ಟೀಸರ್ ಅಲ್ಲ; ಇದೇ ಟೊಯೊಟಾದ ನೈಜ 2014 ಕರೊಲ್ಲಾ

By Nagaraja

ಇದುವರೆಗೆ 2014 ಟೊಯೊಟಾ ಕರೊಲ್ಲಾ ಟೀಸರ್ ಚಿತ್ರ ಬಿಡುಗಡೆಯಾಗಿರುವುದನ್ನು ನೀವು ನೋಡಿರುತ್ತೀರಾ. ಆದರೆ ಕಂಪನಿಯು ಇದೀಗ ಸೆಡಾನ್‌ ಮಾಡೆಲ್‌ಗಳಿಗೆ ಅತಿದೊಡ್ಡ ಮಾರುಕಟ್ಟೆ ಹೊಂದಿರುವ ಅಮೆರಿಕದಲ್ಲಿ ಆಲ್ ನ್ಯೂ 2014 ಟೊಯೊಟಾ ಕರೊಲ್ಲಾ ಕಾರನ್ನು ಅನಾವರಣಗೊಳಿಸಿದೆ.

ಜನವರಿಯಲ್ಲಿ ಸಾಗಿದ್ದ ಡೆಟ್ರಾಯ್ಟ್ ಆಟೋ ಶೋದಲ್ಲಿ ಪ್ರದರ್ಶನಗೊಂಡಿದ್ದ ಈ ಪ್ಯೂರಿಯಾ ಕಾನ್ಸೆಪ್ಟ್ ಕರೊಲ್ಲಾ ಹೆಚ್ಚು ಸ್ಪರ್ಧಾತ್ಮಕ ಕ್ರೀಡಾ ವಿನ್ಯಾಸವನ್ನು ಹೊಂದಿದ್ದು, ಯುವ ಗ್ರಾಹಕರನ್ನು ಗುರಿಯಾಗಿರಿಸಿಕೊಂಡಿದೆ.

ಭಾರತದಲ್ಲಿ ಕರೊಲ್ಲಾ ಆಲ್ಟೀಸ್ ಎಂಬ ನಾಮಕರಣದಲ್ಲಿ ಮಾರಾಟದಲ್ಲಿರುವ ಕರೊಲ್ಲಾ ಹೊಸ ವರ್ಷನ್ 2014 ಆರಂಭದಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

ಅಮೆರಿಕ ಮಾದರಿಯ ಕರೊಲ್ಲಾದಲ್ಲಿ 1.8 ಲೀಟರ್ ಫೋರ್ ಸಿಲಿಂಡರ್ ಎಂಜಿನ್ ಹೊಂದಿರಲಿದ್ದು, 132 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅಂತೆಯೇ ಇಕೊ ವೆರಿಯಂಟ್ 140 ಅಶ್ವಶಕ್ತಿ ಉತ್ಪಾದಿಸಲಿದೆ. ಇನ್ನು ಭಾರತಕ್ಕೆ ಆಗಮನವಾಗಲಿರುವ ಕರೊಲ್ಲಾ ಸಮಾನ ಎಂಜಿನ್ ಪಡೆದುಕೊಳ್ಳಲಿದೆ. ಹಾಗೆಯೇ ಪೆಟ್ರೋಲ್ ಎಂಜಿನ್‌ನಲ್ಲಿ ಸೆವೆನ್ ಸ್ಪೀಡ್ ಸಿವಿಟಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ.

ಹಾಗೆಯೇ ಅಮೆರಿಕಕ್ಕೆ ಆಗಮನವಾಗಲಿರುವ ಎಲ್ಲ ಸ್ಟಾಂಡರ್ಡ್ ವೆರಿಯಂಟ್‌ಗಳಲ್ಲೂ ಎಲ್‌ಇಡಿ ಹೆಡ್ ಲೈಡ್ ಹಾಗೂ 17 ಇಂಚು ಅಲಾಯ್ ವೀಲ್ ಹೊಂದಿರಲಿದೆ. ಹೆಚ್ಚಿನ ಮಾಹಿತಿಗಾಗಿ ಫೋಟೊ ಫೀಚರ್‌ನತ್ತ ಕಣ್ಣಾಯಿಸಿರಿ.

