2015 ಬಿಎಂಡಬ್ಲ್ಯು ಎಕ್ಸ್6 ಅನಾವರಣ; ಸದ್ಯದಲ್ಲೇ ಬಿಡುಗಡೆ

By Nagaraja

ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು, ಇತ್ತೀಚೆಗಷ್ಟೇ ಎಕ್ಸ್5 ಐಷಾರಾಮಿ ಎಸ್‌‍ಯುವಿ ಕಾರನ್ನು ಬಿಡುಗಡೆಗೊಳಿಸಿತ್ತು. ಇದೀಗ ಈ ಐಕಾನಿಕ್ ಸಂಸ್ಥೆಯು ಜಾಗತಿಕವಾಗಿ ಸ್ಪೋರ್ಟ್ಸ್ ಆಕ್ಟಿವಿಟಿ ವಾಹನವಾಗಿರುವ (ಎಸ್‌ಎವಿ) ಎಕ್ಸ್6 ಅನಾವರಣಗೊಳಿಸಿದೆ.

ಈ ಬಹುನಿರೀಕ್ಷಿತ ಕಾರು ಸದ್ಯದಲ್ಲೇ ಭಾರತ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ. ಈಗಾಗಲೇ ಐಷಾರಾಮಿ ಕಾರು ವಿಭಾಗದಲ್ಲಿ ಅತ್ಯಂತ ಹೆಚ್ಚು ಅನುಭವಿಸಿರುವ ಬಿಎಂಡಬ್ಲ್ಯು, ತನ್ನ ಹೊಸ ಮಾದರಿಗಳನ್ನು ಪರಿಚಯಿಸುವುದರಲ್ಲಿ ಸದಾ ಬದ್ಧವಾಗಿದೆ.


ಸದ್ಯದಲ್ಲೇ ಎಕ್ಸ್6 ಜಾಗತಿಕ ಲಾಂಚ್ ಮಾಡಲಿರುವ ಬಿಎಂಡಬ್ಲ್ಯು, ತದಾ ಬಳಿಕ ಭಾರತ ಮಾರುಕಟ್ಟೆ ಪ್ರವೇಶಿಸಲಿದೆ. ಇದರ ಫ್ರಂಟ್ ಬಂಪರ್ ಹೆಚ್ಚು ಶಕ್ತಿಯುತವಾಗಿರಲಿದೆ.

ಎರಡನೇ ತಲೆಮಾರಿನ ಎಕ್ಸ್6 ಮಾದರಿಯು ಹಿಂದಿನ ಜನರೇಷನ್ ಎಕ್ಸ್6 ಮಾದರಿಗಿಂತಲೂ 32 ಎಂಎಂ ಉದ್ದ, 33 ಎಂಎಂ ಎತ್ತರ ಹಾಗೂ 6 ಎಂಎಂ ಹೆಚ್ಚು ಅಗಲ ಹೊಂದಿರಲಿದೆ. ಹಾಗೆಯೇ 2933 ಎಂಎಂ ವೀಲ್‌ಬೇಸ್ ಉಳಿಸಿಕೊಳ್ಳಲಾಗಿದೆ.

2015 ಎಕ್ಸ್6 ಮಾದರಿಯು ಒಟ್ಟು ಮೂರು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದರಲ್ಲಿ 4.4 ಲೀಟರ್ ವಿ8 ಟ್ವಿನ್ ಪವರ್ ಟರ್ಬೊ ಎಂಜಿನ್ 450 ಅಶ್ವಶಕ್ತಿ (650 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಹಾಗೆಯೇ ಕೇವಲ 4.8 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧನೆ ಅಂತೆಯೇ ಗಂಟೆಗೆ ಗರಿಷ್ಠ 250 ಕೀ.ಮೀ. ವೇಗತೆಯಲ್ಲಿ ಸಂಚರಿಸಲಿದೆ.


ಅದೇ ರೀತಿ ಡೀಸೆಲ್ ಸಿಕ್ಸ್ ಸಿಲಿಂಡರ್ 3.0 ಲೀಟರ್ ಟ್ವಿನ್ ಪವರ್ ಟರ್ಬೊ ಎಂಜಿನ್ 258 ಪಿಎಸ್ (560 ಎನ್‌ಎಂ ಟಾರ್ಕ್) ಪವರ್ ಉತ್ಪಾದಿಸಲಿದೆ. ಇದು 6.7 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ವೇಗವರ್ಧನೆ ಹಾಗೆಯೇ ಗಂಟೆಗೆ ಗರಿಷ್ಠ 230 ಕೀ.ಮೀ. ವೇಗತೆಯಲ್ಲಿ ಸಂಚರಿಸಲಿದೆ.

ಇನ್ನು ಮೂರನೇ ಎಂಜಿನ್ ಅತಿ ದುಬಾರಿಯೆನಿಸಿದ್ದು, ಇದು 3.0 ಲೀಟರ್ ಟ್ರೈ ಟರ್ಬೊ ಸಿಕ್ಸ್ ಸಿಲಿಂಡರ್ ಡೀಸೆಲ್ ಎಂಜಿನ್ ಪ್ರದಾನ ಮಾಡುತ್ತದೆ. ಇದು 381 ಪಿಎಸ್ (740 ಎನ್‌ಎಂ ಟಾರ್ಕ್) ಪಡೆಯಲಿದೆ. ಹಾಗೆಯೇ ಅತ್ಯಂತ ವೇಗವಾಗಿ ಅಂದರೆ 5.2 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ಹಾಗೆಯೇ ಗಂಟೆಗೆ ಗರಿಷ್ಠ 250 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

2015 BMW X6

More from DriveSpark

Article Published On: Saturday, June 7, 2014, 16:01 [IST]
English summary
The German luxury car manufacturer BMW recently launched the X5 with a facelift. Now they have globally unveiled its SAV(Sports Activity Vehicle) the X6 and it is sure to come to India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+