ಆರಿಯಾ, ಕ್ಷೈಲೊ, ಇನ್ನೋವಾ: ದೊಡ್ಡ ಕಾರುಗಳ ಪುಟ್ಟ ವಿಮರ್ಶೆ

ಸಣ್ಣಕಾರಿನಿಂದ ದೊಡ್ಡಕಾರಿಗೆ ಬಡ್ತಿಪಡೆಯಲು ಬಯಸುವವರು, ದೊಡ್ಡ ಕುಟುಂಬದ ಸವಾರಿಗೆ ಸೂಕ್ತವಾದ ಕಾರನ್ನು ಹುಡುಕುತ್ತಿರುವವರು, ಒಟ್ಟಾರೆ ಮಲ್ಟಿ ಪರ್ಪೊಸ್ ಯಾನೆ ಎಂಪಿವಿ ಖರೀದಿಗೆ ಆಸಕ್ತಿ ತೋರುವರಿಗೆ ಇಷ್ಟವಾಗುವಂತಹ ಮೂರು ಬೆಸ್ಟ್ ಎಂಪಿವಿ ಇಲ್ಲಿದೆ.

ಒಂದಿಷ್ಟು ಜನರನ್ನು ಭೇಟಿಯಾಗಿ ನಿಮ್ಮ ಪ್ರಕಾರ ಬೆಸ್ಟ್ ಎಂಪಿವಿ ಯಾವುದು? ಎಂಬ ಪ್ರಶ್ನೆಯನ್ನು ಡ್ರೈವ್ ಸ್ಪಾರ್ಕ್ ವರದಿಗಾರರು ಕೇಳಿದ್ದಾರೆ. ಅದಕ್ಕೆ ಹೆಚ್ಚಿನ ಜನರು ಇನ್ನೋವಾ ಬೆಸ್ಟ್ ಎಂದಿದ್ದಾರೆ. ಉಳಿದಂತೆ ಕ್ಷೈಲೊ ಮತ್ತು ಆರಿಯಾ ಬೆಸ್ಟ್ ಎಂಪಿವಿ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ. ಆ ಮೂರು ದೊಡ್ಡ ಕಾರಿನ ಪುಟ್ಟ ವಿಮರ್ಶೆ ಇಲ್ಲಿದೆ.



ಟೊಯೊಟಾ ಇನ್ನೋವಾ:
ಫ್ಯಾಮಿಲಿ ಸವಾರಿಗೆ ಸೂಕ್ತವಾಗಿರುವ ಎಂಪಿವಿಗಳಲ್ಲಿ ಟೊಯೊಟಾ ಇನ್ನೋವಾಕ್ಕೆ ಮೊದಲ ಸ್ಥಾನ ನೀಡಬಹುದು. ರಸ್ತೆಯಲ್ಲಿ ಕಣ್ಣೆತ್ತಿ ನೋಡಿದರೆ ಇನ್ನೋವಾ ಕಾರುಗಳೇ ಕಣ್ಣಿಗೆ ಬೀಳುತ್ತವೆ. ಇತ್ತೀಚೆಗೆ ಇನ್ನೋವಾ ಪರಿಷ್ಕೃತ ಆವೃತ್ತಿಯು ರಸ್ತೆಗಿಳಿದಿದೆ. ಟೊಯೊಟಾ ಇನ್ನೋವಾ ದರ 10.37 ಲಕ್ಷ ರು.ನಿಂದ 15.60 ಲಕ್ಷ ರು.ವರೆಗಿದೆ. ಇನ್ನೋವಾ ಪೆಟ್ರೋಲ್ ಮೈಲೇಜ್ ಸುಮಾರು 9.5 ಕಿ.ಮೀ. ಮತ್ತು ಡೀಸೆಲ್ ಇನ್ನೋವಾ ಕಾರಿನ ಮೈಲೇಜ್ 12 ಕಿ.ಮೀ. ಇದೆ.

ಟಾಟಾ ಆರಿಯಾ: ಟಾಟಾ ಮೋಟರ್ಸ್ ಕಂಪನಿಯ ಪ್ರಮುಖ ಮಲ್ಟಿಪರ್ಪೊಸ್ ವೆಹಿಕಲ್ ಟಾಟಾ ಆರಿಯಾ. ಇದರ ಕ್ಯಾಬಿನ್ ಸ್ಥಳಾವಕಾಶ ಜಾಸ್ತಿಯಾಗಿದ್ದು ಆರಾಮವಾಗಿ ಪ್ರಯಾಣಿಸಬಹುದಾಗಿದೆ. ಆದರೆ ಇದರಲ್ಲಿ 4x4 ಆವೃತ್ತಿ ದುಬಾರಿ. ಆದರೆ 4x2 ಆರಿಯಾ ದರ ಕಡಿಮೆಯಿದೆ. ಟಾಟಾ ಆರಿಯಾ ದರ ಸುಮಾರು 13.52 ಲಕ್ಷ ರುಪಾಯಿಯಿಂದ 18.71 ಲಕ್ಷ ರುಪಾಯಿವರೆಗಿದೆ. ಆರಿಯಾ 4x4 ಮೈಲೇಜ್ ಪ್ರತಿಲೀಟರಿಗೆ 11.8 ಕಿ.ಮೀ. ಮತ್ತು ಆರಿಯಾ 4x2 ಮೈಲೇಜ್ ಪ್ರತಿಲೀಟರಿಗೆ 12 ಕಿ.ಮೀ. (ಆರಿಯಾ ಬಗ್ಗೆ ಹೆಚ್ಚಿನ ಮಾಹಿತಿ ).

ಮಹೀಂದ್ರ ಕ್ಷೈಲೊ: ಮಹೀಂದ್ರ ಕಂಪನಿಯ ಕ್ಷೈಲೊ ಕೂಡ ಎಂಪಿವಿಗಳಲ್ಲಿ ಇಷ್ಟವಾಗುವಂತದ್ದು. ಆರಿಯಾ ಮತ್ತು ಇನ್ನೋವಕ್ಕಿಂತ ಇದು ಅಗ್ಗದ ಕಾರು ಕೂಡ ಹೌದು. ಇದರ ದರ ಸುಮಾರು 7.37 ಲಕ್ಷ ರುಪಾಯಿ ಇದೆ. ಇತ್ತೀಚೆಗೆ ಪರಿಚಯಿಸಿದ ಫೇಸ್ ಲಿಫ್ಟೆಡ್ ಕ್ಷೈಲೊ ಕಾರಿನಲ್ಲಿ ಅಂತಹ ಮಹತ್ವದ ಬದಲಾವಣೆ ಇಲ್ಲ. ಆದರೆ ಇದರಲ್ಲಿ ಸ್ಕಾರ್ಪಿಯೊ ಎಂಜಿನ್ ಇರುವುದರಿಂದ ಕೊಟ್ಟ ದುಡ್ಡಿಗೆ ಮೋಸವಿಲ್ಲ. ಇದರ ಮೈಲೇಜ್ ಪ್ರತಿಲೀಟರಿಗೆ ಸುಮಾರು 11.6 ಕಿ.ಮೀ ಇದೆ.

Most Read Articles

Kannada
English summary
Best 3 MPVs for Your Budget. Toyota Innova, Tata Aria Best in MPV Segment. Mahindra Xylo great value for money car. Read Innova, Aria, Xylo Price, Mileage and Small Review.
Story first published: Friday, April 27, 2012, 15:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X