2015 ಸ್ಕೋಡಾ ಫ್ಯಾಬಿಯಾ ಸುಂದರ ಒಳಮೈ ನೋಡಲು ಬನ್ನಿ
ಜೆಕ್ ಗಣರಾಜ್ಯದ ಸ್ಕೋಡಾ ಸಂಸ್ಥೆಯು 2015 ಫ್ಯಾಬಿಯಾ ಹ್ಯಾಚ್‌ಬ್ಯಾಕ್ ಕಾರನ್ನು ಪ್ರದರ್ಶನಕ್ಕಿಟ್ಟಿದ್ದು, ನಿಧಾನವಾಗಿ ವೈಶಿಷ್ಟ್ಯಗಳನ್ನು ಒಂದೊಂದಾಗಿ ಹೊರಗೆಡವುತ್ತಿದೆ.
ಕಾರಿನ ಹೊರಮೈ ಬಗ್ಗೆ ವಿವರಣೆ ಕೊಟ್ಟಿರುವ ಸ್ಕೋಡಾ ಇದೀಗ ಸುಂದರ ಒಳಮೈಯತ್ತ ದಾಪುಗಾಲನ್ನಿಟ್ಟಿದೆ. ಈ ಬಗ್ಗೆ ಹೇಳಿಕೆ ಕೊಟ್ಟಿರುವ ಸ್ಕೋಡಾ ಮಂಡಳಿಯ ತಾಂತ್ರಿಕ ಅಭಿವೃದ್ಧಿ ಸದಸ್ಯರಾಗಿರುವ ಡಾ. ಫ್ರಾಂಕ್ ವೆಲ್ಸ್ ಪ್ರಾಯೋಗಿಕವಾಗಿಯೂ ಸ್ಕೋಡಾ ಫ್ಯಾಬಿಯಾ ನೈಜ ಚಾಂಪಿಯನ್ ಎನಿಸಿಕೊಳ್ಳಲಿದೆ ಎಂದಿದ್ದಾರೆ.

ಸ್ಕೋಡಾ ಫ್ಯಾಬಿಯಾ ಹ್ಯಾಚ್‌ಬ್ಯಾಕ್ ಕಾರು ಹೆಚ್ಚು ಕ್ರೀಡಾತ್ಮಕ ಹಾಗೂ ಆಧುನಿಕ ವಿನ್ಯಾಸವನ್ನು ಕಾಪಾಡಿಕೊಂಡಿದೆ. ಹೊರಗಡೆ ಪರಿಷ್ಕೃತ ಹೆಡ್ ಲೈಟ್, ಫ್ರಂಟ್ ಗ್ರಿಲ್, ಅಲಾಯ್ ವೀಲ್ಸ್ ಮುಂತಾದ ಸೌಲಭ್ಯಗಳಿರಲಿದೆ.
ಇನ್ನು ಒಳಮೈ ಗಮನಿಸಿದರೆ ತುಂಬಾ ಸರಳವಾದ ಡ್ಯಾಶ್ ಬೋರ್ಡ್ ಲಗತ್ತಿಸಿದರೂ ಹೆಚ್ಚು ಸ್ಟೈಲಿಷ್ ಆಗಿದೆ. ಇದರ ಡಿಜಿಟಲ್ ಮೀಟರ್ ಗಮನಾರ್ಹ ಮಾಹಿತಿ ನೀಡಲಿದೆ. ಅಂತೆಯೇ ಸ್ಟೀರಿಂಗ್ ವೀಲ್ ತ್ರಿ ಸ್ಪೋಕ್ ವಿನ್ಯಾಸ ಪಡೆದುಕೊಂಡಿದೆ.

2015 ಫ್ಯಾಬಿಯಾ ಮಿರಲ್‌ಲಿಂಕ್ ತಂತ್ರಗಾರಿಕೆಯೊಂದಿಗೆ ಆಗಮನವಾಗಲಿದೆ. ಇದರ ಮಾಹಿತಿ ಮನರಂಜನಾ ವ್ಯವಸ್ಥೆಯಲ್ಲೇ ಮೊಬೈಲ್ ಅಪ್ಲಿಕೇಷನ್ ಪರದೆ ಗೋಚರವಾಗಲಿದೆ. ಇದಕ್ಕೆ ಸ್ಮಾರ್ಟ್ ಫೋನ್ ಸಹ ಸಂಪರ್ಕಿಸಬಹುದಾಗಿದೆ.
ಸದ್ಯಕ್ಕಂತೂ 2015 ಸ್ಕೋಡಾ ಫ್ಯಾಬಿಯಾ ಭಾರತದಲ್ಲಿ ಬಿಡುಗಡೆಯಾಗುವ ಬಗ್ಗೆ ಯಾವುದೇ ಮಾಹಿತಿಗಳು ಬಂದಿಲ್ಲ. ಆದರೆ ಭವಿಷ್ಯದಲ್ಲೇ ಈ ಆಕರ್ಷಕ ಕಾರು ಭಾರತ ಪ್ರವೇಶವನ್ನು ನಿರೀಕ್ಷಿಸಬಹುದಾಗಿದೆ.


Click it and Unblock the Notifications








