ಇಂಡೋನೇಷ್ಯಾದಲ್ಲಿ ಮೋಡಿ ಮಾಡಿದ ಷೆವರ್ಲೆ ಸ್ಪಿನ್
ಬಹುನಿರೀಕ್ಷಿತ ಷೆವರ್ಲೆ ಸ್ಪಿನ್ ಬಹು ಬಳಕೆಯ ವಾಹನವು ಮುಂದಿನ ವರ್ಷ ಭಾರತ ಪ್ರವೇಶ ಪಡೆಯಲಿದೆ ಎಂಬುದನ್ನು ಅಮೆರಿಕ ಮೂಲದ ಜನರಲ್ ಮೋಟಾರ್ಸ್ ಸಂಸ್ಥೆಯು ಖಚಿತಪಡಿಸಿಕೊಂಡಿದೆ.
ಹಾಗಿರುವಾಗ ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಆಟೋ ಶೋದಲ್ಲಿ (Gaikindo Indonesia International Auto Show) ಪ್ರದರ್ಶನ ಕಾಣುವ ಮೂಲಕ ನೂತನ ಷೆವರ್ಲೆ ಸ್ಪಿನ್ ನೆರೆದಿದ್ದ ವಾಹನ ಪ್ರೇಮಿಗಳನ್ನು ಮೋಡಿ ಮಾಡಿದೆ.

ಇದು ಪ್ರಮುಖವಾಗಿಯೂ ಫೋರ್ಡ್ ಇಕೊಸ್ಪೋರ್ಟ್, ರೆನೊ ಡಸ್ಟರ್ ಮತ್ತು ಹ್ಯುಂಡೈ ಕ್ರೆಟಾ ಮಾದರಿಗಳಿಗೆ ಸ್ಪರ್ಧೆಯನ್ನು ಒಡ್ಡಲಿದ್ದು, 7ರಿಂದ 10 ಲಕ್ಷ ರು.ಗಳಷ್ಟು ಅಂದಾಜು ಎಕ್ಸ್ ಶೋ ದೆಹಲಿ ಬೆಲೆಯನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ.
ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳಲ್ಲಿ ಬಿಡುಗಡೆ ಮಾಡುವ ಯೋಜನೆಯನ್ನು ಸಂಸ್ಥೆಯು ಹೊಂದಿದೆ. ಇವೆರಡು ಅನುಕ್ರಮವಾಗಿ 1.5 ಹಾಗೂ 1.3 ಲೀಟರ್ ಎಂಜಿನ್ ಪಡೆದುಕೊಳ್ಳಲಿದೆ.
1.5 ಲೀಟರ್ 4 ಸಿಲಿಂಡರ್ ಡೀಸೆಲ್ (107 ಅಶ್ವಶಕ್ತಿ, 148 ಎನ್‌ಎಂ ತಿರುಗುಬಲ)
ಗೇರ್ ಬಾಕ್ಸ್: 6 ಸ್ಪೀಡ್ ಆಟೋಮ್ಯಾಟಿಕ್
1.3 ಲೀಟರ್ 4 ಸಿಲಿಂಡರ್ ಪೆಟ್ರೋಲ್ (90 ಅಶ್ವಶಕ್ತಿ, 200 ಎನ್‌ಎಂ ತಿರುಗುಬಲ)
ಗೇರ್ ಬಾಕ್ಸ್: ಫೈವ್ ಸ್ಪೀಡ್ ಮ್ಯಾನುವಲ್
ಏಳು ಸೀಟುಗಳ ಷೆವರ್ಲೆ ಸ್ಪಿನ ್2525 ಎಂಎಂ ಚಂಕ್ರಾಂತರ, 4360 ಎಂಎಂ ಉದ್ದ, 1735 ಎಂಎಂ ಅಗಲ ಮತ್ತು 1683 ಎಂಎಂ ಎತ್ತರವನ್ನು ಪಡೆದುಕೊಳ್ಳಲಿದೆ. ಅಲ್ಲದೆ 50 ಲೀಟರ್ ಇಂಧನ ಟ್ಯಾಂಕ್ ಸಹ ಇದರಲ್ಲಿರಲಿದೆ.
ಐದು ಆಕರ್ಷಕ ಬಣ್ಣಗಳು
ಮಾಂಡ್ ಗ್ರೇ ಮೆಟ್ಯಾಲಿಕ್,
ಸಮ್ಮಿತ್ ವೈಟ್,
ಬ್ಲ್ಯಾಕ್ ಸಪೈರ್,
ಸ್ವಿಚ್ ಬ್ಲೇಡ್ ಮೆಟ್ಯಾಲಿಕ್,
ಬೆರ್ರಿ ರೆಡ್ ಮೆಟ್ಯಾಲಿಕ್.


Click it and Unblock the Notifications








