ಮಹೀಂದ್ರ ಕ್ಷೈಲೊಗೆ ಬೊಂಬಾಟ್ ವಾರೆಂಟಿ ಸಿಕ್ತು!
ಮಹೀಂದ್ರ ಫ್ಯಾಕ್ಟರಿಯಿಂದ ಇತ್ತೀಚೆಗೆ ಪರಿಷ್ಕೃತ ಕ್ಷೈಲೊ ಎಂಪಿವಿ ಆವೃತ್ತಿ ಆಗಮಿಸಿತ್ತು. ಕಂಪನಿಯು ಇದೀಗ ಈ ಮಲ್ಟಿ ಪರ್ಪೊಸ್ ವೆಹಿಕಲಿಗೆ 2 ವರ್ಷ/50 ಸಾವಿರ ಕಿ.ಮೀ. ಬದಲಾಗಿ 3 ವರ್ಷ/1 ಲಕ್ಷ ಕಿ.ಮೀ. ವಾರೆಂಟಿ ನೀಡುವುದಾಗಿ ಪ್ರಕಟಿಸಿದೆ.
ನೂತನ ಕ್ಷೈಲೊ ಕಾರಿಗೆ ಹೆಚ್ಚುವರಿಯಾಗಿ 2 ವರ್ಷ/50 ಸಾವಿರ ಕಿ.ಮೀ. ವಾರೆಂಟಿ ಬೇಕೆಂದರೆ ಸುಮಾರು 10 ಸಾವಿರ ರುಪಾಯಿ ಪಾವತಿಸಿದರೆ ಸಾಕು. ಮಹೀಂದ್ರ ಕಾರಿಗೆ ಉಳಿದ ಪ್ರತಿಸ್ಪರ್ಧಿ ಕಾರುಗಳಿಗಿಂತ ಅತ್ಯುತ್ತಮ ವಾರೆಂಟಿ ಪ್ಯಾಕೇಜ್ ನೀಡುವ ಕಾರ್ಯತಂತ್ರದ ಭಾಗವಾಗಿ ವಾರೆಂಟಿ ವಿಸ್ತರಣೆ ಕೈಗೊಂಡಿದೆ.
ಟೊಯೊಟಾ ಕಂಪನಿಯು ತನ್ನ ಕಾರುಗಳಿಗೆ 3 ವರ್ಷ/1 ಲಕ್ಷ ಕಿ.ಮೀ. ವಾರೆಂಟಿ ನೀಡುತ್ತದೆ. ಮಾರುತಿ ಸುಜುಕಿ ಕೇವಲ 2 ವರ್ಷ/40 ಸಾವಿರ ಕಿ.ಮೀ. ವಾರೆಂಟಿ ನೀಡುತ್ತದೆ. ಎಂಪಿವಿ ಮಾರುಕಟ್ಟೆಯಲ್ಲಿ ಹೆಚ್ಚು ಗ್ರಾಹಕರನ್ನು ಸೆಳೆಯಲು ಕ್ಷೈಲೊ ಕಾರಿಗೆ ವಾರೆಂಟಿ ವಿಸ್ತರಿಸಿದೆ.
ಸದ್ಯ ಕಂಪನಿಯು ಕ್ಷೈಲೊ ಐದು ಆವೃತ್ತಿಗಳನ್ನು ಮತ್ತು ಮೂರು ಎಂಜಿನ್ ಆಯ್ಕೆಯಲ್ಲಿ ನೀಡುತ್ತದೆ. ಇತ್ತೀಚೆಗೆ ಮಹೀಂದ್ರ ಕ್ಷೈಲೊ ಕಾರುಗಳಿಗೆ ಬೇಡಿಕೆ ಗಮನಾರ್ಹವಾಗಿ ಏರಿಕೆ ಕಾಣುತ್ತಿದೆ. ಕಳೆದ ತಿಂಗಳು ಕ್ಷೈಲೊ ಮಾರಾಟ ಒಂದು ಲಕ್ಷ ಯುನಿಟ್ ತಲುಪಿತ್ತು.
ಮಹೀಂದ್ರ ಕ್ಷೈಲೊ ದರ
ಕ್ಷೈಲೊ ಡಿ2: 7.37 ಲಕ್ಷ ರು.
ಕ್ಷೈಲೊ ಡಿ4: 7.77 ಲಕ್ಷ ರು.
ಡಿ4(ಎಬಿಎಸ್): 8.34 ಲಕ್ಷ ರು.
ಡಿ8(ಎಬಿಎಸ್ ಮತ್ತು ಏರ್ ಬ್ಯಾಗ್): 9.47 ಲಕ್ಷ ರು.
ಇ8: 10.25 ಲಕ್ಷ ರುಪಾಯಿ


Click it and Unblock the Notifications









