ಹೊಸ ಅವತಾರದಲ್ಲಿ ದೇಶದ ನಂ.1 ಎಸ್‌ಯುವಿ ಸ್ಕಾರ್ಪಿಯೊ ಬಿಡುಗಡೆಗೆ ಸಜ್ಜು
ದೇಶದ ಅತ್ಯಂತ ಯಶಸ್ವಿ ಕ್ರೀಡಾ ಬಳಕೆಯ ವಾಹನ ಎಂದೇ ಬಿರುದಾಂಕಿತ ಮಹೀಂದ್ರ ಸ್ಕಾರ್ಪಿಯೊ ಎಲ್ಲ ಹೊಸತನದೊಂದಿಗೆ ಕಮ್‌ಬ್ಯಾಕ್ ಮಾಡಿಕೊಳ್ಳಲು ತೆರೆಮರೆಯಲ್ಲಿ ಸಿದ್ಧತೆ ನಡೆಸಿಕೊಳ್ಳುತ್ತಿದೆ. ಎಸ್‌ಯುವಿ ಕಾರುಗಳ ಪೈಕಿ ಅತಿ ಹೆಚ್ಚು ಇಂಧನ ಕ್ಷಮತೆ ನೀಡುತ್ತಿರುವ ಸ್ಕಾರ್ಪಿಯೊ ಎಂತಹುದೇ ಒರಟಾದ ರಸ್ತೆಯಲ್ಲೂ ಅತ್ಯುತ್ತಮ ಚಾಲನಾ ಅನುಭವ ನೀಡುತ್ತದೆ.
ಇವನ್ನೂ ಓದಿ: ದೇಶದ ಟಾಪ್ 10 ರಾಷ್ಟ್ರೀಯ ಹೆದ್ದಾರಿಗಳು!
ಮಧ್ಯಮ ವಿಭಾಗ ವರ್ಗದ ನೆಚ್ಚಿನ ಕಾರುಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಸ್ಕಾರ್ಪಿಯೊ, ಒಂದು ರೀತಿಯಲ್ಲಿ ಹೇಳುವುದಾದರೆ ಮಹೀಂದ್ರಗೆ ನಂ.1 ಎಸ್‍ಯುವಿ ಪಟ್ಟ ನೀಡುವುದರಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಇದೀಗ ಸ್ಕಾರ್ಪಿಯೊ ಹೊಸ ಅವತಾರ ಪಡೆಯಲಿದ್ದು, ನಿಕಟ ಭವಿಷ್ಯದಲ್ಲೇ ಬಿಡುಗಡೆ ಭಾಗ್ಯ ಸಹ ಕಾಣುವ ನಿರೀಕ್ಷೆಯಿದೆ. ಇದರಂತೆ ಡ್ರೈವ್ ಸ್ಪಾರ್ಕ್ ಎಕ್ಸ್‌ಕ್ಲೂಸಿವ್ ಚಿತ್ರ ಹಾಗೂ ಮಾಹಿತಿಗಳ ಸಂಗ್ರಹವನ್ನು ನಿಮ್ಮ ಮುಂದಿಡುತ್ತಿದ್ದೇವೆ. ಇದಕ್ಕಾಗಿ ಚಿತ್ರ ಸಂಪುಟದತ್ತ ಮುಂದುವರಿಯಿರಿ.

ಕಪ್ಪು ಬಿಳುಪು ವರ್ಣದಿಂದ ಸಂಪೂರ್ಣವಾಗಿ ಮರೆಮಾಚಿರುವ ಸ್ಕಾರ್ಪಿಯೊವನ್ನು ಗುರುತಿಸಿಕೊಳ್ಳಲು ನಾವು ಹೆಚ್ಚು ಕಷ್ಟಪಡಬೇಕಾಗಿ ಬಂದಿಲ್ಲ. ಯಾಕೆಂದರೆ 2014 ಸ್ಕಾರ್ಪಿಯೊ ಹೆಡ್‌ಲೈಟ್ ಹಾಗೂ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು ಹೊಸ ರೂಪವನ್ನು ಪಡೆದುಕೊಂಡಿದೆ.

ಇವೆಲ್ಲಕ್ಕೂ ಮಿಗಿಲಾಗಿ ಆಧುನಿಕತೆಗೆ ತಕ್ಕಂತೆ ವಿನ್ಯಾಸ ಕಲ್ಪಿಸಿಕೊಟ್ಟಿರುವುದು ಹಿಂದಿನ ಮಾದರಿಗಿಂತಲೂ ಹೆಚ್ಚು ಆಕರ್ಷಕವಾಗಿ ಗೋಚರಿಸಲು ನೆರವಾಗಿದೆ.

