ಸದ್ಯದಲ್ಲೇ 2015 ಫೋರ್ಡ್ ಎಕ್ಸ್‌ಪೆಡಿಷನ್ ಎಂಟ್ರಿ
ಅಮೆರಿಕ ಮೂಲದ ವಾಹನ ತಯಾರಿಕ ಸಂಸ್ಥೆಯಾಗಿರುವ ಫೋರ್ಡ್, ಡಲ್ಲಾಸ್ ಕನ್ವೆಷನಲ್ ಸೆಂಟರ್‌ನಲ್ಲಿ ನಡೆಯುತ್ತಿರುವ ಡಿಎಫ್‌ಡಬ್ಲ್ಯ ಆಟೋ ಶೋದಲ್ಲಿ ನೂತನ 2015 ಎಕ್ಸ್‌ಪೆಡಿಷನ್ ಆವೃತ್ತಿಯನ್ನು ಪರಿಚಯಿಸಿದೆ.
ಈ ಫೇಸ್‌ಲಿಫ್ಟ್ ಆವೃತ್ತಿಯು ಹಿಂದಿನ ಆವೃತ್ತಿಗಿಂತಲೂ ಹೆಚ್ಚು ವೀಲ್ ಬೇಸ್ ಹಾಗೂ ಹೆಚ್ಚಿನ ವೈಶಿಷ್ಟ್ಯ್ಗಗಳನ್ನು ಪಡೆದುಕೊಳ್ಳಲಿದೆ. ನೂತನ 2015 ಫೋರ್ಡ್ ಎಕ್ಸ್‌ಪೆಡಿಷನ್ ಆವೃತ್ತಿಯು ಪರಿಷ್ಕೃತ ಬಂಪರ್, ಕ್ರೋಮ್ ಇಸರ್ಟ್, ಹೊಸ ಗ್ರಿಲ್ ಹಾಗೂ ವೀಲ್ಸ್ ಪಡೆದುಕೊಳ್ಳಲಿದೆ.

ನೂತನ ಎಕ್ಸ್‌ಪೆಡಿಷನ್ ಆವೃತ್ತಿಯು 3.5 ಲೀಟರ್ ವಿ6 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 370 ಅಶ್ವಶಕ್ತಿ (582 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.
ಇದರಲ್ಲೂ ಇಕೊಬೂಸ್ಟ್ ಎಂಜಿನ್ ಹೊಂದಿರಲಿದ್ದು, ಸೆಲೆಕ್ಟ್ ಶಿಫ್ಟ್ ಎಂಬ ಸಿಕ್ಸ್ ಸ್ಪೀಡ್ ಗೇರ್ ಬಾಕ್ಸ್ ಪಡೆದುಕೊಳ್ಳಲಿದೆ. ಇದರೊಳಗೆ ಎಲ್‌ಇಡಿ ಲೈಟಿಂಗ್, ಗರಿಷ್ಠ ಗುಣಮಟ್ಟದ ಉಪಕರಣಗಳು, ಹೊಸ ಸೆಂಟರ್ ಕನ್ಸೋಲ್ ಜತೆ ಹತ್ತು ಸ್ಪೀಕರ್ ಸೋನಿ ಆಡಿಯೋ ಮನರಂಜನಾ ಮತ್ತು ಮೈಫೋರ್ಡ್ ಟಚ್ ಮಾಹಿತಿ ಮನರಂಜನಾ ಸಿಸ್ಟಂ ಇರಲಿದೆ.


Click it and Unblock the Notifications