2015 ಲ್ಯಾಂಡ್ ಲೋವರ್ ಫ್ರಿಲ್ಯಾಂಡರ್ ಅನಾವರಣ

Written By:

ಲ್ಯಾಂಡ್ ರೋವರ್ ಸಂಸ್ಥೆಯು ಮುಂದಿನ ವರ್ಷ ಫ್ರಿಲ್ಯಾಂಡರ್ ಫೇಸ್‌ಲಿಫ್ಟ್ ವರ್ಷನ್ ಬಿಡುಗಡೆ ಮಾಡಲಿದೆ. ನೂತನ ಕ್ರೀಡಾ ಬಳಕೆಯ ವಾಹನವು (ಎಸ್‌ಯುವಿ) ಹಿಂದಿನ ಆವೃತ್ತಿಗಿಂತಲೂ ಕೆಲವೊಂದು ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆದುಕೊಳ್ಳಲಿದೆ.

ನೂತತ ಬ್ರಿಟಿಷನ್ ಐಕಾನಿಕ್ ಎಸ್‌ಯುವಿ ಕಾರು, ನೂತನ ಗ್ರಿಲ್ ವಿನ್ಯಾಸದ ಜತೆಗೆ 17 ಇಂಚಿನ ಅಲಾಯ್ ವೀಲ್ ಪಡೆದುಕೊಳ್ಳಲಿದೆ. ಅಲ್ಲದೆ ಕಾರಿನ ಒಳಗಡೆ ಲೆಥರ್ ಸೀಟು, ಕ್ಲೈಮೇಟ್ ಕಂಟ್ರೋಲ್, ಸ್ಯಾಟಲೈಟ್ ನೇವಿಗೇಷ್ ಮತ್ತು ಆಡಿಯೋ ಸಿಸ್ಟಂ ಲಭ್ಯವಿರಲಿದೆ.

To Follow DriveSpark On Facebook, Click The Like Button
2015 Land Rover Freelander

ನೂತನ ಫ್ರಿಲ್ಯಾಂಡರ್ ಡೈನಾಮಿಕ್ ಪ್ಯಾಕೇಜ್‌ನಲ್ಲಿ ಲಭ್ಯವಿರಲಿದೆ. ಇದರಲ್ಲಿ ರಿಯರ್ ಸ್ಪಾಯ್ಲರ್ ಜತೆಗೆ 19 ಇಂಚಿನ ಅಲಾಯ್ ವೀಲ್ ಸೌಲಭ್ಯವಿರಲಿದೆ. ಪ್ರಸ್ತುತ ಕಾರು ಲಗ್ಷುರಿ ಎಚ್‌ಎಸ್‌ಇ ವೆರಿಯಂಟ್‌ನಲ್ಲೂ ಲಭ್ಯವಿರಲಿದ್ದು, ಹೊಸ ಗ್ರಿಲ್, ವಿಂಡ್ಸರ್ ಲೆಥರ್ ಮತ್ತು 19 ಇಂಚು ಸ್ಪಾರ್ಕ್ಲ್ ಸಿಲ್ವರ್ ವೀಲ್ ಪಡೆದುಕೊಳ್ಳಲಿದೆ.

2015 ಲ್ಯಾಂಡ್ ರೋವರ್ ಫ್ರಿಲ್ಯಾಂಡ್ 9 ಸ್ಪೀಡ್ ಗೇರ್ ಬಾಕ್ಸ್ ಹೊಂದಿರಲಿದ್ದು, ಆಲ್ ವೀಲ್ ಡ್ರೈವ್ ಸೌಲಭ್ಯವನ್ನು ಪಡೆಯಲಿದೆ. ಇದರಲ್ಲಿ ಆಟೋ ಟರೈನ್ ರೆಸ್ಪಾನ್ಸ್ ಸಿಸ್ಟಂ ಕೂಡಾ ಇರಲಿದೆ.

English summary
Land Rover will be launching a facelifted version of its Freelander in 2015. The new SUV has minor cosmetic changes and here are a few of images of the new 2015 Freelander.
Story first published: Tuesday, March 11, 2014, 12:05 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark