ಹೊಸ ರೂಪದಲ್ಲಿ ಮಹೀಂದ್ರ ಕ್ಸೈಲೋ ಬಿಡುಗಡೆ; ವಿವರ ಇಲ್ಲಿದೆ

By Nagaraja

ದೇಶದ ಮುಂಚೂಣಿಯ ಉಪಯುಕ್ತ ವಾಹನ ತಯಾರಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಹೊಸ ರೂಪದ ಕ್ಸೈಲೋ ಮಾದರಿಯನ್ನು ಬಿಡುಗಡೆ ಮಾಡಿದೆ. ಇದರ ಮುಂಬೈ ಎಕ್ಸ್ ಶೋ ರೂಂ ಬೆಲೆ 7.24 ಲಕ್ಷ ರು.ಗಳಾಗಿರಲಿದೆ.

ಈ ಬಹು ಬಳಕೆಯ ವಾಹನದಲ್ಲಿ ಕಾಸ್ಮೆಟಿಕ್ ಬದಲಾವಣೆ ಮಾತ್ರವಲ್ಲದೆ ಎಂಜಿನ್ ಮಾನದಂಡಗಳಲ್ಲೂ ಕೆಲವೊಂದು ಬದಲಾವಣೆ ತರಲಾಗಿದೆ. ಇದು ಅತ್ಯುತ್ತಮ ಚಾಲನಾ ಅನುಭವ ನೀಡಲು ನೆರವಾಗಲಿದೆ.

2014 ಮಹೀಂದ್ರ ಕ್ಸೈಲೋ ಬಿಡುಗಡೆ

ನೀವು ಚಿತ್ರದಲ್ಲಿ ನೋಡುತ್ತಿರುವಂತೆಯೇ ಮುಂದುಗಡೆ ಬೊನೆಟ್ ಸಮೀಪದಲ್ಲೇ ಕ್ರೋಮ್ ರೇಖೆ ಓಡಾಡುತ್ತಿದೆ. ರೂಫ್ ರೈಲ್ ಕೂಡಾ ಹೊಸದಾಗಿದ್ದು, ಬದಿಯಲ್ಲಿ ಡಿಕಾಲ್ಸ್ ಸ್ಪರ್ಶ ಕೊಡಲಾಗಿದೆ.

2014 ಮಹೀಂದ್ರ ಕ್ಸೈಲೋ ಬಿಡುಗಡೆ

ಹಿಂದುಗಡೆ ಹೊಸ ಅಲಾಯ್ ಪಡೆದುಕೊಂಡಿದ್ದು, ಇದಕ್ಕೂ ಕ್ರೋಮ್ ಟಚ್ ನೀಡಲಾಗಿದೆ. ಹಿಂದುಗಡೆಯ ಲ್ಯಾಂಪ್‌ನಲ್ಲೂ ಬದಲಾವಣೆ ತರಲಾಗಿದೆ.

2014 ಮಹೀಂದ್ರ ಕ್ಸೈಲೋ ಬಿಡುಗಡೆ

ಹೊರಗಡೆ ಮಾತ್ರವಲ್ಲದೆ ಒಳಗಡೆಯೂ ಹೆಚ್ಚಿನ ಬದಲಾವಣೆ ತರಲಾಗಿದೆ. ಹೊಸತಾಗಿ ಕಂಗೊಳಿಸುವ ಇನ್ಸ್ಟ್ರುಮೆಂಟ್ ಕ್ಲಸ್ಟರ್, 2 ಡಿನ್ ಆಡಿಯೋ ಸಿಸ್ಟಂ ಮತ್ತು ಬ್ಲೂಟೂತ್ ಆಳವಡಿಸಲಾಗಿದೆ.

2014 ಮಹೀಂದ್ರ ಕ್ಸೈಲೋ ಬಿಡುಗಡೆ

ಮಹೀಂದ್ರ ಸಂಸ್ಥೆಯ ಪ್ರಕಾರ ಹೆಚ್ಚು ಆರಾಮದಾಯಕ ಪ್ರಯಾಣ ಖಾತ್ರಿಪಡಿಸುವ ನಿಟ್ಟಿನಲ್ಲಿ ಸಸ್ಪೆಷನ್‌ನಲ್ಲಿ ಕೆಲವೊಂದು ಬದಲಾವಣೆಗಳನ್ನು ತರಲಾಗಿದೆ.

2014 ಮಹೀಂದ್ರ ಕ್ಸೈಲೋ ಬಿಡುಗಡೆ

ಇದು ಹಳೆಯ ಮಾದರಿಯಲ್ಲಿರುವ ಎಂಜಿನ್ ಹೊಂದಿರಲಿದ್ದು, 2.5 ಟರ್ಬೊಡೀಸೆಲ್ ಎಂಜಿನ್ 95 ಪಿಎಸ್ (218 ಎನ್‌ಎಂ ಟಾರ್ಕ್) ಪವರ್ ಮತ್ತು ಬಿಎಸ್‌4 ಟರ್ಬೊ ಡೀಸೆಲ್ ಎಂಜಿನ್ (120ಪಿಎಸ್, 280ಎನ್‌ಎಂ ಟಾರ್ಕ್) ಹೊಂದಿರಲಿದೆ.

