ದೇಶದತ್ತ ಮುಖ ಮಾಡಿದ ಷೆವರ್ಲೆ ಸ್ಪಿನ್
ಅಮೆರಿಕ ಮೂಲದ ಐಕಾನಿಕ್ ಜನರಲ್ ಮೋಟಾರ್ಸ್ ಕಾರು ಬ್ರಾಂಡ್ ಆಗಿರುವ ಷೆವರ್ಷೆ ಅತಿ ನೂತನ ಸ್ಪಿನ್ ಬಹು ಬಳಕೆಯ ವಾಹನವನ್ನು (ಎಂಪಿವಿ) ಭಾರತದಲ್ಲಿ ಬಿಡುಗಡೆ ಮಾಡಲಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮುಂದಿನ ತಿಂಗಳಾರಂಭದಲ್ಲಿ ನಡೆಯಲಿರುವ 13ನೇ ಆವೃತ್ತಿಯ 2016 ಇಂಡಿಯನ್ ಆಟೋ ಎಕ್ಸ್ ಪೋದಲ್ಲಿ ಅತಿ ನೂತನ ಷೆವರ್ಲೆ ಸ್ಪಿನ್ ಅನಾವರಣಗೊಳ್ಳಲಿದೆ.

ಈ ನಡುವೆ ಷೆವರ್ಲೆ ಸ್ಪಿನ್ ಟೆಸ್ಟಿಂಗ್ ವೇಳೆ ಹಲವಾರು ಬಾರಿ ಕ್ಯಾಮೆರಾ ರಹಸ್ಯ ಕಣ್ಣುಗಳಿಗೆ ಸೆರೆ ಸಿಕ್ಕಿವೆ. ಹಾಗಿದ್ದರೂ ಷೆವರ್ಲೆ ಸ್ಪಿನ್ 2017 ಸಾಲಿನಲ್ಲಷ್ಟೇ ದೇಶದ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ.
ಬಲ್ಲ ಮೂಲಗಳ ಪ್ರಕಾರ ಪ್ರಸ್ತುತ ಮಾರುಕಟ್ಟೆಯಲ್ಲಿರುವ ತನ್ನ ಸೋದರ ಎಂಜಾಯ್ ಮಾದರಿಯ ಸ್ಥಾನವನ್ನು ನಿಧಾನವಾಗಿ ಸ್ಪಿನ್ ತುಂಬಿಕೊಳ್ಳಲಿದೆ. ಎಂಜಾಯ್ ಗೆ ಹೋಲಿಸಿದಾ ಸ್ಪಿನ್ ಹೆಚ್ಚು ಪ್ರೀಮಿಯಂ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ.
ಕಾರಿನಡಿಯಲ್ಲಿ 1.4 ಲೀಟರ್ ಪೆಟ್ರೋಲ್ ಹಾಗೂ 1.3 ಲೀಟರ್ ಡೀಸೆಲ್ ಎಂಜಿನ್ ಲಗತ್ತಿಸಲಾಗುವುದು. ಇವೆರಡು ಅನುಕ್ರಮವಾಗಿ 102.57 ಹಾಗೂ 88.77 ಅಶ್ವಶಕ್ತಿಯನ್ನು ಉತ್ಪಾದಿಸಲಿದ್ದು, 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆಯಲಿದೆ.
ದೇಶದಲ್ಲಿ ಪ್ರಮುಖವಾಗಿಯೂ ಮಾರುತಿ ಸುಜುಕಿ ಎರ್ಟಿಗಾ, ಹೋಂಡಾ ಮೊಬಿಲಿಯೊ ಹಾಗೂ ರೆನೊ ಲೊಡ್ಜಿ ಮಾದರಿಗಳಿಗೆ ಷೆವರ್ಲೆ ಸ್ಪಿನ್ ಪ್ರತಿಸ್ಪರ್ಧಿಯಾಗಲಿದೆ.


Click it and Unblock the Notifications