2014 Toyota Corolla

2014 ಟೊಯೊಟಾ ಕರೊಲ್ಲಾ ಫ್ಯೂರಿಯಾ ಕಾನ್ಸೆಪ್ಟ್‌ನಲ್ಲಿ (Furia concept) ಆಗಮನವಾಗಿದ್ದು, ಹೆಚ್ಚು ಆಕರ್ಷಕವಾಗಿ ಗೋಚರಿಸುತ್ತಿದೆ.

2014 Toyota Corolla Revealed

ಮುಂಭಾಗವು ಹೆಚ್ಚು ಕೆಚ್ಚೆದೆಯ ವಿನ್ಯಾಸವನ್ನು ನೀಡುತ್ತಿರುವುದು ಕಾರಿನ ಆಕರ್ಷತೆಗೆ ಹೆಚ್ಚಲು ಕಾರಣವಾಗಿದೆ.

2014 Toyota Corolla Revealed

ಇನ್ನು ಕಾರಿನ ಬದಿಗಳಲ್ಲೂ ಕ್ರೀಡಾ ವಿನ್ಯಾಸ ಪ್ರದಾನ ಮಾಡುವದಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗಿದೆ.

2014 Toyota Corolla Revealed

ಟೊಯೊಟಾ ಕರೊಲ್ಲಾ ವೀಲ್ ಬೇಸ್ 100 ಎಂಎಂ ಆಗಿದ್ದು, ಒಟ್ಟಾರೆ 4639 ಎಂಎಂ ವ್ಯಾಪ್ತಿ ಹೊಂದಿದೆ.

2014 Toyota Corolla Revealed

ಇಂಟಿರಿಯರ್ ಭಾಗಗಳಿಗೆ ಪ್ರೀಮಿಯಂ ಸ್ಪರ್ಶ ನೀಡಲಾಗಿದೆ. ಹಾಗೆಯೇ ಟಚ್‌ಸ್ಕ್ರೀನ್ ಮಾಹಿತಿ ಸಿಸ್ಟಂಗಳಂತಹ ಫೀಚರ್‌ಗಳನ್ನು ಹೊಂದಿದೆ.

2014 Toyota Corolla Revealed

ಒಟ್ಟಾರೆಯಾಗಿ 11ನೇ ಜನರೇಷನ್ ಟೊಯೊಟಾ ಕರೊಲ್ಲಾ ಭಾರತ ಪ್ರವೇಶ ಮಾಡುವಾಗ ಕೆಲವೊಂದು ಬದಲಾವಣೆ ಕಂಡುಬರಲಿದೆ.

2014 ಟೊಯೊಟಾ ಕರೊಲ್ಲಾ

2014 ಟೊಯೊಟಾ ಕರೊಲ್ಲಾ

2014 ಟೊಯೊಟಾ ಕರೊಲ್ಲಾ

2014 ಟೊಯೊಟಾ ಕರೊಲ್ಲಾ

2014 ಟೊಯೊಟಾ ಕರೊಲ್ಲಾ

2014 ಟೊಯೊಟಾ ಕರೊಲ್ಲಾ

2014 ಟೊಯೊಟಾ ಕರೊಲ್ಲಾ

2014 ಟೊಯೊಟಾ ಕರೊಲ್ಲಾ

2014 ಟೊಯೊಟಾ ಕರೊಲ್ಲಾ

2014 ಟೊಯೊಟಾ ಕರೊಲ್ಲಾ

More from DriveSpark

Article Published On: Friday, June 7, 2013, 14:28 [IST]
English summary
The all new 2014 Toyota Corolla has been revealed in the U.S., the sedan's largest market. The new Corolla, based on the Furia concept car showcased in January in Detroit, is sporty and muscular, clearly targeted at a younger age group of buyers. The new Toyota Corolla, sold as the Corolla Altis in India, will be launched here in early 2014.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+