ಆಕರ್ಷಕ ಇಂಟಿರಿಯರ್; 2014 ರೆನೊ ಪಲ್ಸ್ ಲಾಂಚ್
ನಿಸ್ಸಾನ್ ಮೈಕ್ರಾ ತಲಹದಿಯ ರೆನೊ ಪಲ್ಸ್, ಪರಿಷ್ಕೃತ ಒಳಮೈ ಬದಲಾವಣೆಯೊಂದಿಗೆ ಬಿಡುಗಡೆಯಾಗಿದೆ. ಇದೀಗ ಈ ಬಿ ಸೆಗ್ಮೆಂಟ್ ಕಾರು ಹೆಚ್ಚಿನ ಸಂಖ್ಯೆ ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.
2014 ರೆನೊ ಪಲ್ಸ್ ಹೊರಂಗಣ ಹಾಗೂ ತಾಂತ್ರಿಕ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಆದರೆ ಕಾರಿನ ಒಳಮೈಯಲ್ಲಿ ಗಮನಾರ್ಹ ಬದಲಾವಣೆ ತರಲಾಗಿಲ್ಲ.

ಪಿಯನೊ ಬ್ಲ್ಯಾಕ್ ಗ್ಲೋಸಿ ಫಿನಿಶ್ ಕಾರಿನ ಒಳಮೈಗೆ ವಿಶೇಷ ನೋಟ ಪ್ರದಾನ ಮಾಡಲಿದೆ. ಇದು ಬೇಸ್ ಆರ್‌ಎಕ್ಸ್‌ಇ ಪೆಟ್ರೋಲ್ ಹೊರತುಪಡಿಸಿ ಇತರೆಲ್ಲ ವೆರಿಯಂಟ್‌ಗಳಲ್ಲಿ ಲಭ್ಯವಾಗಲಿದೆ.
ಹಾಗೆಯೇ ಹೊಸ ಮೈಕ್ರಾದ 2 ಡಿನ್ ಆಡಿಯೋ ಸಿಸ್ಟಂ ಜತೆ ಬ್ಲೂಟೂತ್ ಸಹ ಆಮದು ಮಾಡಲಾಗಿದೆ. ಕೊನೆಯದಾಗಿ ಸೀಟು ಕವರ್‌ಗಳನ್ನು ಬದಲಾಯಿಸಲಾಗಿದೆ.

ಅಂದ ಹಾಗೆ ರೆನೊ ಪಲ್ಸ್ 1.2 ಲೀಟರ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 75 ಅಶ್ವಶಕ್ತಿ (104 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ 1.5 ಲೀಟರ್ 4 ಸಿಲಿಂಡರ್ ಡೀಸೆಲ್ ಎಂಜಿನ್ 63 ಅಶ್ವಶಕ್ತಿ (160 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.


Click it and Unblock the Notifications








