ಅಮೆರಿಕಾದಲ್ಲಿ ಹೊಸ ದಾಖಲೆ ಬರೆದ ಮಹೀಂದ್ರ ಮತ್ತು ಮಹೀಂದ್ರ

Written By:

ಮಹೀಂದ್ರಾ ಮತ್ತು ಮಹೀಂದ್ರಾ ಸಂಸ್ಥೆ ವಿಶ್ವದ ಆಟೊ ರಾಜಧಾನಿ ಡೆಟ್ರಾಯಿಟ್‌ನಲ್ಲಿ ಆಟೊ ತಯಾರಿಕಾ ಘಟಕವನ್ನು ತೆರೆಯಲು ಸಿದ್ಧವಾಗಿದ್ದು, ಈ ಮೂಲಕ ಹೊಸ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

To Follow DriveSpark On Facebook, Click The Like Button
ಅಮೇರಿಕಾದಲ್ಲಿ ಹೊಸ ದಾಖಲೆ ಬರೆದ ಮಹೀಂದ್ರಾ ಮತ್ತು ಮಹೀಂದ್ರ

ವಿಶ್ವದ ಆಟೊ ರಾಜಧಾನಿ ಎಂಬ ಹೆಸರಿನೊಂದಿಗೆ ಪ್ರಖ್ಯಾತಿ ಪಡೆದುಕೊಂಡಿರುವ ಡೆಟ್ರಾಯಿಟ್‌ನಲ್ಲಿ ಆಟೊ ತಯಾರಿಕಾ ಘಟಕವನ್ನು ತೆರೆಯಲು ಮಹೀಂದ್ರಾ ಮತ್ತು ಮಹೀಂದ್ರ ಸಂಸ್ಥೆ ಮುಂದಾಗಿದ್ದು, ಯುಎಸ್‌ನಲ್ಲಿ ತಯಾರಿಕಾ ಘಟಕ ಆರಂಭಿಸಿದ ಮೊದಲ ಭಾರತೀಯ ಕಾರು ತಯಾರಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಈ ಸಂಸ್ಥೆ ಭಾಜನವಾಗಿದೆ.

ಅಮೇರಿಕಾದಲ್ಲಿ ಹೊಸ ದಾಖಲೆ ಬರೆದ ಮಹೀಂದ್ರಾ ಮತ್ತು ಮಹೀಂದ್ರ

ಮಹೀಂದ್ರ ಮತ್ತು ಮಹೀಂದ್ರ ಕಂಪನಿಯು ಪ್ರಸಕ್ತ ವರ್ಷದಲ್ಲಿ $ 1.5 ಶತಕೋಟಿ ಹಣವನ್ನು ಗಳಿಸಿದೆ ಹಾಗು ಮುಂದಿನ ಎರಡು-ಮೂರು ವರ್ಷಗಳಲ್ಲಿ ದ್ವಿಗುಣ($ 2.5 ಶತಕೋಟಿ)ಗೊಳಿಸಲು ಯೋಜನೆ ರೂಪಿಸಿದೆ.

ಅಮೇರಿಕಾದಲ್ಲಿ ಹೊಸ ದಾಖಲೆ ಬರೆದ ಮಹೀಂದ್ರಾ ಮತ್ತು ಮಹೀಂದ್ರ

ತನ್ನ ಯು.ಎಸ್. ಗ್ರೀನ್‌ಫೀಲ್ಡ್ ಆಟೊ ತಯಾರಿಕಾ ಘಟಕದಲ್ಲಿ ಮಹೀಂದ್ರ ಮತ್ತು ಮಹೀಂದ್ರ ಅಮೇರಿಕ ಸಂಸ್ಥೆಯು 3,000 ಉದ್ಯೋಗಾವಕಾಶ ಸಹ ನೀಡುವ ಮೂಲಕ ಹೆಚ್ಚಿನ ಉದ್ಯೋಗ ಸೃಷ್ಟಿ ಮಾಡಲಿದೆ.

ಅಮೇರಿಕಾದಲ್ಲಿ ಹೊಸ ದಾಖಲೆ ಬರೆದ ಮಹೀಂದ್ರಾ ಮತ್ತು ಮಹೀಂದ್ರ

"ನಾವು ಈ ವರ್ಷ ಡೆಟ್ರಾಯಿಟ್‌ನಲ್ಲಿ ಉತ್ಪಾದನಾ ಘಟಕ ತೆರೆಯುವ ಮುಂದಾಗಿದ್ದು, ಭಾರತೀಯ ವಾಹನ ಕಂಪನಿಯೊಂದರ ಈ ರೀತಿಯ ಸಾಧನೆಯೊಂದು ಪ್ರಮುಖವಾದ ಮೈಲಿಗಲ್ಲು ಆಗಿದ್ದು, ಇದು ಇತಿಹಾಸದ ಅದ್ಭುತ ತಿರುವು ಎಂದು ನಾನು ಭಾವಿಸುತ್ತೇನೆ" ಎಂದು ನ್ಯೂಯಾರ್ಕ್ ಸಂದರ್ಶನವೊಂದರಲ್ಲಿ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರ ತಿಳಿಸಿದ್ದಾರೆ.

ಅಮೇರಿಕಾದಲ್ಲಿ ಹೊಸ ದಾಖಲೆ ಬರೆದ ಮಹೀಂದ್ರಾ ಮತ್ತು ಮಹೀಂದ್ರ

ಮಾತನ್ನು ಮುಂದುವರೆಸಿದ ಆನಂದ್ ಮಹೀಂದ್ರ ಅವರು, "ಹೂಡಿಕೆ ಮಾಡಲು ಅಮೆರಿಕವು ಹೆಚ್ಚು ಲಾಭದಾಯಕ ಸ್ಥಳಗಳಲ್ಲಿ ಒಂದಾಗಿದೆ ಎಂದು ನಾನು ನಂಬುತ್ತೇನೆ" ಎಂದು ಅಮೆರಿಕದ ಕೈಗಾರಿಕಾ ಸೌಲಭ್ಯಗಳ ಬಗ್ಗೆ ತಿಳಿಸಿದರು.

ಅಮೇರಿಕಾದಲ್ಲಿ ಹೊಸ ದಾಖಲೆ ಬರೆದ ಮಹೀಂದ್ರಾ ಮತ್ತು ಮಹೀಂದ್ರ

"ಟ್ರಂಪ್ ಹೊಸ ನಿಯಮಗಳು ಮುಂದಿನ 5 ಅಥವಾ 10 ವರ್ಷಗಳ ನಂತರ ಪರಿಣಾಮ ಬೀರಲಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಗಳು ಅಮೆರಿಕದಲ್ಲಿ ಆಗುವುದಿಲ್ಲ" ಎಂದು ಗ್ರೂಪ್ ಅಧ್ಯಕ್ಷರಾದ ಆನಂದ್ ಮಹೀಂದ್ರ ಹೇಳಿದರು.

English summary
Mahindra & Mahindra is all set to open an auto manufacturing plant in world's auto capital-Detroit-this year, becoming the first Indian car maker to do so in the US.
Please Wait while comments are loading...

Latest Photos