೆಯುತ್ತದೆ. ಇದು 125cc ಶ್ರೇಣಿಯಲ್ಲಿ ಸಿಂಗಲ್ - ಚಾನೆಲ್ ABS ಅನ್ನು ಪಡೆದ ಮೊದಲ ಸ್ಕೂಟರ್ ಆಗಿದೆ. LED ಲೈಟಿಂಗ್, USB ಪೋರ್ಟ್ ಮತ್ತು ಹೊಸದಾಗಿ ಬಿಡುಗಡೆಯಾದ ಆವೃತ್ತಿಯು ಸಿಂಗಲ್ - ಚಾನೆಲ್ ABS ಅನ್ನು ಸಹ ಪಡೆದಿದೆ.

honda-activa-125-vs-suzuki-access-125-price-features-mileage

ಎಂಜಿನ್: ಹೋಂಡಾ ಆಕ್ಟಿವಾ 123.9 ಸಿಸಿ, ಸಿಂಗಲ್ - ಸಿಲಿಂಡರ್, ಏರ್-ಕೂಲ್ಡ್ ಎಂಜಿನ್‌ ಹೊಂದಿದೆ, ಇದು 8.4 ಎಚ್‌ಪಿ ಪವರ್ ಹಾಗೂ 10.5 ಎನ್‌ಎಂ ಟಾರ್ಕ್ ಹೊರಹಾಕುತ್ತದೆ. ಸುಜುಕಿ ಆಕ್ಸೆಸ್ ವಿಷಯಕ್ಕೆ ಬಂದರೆ 124 ಸಿಸಿ, ಏರ್ - ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಇದು 8.4 ಎಚ್‌ಪಿ ಪವರ್ ಮತ್ತು 10.2 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಸುಜುಕಿ ಆಕ್ಸೆಸ್ 125 ಅನ್ನು 6 ಬಣ್ಣಗಳಲ್ಲಿ ನೀಡಿದರೆ, ಹೋಂಡಾ ಆಕ್ಟಿವಾ 125 ಸ್ಕೂಟರ್ 8 ಬಣ್ಣಗಳಲ್ಲಿ ಬರುತ್ತದೆ. ಸುಜುಕಿ ಆಕ್ಸೆಸ್ ಮೈಲೇಜ್ ಸುಮಾರು 45 ಕಿ.ಮೀ., ಹೋಂಡಾ ಆಕ್ಟಿವಾ 125 ಮೈಲೇಜ್ ಸುಮಾರು 47 ಕಿ.ಮೀ ಆಗಿದೆ. ಬಳಕೆದಾರರ ವಿಮರ್ಶೆಗಳಲ್ಲಿ, ಆಕ್ಟಿವಾ 125 ಹಾಗೂ ಸುಜುಕಿ ಆಕ್ಸೆಸ್ 125 (ಹಿಂದಿನ ಮಾಡಲ್) ಎರಡೂ ಕೂಡ ಸಮಾನವಾಗಿ 5 ಅಂಕಗಳಿಗೆ 4.5 ಅಂಕಗಳನ್ನು ಪಡೆದುಕೊಂಡಿವೆ.

honda-activa-125-vs-suzuki-access-125-price-features-mileage

ಈ ಅಂಶಗಳನ್ನು ಪರಿಗಣಿಸಿ ನಿಮ್ಮ ನೆಚ್ಚಿನ ಸ್ಕೂಟರ್ ಅನ್ನು ನೀವು ಖರೀದಿಸಬಹುದಾಗಿದೆ. ವಿಷಯಕ್ಕೆ ಬಂದರೆ ಸುಜುಕಿ ಆಕ್ಸೆಸ್ 125 ಉತ್ತಮ ಮೈಲೇಜ್ ಮತ್ತು ಕಡಿಮೆ ಬೆಲೆಯನ್ನು ಹೊಂದಿದ್ದರೇ, ಹೋಂಡಾ ಆಕ್ಟಿವಾ 125 ಸುಗಮ ಸವಾರಿ ಮತ್ತು ಹೆಚ್ಚಿನ ಪ್ರೀಮಿಯಂ ವೈಶಿಷ್ಟ್ಯಗಳನ್ನು ಒದಗಿಸುತ್ತದೆ. ಉಳಿದಂತೆ ಸಿಟಿ ಬಳಕೆಗೆ ಎರಡು ಕೂಡ ಅತ್ಯುತ್ತಮ ಸ್ಕೂಟರ್‌ಗಳಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, February 10, 2026, 19:56 [IST]
English summary
Honda activa 125 vs suzuki access 125 price features mileage
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+