ಟಾಟಾದಿಂದ ಹೊಸ ಆರಿಯಾ ಲಾಂಚ್; ದರ ಎಷ್ಟು?
ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ನೂತನ ಆರಿಯಾ ಫೇಸ್‌ಲಿಫ್ಟ್ ವರ್ಷನ್ ಲಾಂಚ್ ಮಾಡಿದೆ. ಇದರ ದೆಹಲಿ ಎಕ್ಸ್ ಶೋ ರೂಂ ದರ 9.95 ಲಕ್ಷ ರು.ಗಳಾಗಿವೆ.
ನೂತನ ಆರಿಯಾದಲ್ಲಿ ಕೇವಲ ಅಂದತೆ ಮಾತ್ರ ಕಂಡುಬಂದಿಲ್ಲ. ಬದಲಾಗಿ ಎಂಜಿನ್ ಮಾನದಂಡಗಳಲ್ಲೂ ಬದಲಾವಣೆಯಾಗಿದೆ. ಟಾಟಾದ ಈ ಕ್ರಾಸೋವರ್ ಆವೃತ್ತಿಯು ಮಾರುಕಟ್ಟೆಯಲ್ಲಿ ನಿರೀಕ್ಷಿಸಿದಷ್ಟು ಯಶ ಸಾಧಿಸಿರಲಿಲ್ಲ. ದರ ಸ್ವಲ್ಪ ದುಬಾರಿಯಾಗಿರುವುದು ಹಿನ್ನಡೆಗೆ ಕಾರಣವಾಗಿತ್ತು. ಆದರೆ ಇದೀಗ ಎಲ್ಲ ಹೊಸತನದಿಂದ ಕೂಡಿದ ಆರಿಯಾ ಗ್ರಾಹಕರನ್ನು ಗಮನ ಸೆಳೆಯುವ ನಿರೀಕ್ಷೆಯಲ್ಲಿದೆ.

ಪ್ರಸ್ತುತ ಸದ್ದಿಲ್ಲದೆ ಫೇಸ್‌ಲಿಫ್ಟ್ ಆರಿಯಾ ಎಂಟ್ರಿ ಕೊಟ್ಟಿದೆ. ಇದು ಹೊಸತಾದ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಟೈಲ್ ಲ್ಯಾಂಪ್‌ನಲ್ಲಿ ಕ್ಲಿಯರ್ ಲೆನ್ಸ್, ಡಿಕಾಲ್ಸ್ ಇರಲಿದೆ.

ಅಂದ ಹಾಗೆ ನೂತನ ಆರಿಯಾ 2.2 ಲೀಟರ್ ವ್ಯಾರಿಕೋರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 150 ಪಿಎಸ್ ಪವರ್ ಉತ್ಪಾದಿಸಲಿದೆ. ಇದು ಹಿಂದಿನ ಆವೃತ್ತಿಗಿಂತಲೂ 10ಪಿಎಸ್ ಪವರ್ ಹೆಚ್ಚಾಗಿದೆ. ಹಾಗೆಯೇ 324 ಎನ್‌ಎಂ ಟಾರ್ಕ್ ಹೊಂದಿರಲಿದೆ.

ಇನ್ನು ಭಾರತ ವಾಹನ ಅಧ್ಯಯನ ಮಾನ್ಯತೆ ಪ್ರಕಾರ ನೂತನ ಆರಿಯಾ ಪ್ರತಿ ಲೀಟರ್‌ಗೆ 15.5 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಸಾಮಾನ್ಯವಾಗಿ ಟಾಟಾ ಕಾರುಗಳಿಗೆ ಗುಣಮಟ್ಟತೆ ಬಗ್ಗೆ ಪ್ರಶ್ನೆ ಎತ್ತುತ್ತಾರೆ. ಆದರೆ ಇವೆಲ್ಲದಕ್ಕಿಂತ ವಿರುದ್ಧವಾಗಿ ಹೊಸ ಆರಿಯಾದಲ್ಲಿ ಗುಣಮಟ್ಟತೆಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ.

ಸೌಲಭ್ಯಗಳು
ಸೀಟ್ ಅಪ್‌ಹೋಲ್‌ಸ್ಟರಿ,
ಡೋರ್ ಹ್ಯಾಂಡಲ್‌ನಲ್ಲಿ ಕ್ರೋಮ್ ಅಸೆಂಟ್,
ಪಿಲ್ಲರ್ ಮೌಂಟೆಡ್ ಎಸಿ ವೆಂಟ್ಸ್,
ಹೊಸತಾದ ಎಸಿ ವೆಂಟ್ಸ್, ನೇವ್‌ಟೆಕ್ ನೇವಿಗೇಷನ್ ಸಿಸ್ಟಂ,
ಹರ್ಮನ್ ಕಾರ್ಡನ್ ಆಡಿಯೋ ಸಿಸ್ಟಂ,
ಬ್ಲೂಟೂತ್ ಕನೆಕ್ಟಿವಿಟಿ.
ರೈನ್ ಸೆನ್ಸಿಂಗ್ ಹೆಡ್‌ಲ್ಯಾಂಪ್, ವೈಪರ್
ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್
ಕ್ರೂಸ್ ಕಂಟ್ರೋಲ್, ಚಿಲ್ಡ್ ಗ್ಲೋವ್ ಬಾಕ್ಸ್.

ಸುರಕ್ಷತೆ
ಆರು ಏರ್ ಬ್ಯಾಗ್,
ಇಎಸ್‌ಪಿ, ಎಬಿಎಸ್, ಎಲ್ಲ ಚಕ್ರಗಳಿಗೂ ಡಿಸ್ಕ್ ಬ್ರೇಕ್
ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ (ಟಿಸಿಎಸ್).

ಮೂರು ವೆರಿಯಂಟ್‌ಗಳಲ್ಲಿ ಆರಿಯಾ ಆಗಮನವಾಗಲಿದೆ. ಅವುಗಳೆಂದರೆ
ಆರಿಯಾ ಪ್ಯೂರ್ 4x2 - 9.95 ಲಕ್ಷ ರು.
ಆರಿಯಾ ಪ್ಲೆಷರ್ 4x2 - 12 ಲಕ್ಷ ರು.
ಆರಿಯಾ ಪ್ರೈಡ್ 4x4 - 14.74 ಲಕ್ಷ ರು.

ಅಷ್ಟೇ ಅಲ್ಲದೆ ಮೂರು ವರ್ಷಗಳ ಅಥವಾ 10000 ಕೀ.ಮೀ. ವರೆಗಿನ ವಾರಂಟಿ ಸಹ ಒದಗಿಸುತ್ತಿದೆ. ಹಾಗೆಯೇ ನೂತನ ವ್ಯಾರಿಕೋರ್ (Varicor) ಎಂಜಿನ್‌ಗೂ 150000 ಕೀ.ಮೀ. ಅಥವಾ ಮೂರು ವರ್ಷಗಳ ವಾರಂಟಿಯನ್ನು ನೀಡುತ್ತಿದೆ.
ಇಂದಿನ ಫೇಸ್‌ಬುಕ್ ವೀಡಿಯೋ


Click it and Unblock the Notifications