ಇದರ ಬೊನೆಟ್ ವಿಶಿಷ್ಟವಾದ ವಿನ್ಯಾಸ ಪಡೆದುಕೊಂಡಿದ್ದು, ಬೇಗನೇ ಗುರುತಿಸಿಕೊಳ್ಳಬಹುದಾಗಿದೆ. ಹಾಗೆಯೇ ಟ್ರೆಂಡಿ ಅಲಾಯ್ ವೀಲ್‌ಗಳು ಕ್ರೀಡಾತ್ಮಕ ಲುಕ್ ಪ್ರದಾನ ಮಾಡಲಿದೆ.

ಹಿಂದುಗಡೆಯ ವಿನ್ಯಾಸವು ಇನ್ನೊಂದು ಹೇಳಬೇಕಾದ ಘಟಕವಾಗಿರುತ್ತದೆ. ಇದರ ಪರಿಷ್ಕೃತ ಟೈಲ್ ಲೈಟ್ ಹಾಗೂ 'ಡಿ' ಆಕಾರದ ಬ್ರೇಕ್ ಇಂಡಿಕೇಟರ್ ಗಮನ ಸೆಳೆಯುತ್ತಿದೆ. ಅದೇ ರೀತಿ ರಿಯರ್ ಸ್ಪಾಯ್ಲರ್ ಹಾಗೂ ಪರಿಷ್ಕೃತ ರಿಯರ್ ಬಂಪರ್ ಸಹ ಪಡೆದುಕೊಂಡಿದೆ.

ಇನ್ನು ಕಾರಿನೊಳಗೂ ಹೆಚ್ಚು ವೈಶಿಷ್ಟ್ಯಗಳಿಗೆ ಆದ್ಯತೆ ಕೊಡಲಾಗಿದೆ. ಇದು ಹೆಚ್ಚು ಆಧುನಿಕ ಹಾಗೂ ತಾಜಾ ತಂತ್ರಜ್ಞಾನಗಳನ್ನು ಪಡೆದುಕೊಂಡಿದೆ. ಇದರ ಡ್ಯಾಶ್‌ಬೋರ್ಡ್ ಸಂಪೂರ್ಣವಾಗಿ ಪರಿಷ್ಕೃತಗೊಳ್ಳುವ ನಿರೀಕ್ಷೆಯಿದ್ದು, ಹೆಚ್ಚು ಪ್ರೀಮಿಯಂ ಸೌಲಭ್ಯಗಳನ್ನು ಗಿಟ್ಟಿಸಿಕೊಳ್ಳಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಹಾಗೆಯೇ ರಿಯರ್ ಎಸಿ ವೆಂಟ್ಸ್ ಇರಲಿದೆ.

ಹೊಸ ಸ್ಕಾರ್ಪಿಯೊದಲ್ಲಿ ಟಚ್‌ಸ್ಕ್ರೀನ್ ಮಾಹಿತಿ ಮನರಂಜನಾ ವ್ಯವಸ್ಥೆಯು ದುಬಾರಿ ಕಾರಿನ ಸಂಕೇತ ನೀಡಲಿದೆ. ಅಂತೆಯೇ ರಿಯರ್ ಪಾರ್ಕಿಂಗ್ ಸೆನ್ಸಾರ್, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್ ಹಾಗೂ ಗುಣಮಟ್ಟದ ಪ್ಲಾಸ್ಟಿಕ್ ಬಳಕೆಯು ಒಳಗಡೆ ಇನ್ನಷ್ಟು ಐಷಾರಾಮಿ ಅನುಭವ ನೀಡಲು ಸಹಕಾರಿಯಾಗಲಿದೆ.

ಒಟ್ಟಿನಲ್ಲಿ 2014 ಮಹೀಂದ್ರ ಸ್ಕಾರ್ಪಿಯೊ ಯಾವಾಗ ಬಿಡುಗಡೆಯಾಗಲಿದೆ ಎಂಬುದಕ್ಕೆ ಸ್ಪಷ್ಟ ಮಾಹಿತಿಗಳು ಬಂದಿಲ್ಲ. ಇದು ಈಗಿರುವ ಮಾದರಿಗೆ ಬದಲಿಯಾಗುವ ಸಂಭವವಿದ್ದು, ಸ್ಮರ್ಧಾತ್ಮಕ ದರಗಳಲ್ಲಿ ಮಾರುಕಟ್ಟೆ ಪ್ರವೇಶಿಸುವುದಾಗಿ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸದಾ ಡ್ರೈವ್ ಸ್ಪಾರ್ಕ್ ಓದುತ್ತಿರಿ.


Click it and Unblock the Notifications








