ದೇಶದಲ್ಲಿ 74 ಲಕ್ಷ ಡ್ರೈವಿಂಗ್ ಲೈಸನ್ಸ್ ನಕಲಿ?
ದುಡ್ಡಿದ್ರೆ ಇಡೀ ದುನಿಯಾನೇ ನಿಮ್ಮ ಹಿಂದೆ ಬರುತ್ತೆ ಎಂಬುದಕ್ಕೆ ಇಂದೊಂದು ಉತ್ತಮ ನಿದರ್ಶನವಾಗಿದೆ. ನಿಮ್ಮ ಜೇಬಲ್ಲಿ ಕಾಸಿದೆಯೇ? ಹಾಗಾದರೆ ಚಾಲನೆ ಗೊತ್ತಿಲ್ಲದಿದ್ದರೂ ನಿಮ್ಮ ಕೈಗೆ ಡ್ರೈವಿಂಗ್ ಲೈಸನ್ಸ್ ಬಂದು ಸೇರಲಿದೆ.
ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಬಿಡುಗಡೆ ಮಾಡಿರುವ ವರದಿಯೊಂದರ ಪ್ರಕಾರ ಇಡೀ ದೇಶದ ಆರು ಕೋಟಿ ಚಾಲನಾ ಪರವಾನಗಿಯ ಪೈಕಿ 74 ಲಕ್ಷಗಳಷ್ಟು ನಕಲಿ ಲೈಸನ್ಸ್‌ಗಳಿವೆ. ವಿಶೇಷವೆಂದರೆ ಇದು ಇಡೀ ಹಾಂಕಾಂಗ್‌ನ ಜನಸಂಖ್ಯೆಗೆ ಸಮಾನವಾಗಿದೆ.

ಇಲ್ಲಿ ಅಚ್ಚರಿಗೊಳಿಸುವ ವಿಶೇಷವೆಂದರೆ ಒಂದೇ ವ್ಯಕ್ತಿ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ (ಆರ್‌ಟಿಒ) ಹಲವಾರು ಬಾರಿ ಚಾಲನಾ ಪರವಾನಗಿ ಗಿಟ್ಟಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ ಒಂದೇ ಇಲಾಖೆಯಿಂದ ಸಮಾನ ಚಾಲನಾ ಸಂಖ್ಯೆಯಿಂದಲೇ ವಿವಿಧ ವ್ಯಕ್ತಿಗಳಿಗೆ ಡ್ರೈವಿಂಗ್ ಲೈಸನ್ಸ್ ಜಾರಿ ಮಾಡಿರುವುದು ಕಂಡುಬಂದಿದೆ.
ಈ ಬಗ್ಗೆ ಹೇಳಿಕೆ ಕೊಟ್ಟಿರುವ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, "ಶೇಕಡಾ 30ರಷ್ಟು ಚಾಲನಾ ಪರವಾನಗಿಗಳು ನಕಲಿಯಾಗಿದ್ದು, ಇದನ್ನು ತಡೆಯಲು ಐಟಿ ಆಧಾರಿತ ಡ್ರೈವಿಂಗ್ ಲೈಸನ್ಸ್ ಜಾರಿ ಮಾಡುವುದರತ್ತ ಗಮನ ಹರಿಸಲಾಗಿದ್ದು, ಹೆಚ್ಚು ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲಾಗುವುದು" ಎಂದಿದ್ದಾರೆ.
ಕಾನೂನಿನ ಅವಗಣನೆ, ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಮಧ್ಯಮರ್ತಿಗಳ ಲಾಬಿ ಇವೆಲ್ಲದರಿಂದಾಗಿಯೇ ಹೆಚ್ಚು ನಕಲಿ ಲೈಸನ್ಸ್‌ಗಳು ಸೃಷ್ಟಿಯಾಗುತ್ತಿದೆ ಎಂಬುದನ್ನು ಎನ್‌ಐಸಿ ವರದಿಯಲ್ಲಿ ತಿಳಿಸಿದೆ.


Click it and Unblock the Notifications








