ಒಂದು ಲಕ್ಷ ಕ್ಷೈಲೊ ಮಾರಾಟದ ಕನಸಲಿ ಮಹೀಂದ್ರ

ಕಳೆದ ಮೂರು ವರ್ಷಗಳಿಂದ 90 ಸಾವಿರದಷ್ಟು ಮಲ್ಟಿಪರ್ಪೊಸ್ ವೆಹಿಕಲ್ ಕ್ಷೈಲೊ ಮಾರಾಟವಾಗಿತ್ತು. ಈ ಆರ್ಥಿಕ ವರ್ಷದ ಉಳಿದ ಅವಧಿಯಲ್ಲಿ ಒಟ್ಟು ಒಂದು ಲಕ್ಷ ಕ್ಷೈಲೊ ಮಾರಾಟ ಮಾಡುವ ಗುರಿಯನ್ನು ಕಂಪನಿ ಹೊಂದಿದೆ.
"ಮಹೀಂದ್ರ ಕ್ಷೈಲೊ ಕಾರಿಗೆ ಗ್ರಾಹಕರಿಂದ ಅತ್ಯುತ್ತಮ ಬೆಂಬಲ ವ್ಯಕ್ತವಾಗಿದೆ. ಇದು ಒಂದು ಲಕ್ಷ ಕ್ಷೈಲೊ ಮಾರಾಟಕ್ಕೆ ನೆರವಾಗಲಿದೆ" ಎಂದು ಕಂಪನಿಯ ಹಿರಿಯ ಪ್ರಧಾನ ವ್ಯವಸ್ಥಾಪಕರಾದ ರವಿಂದ್ರ ಎಸ್ ಸಹನೆ ಹೇಳಿದ್ದಾರೆ.
ನೂತನ ಮಹೀಂದ್ರ ಕ್ಷೈಲೊ ದರ ಸುಮಾರು 7.32 ಲಕ್ಷ ರು.ನಿಂದ 10.24 ಲಕ್ಷ ರು.ವರೆಗಿದೆ. ಇದು ಎಕ್ಸ್ ಶೋರೂಂ ದರ. ಕಂಪನಿಯು ದೀಪಾವಳಿಗೆ ಮುನ್ನ ಮಿನಿ ಕ್ಷೈಲೊ ಕಾರನ್ನು ಕೂಡ ಹೊರತರಲು ಯೋಜಿಸಿದೆ.


Click it and Unblock the Notifications