2014 ಮಹೀಂದ್ರ ಕ್ಸೈಲೋ ಬಿಡುಗಡೆ

ಎರಡು ಎಂಜಿನ್‌ನಗಳು ಫೈವ್ ಸ್ಪೀಡ್ ಗೇರ್‌ಬಾಕ್ಸ್‌ನಿಂದ ಕೂಡಿರಲಿದೆ. ವಿಶೇಷವೆಂದರೆ ಮುಂಬರುವ ಸ್ಕಾರ್ಪಿಯೊ ಫೇಸ್‌ಲಿಫ್ಟ್‌ನಲ್ಲೂ ಇದಕ್ಕೆ ಸಮಾನವಾದ 120 ಪಿಎಸ್ ಎಂಜಿನ್ ಬಳಕೆಯಾಗಲಿದೆ.

2014 ಮಹೀಂದ್ರ ಕ್ಸೈಲೋ ಬಿಡುಗಡೆ

ಇದರ ಬಿಎಸ್3 ಎಂಜಿನ್ ಪ್ರತಿ ಲೀಟರ್‌ಗೆ 14.95 ಕೀ.ಮೀ. ಮೈಲೇಜ್ ನೀಡಲಿದೆ. ಅದೇ ಹೊತ್ತಿಗೆ ಬಿಎಸ್4 ಪ್ರತಿ ಲೀಟರ್‌ಗೆ 14.02 ಕೀ.ಮೀ. ಮೈಲೇಜ್ ನೀಡಲಿದೆ.

2014 ಮಹೀಂದ್ರ ಕ್ಸೈಲೋ ಬಿಡುಗಡೆ

ಹೊಸ ಕ್ಸೈಲೋ ಬಿಎಸ್4 ವೆರಿಯಂಟ್ ಐದು ವೆರಿಯಂಟ್‌ಗಳಲ್ಲಿ ಲಭ್ಯವಾಗಲಿದೆ. ಅವುಗಳೆಂದರೆ ಡಿ2, ಡಿ4, ಎಚ್‌4, ಎಚ್8 ಮತ್ತು ಎಚ್9

2014 ಮಹೀಂದ್ರ ಕ್ಸೈಲೋ ಬಿಡುಗಡೆ

ಅದೇ ಹೊತ್ತಿಗೆ ಬಿಎಸ್3 ಕ್ಲೈಲೋ ಎಂಜಿನ್ ಡಿ2 ಮತ್ತು ಡಿ4 ಎಂಜಿನ್ ಪಡೆಯಲಿದೆ.

ದರ ಮಾಹಿತಿ - ಮುಂಬೈ ಎಕ್ಸ್ ಶೋ ರೂಂ (ರುಪಾಯಿಗಳಲ್ಲಿ)

ದರ ಮಾಹಿತಿ - ಮುಂಬೈ ಎಕ್ಸ್ ಶೋ ರೂಂ (ರುಪಾಯಿಗಳಲ್ಲಿ)

ಡಿ2 ಮ್ಯಾಕ್ಸ್ ಬಿಎಸ್ III - 7,248,01

ಡಿ2 ಮ್ಯಾಕ್ಸ್ ಬಿಎಸ್ IV - 7,376,02

ಡಿ2 ಬಿಎಸ್ III - 7,444,90

ಡಿ2 ಬಿಎಸ್ IV - 7,569,52

ಡಿ4 ಬಿಎಸ್ III - 7,848,41

ಡಿ4 ಬಿಎಸ್ IV - 7,973,07

ದರ ಮಾಹಿತಿ - ಮುಂಬೈ ಎಕ್ಸ್ ಶೋ ರೂಂ (ರುಪಾಯಿಗಳಲ್ಲಿ)

ದರ ಮಾಹಿತಿ - ಮುಂಬೈ ಎಕ್ಸ್ ಶೋ ರೂಂ (ರುಪಾಯಿಗಳಲ್ಲಿ)

ಎಚ್4 ಬಿಎಸ್ IV - 8,228,85

ಎಚ್4 ಎಬಿಎಸ್ ಬಿಎಸ್ IV - 8,456,15

ಎಚ್8 ಎಬಿಎಸ್ ಬಿಎಸ್ IV - 9,404,63

ಎಚ್8 ಎಬಿಎಸ್ ಏರ್‌ಬ್ಯಾಗ್ ಬಿಎಶ್ IV - 9,767,68

ಎಚ್9 ಬಿಎಸ್ IV - 10,563,10

More from DriveSpark

Article Published On: Wednesday, September 24, 2014, 10:55 [IST]
English summary

 mahindra and mahindra, mahindra xylo, muv, auto news, photo feature, ಮಹೀಂದ್ರ ಆಂಡ್ ಮಹೀಂದ್ರ, ಮಹೀಂದ್ರ ಕ್ಸೈಲೋ, ಎಂಯುವಿ, ಫೋಟೊ ಫೀಚರ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+