ಗಾಡಿ ಸ್ಕಿಡ್ ಆಗಲ್ಲ ಬಿಡಿ; ಇನ್ನು ಮುಂದೆ ಎಬಿಎಸ್ ಕಡ್ಡಾಯ!

By Nagaraja

ಇನ್ನು ಮುಂದೆ ಗಾಡಿಗಳು ಸ್ಕಿಡ್ ಆಗಲ್ಲ ಬಿಡಿ, ಹೌದು, ಇನ್ನು ಮುಂದೆ ದೇಶದಲ್ಲಿ ವಾಣಿಜ್ಯ ವಾಹನಗಳಿಗೆ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಆಳವಡಿಕೆ ಕಡ್ಡಾಯವಾಗಲಿದೆ. ವರದಿಗಳ ಪ್ರಕಾರ ಮುಂದಿನ ಎಪ್ರಿಲ್‌ನಲ್ಲಿ ಪೂರ್ಣವಾಗಿಯೂ ಜಾರಿಗೆ ಬರಲಿರುವ ಈ ನಿಯಮವು ದೇಶದ ಅಪಘಾತ ವಲಯ ರಸ್ತೆಗಳನ್ನು ಹೆಚ್ಚು ಸುರಕ್ಷಿತವಾಗಿಸಲಿದೆ.

ಆ್ಯಂಟಿ ಲಾಕ್ ಬ್ರೇಕಿಂಗ್ ವ್ಯವಸ್ಥೆಯ ಮುಖಾಂತರ ಅತಿ ವೇಗದಲ್ಲಿ ಸಂಚರಿಸುವ ಸಂದರ್ಭದಲ್ಲಿ ತುರ್ತು ಬ್ರೇಕ್ ಹಾಕಿದ ಸಂದರ್ಭದಲ್ಲಿ ಚಕ್ರಗಳು ರಸ್ತೆಯ ನಿರಂತರ ಸಂಪರ್ಕ ಸಾಧಿಸಲು ನೆರವಾಗುತ್ತಿದ್ದು, ಅನಿಯಂತ್ರಿತ ಸ್ಕಿಡ್ ಅಥವಾ ಚಕ್ರಗಳು ಲಾಕ್ ಆಗುವ ಸಂಭವವನ್ನು ತಪ್ಪಿಸುವ ಮೂಲಕ ಸಂಭವನೀಯ ಅಪಾಯವನ್ನು ತಪ್ಪಿಸುತ್ತದೆ.

ABS

ಜಾಗತಿಕವಾಗಿ ಕಣ್ಣಾಯಿಸಿದಾಗ ರಸ್ತೆ ಅಪಘಾತದಲ್ಲಿ ಭಾರತ ಮುಂದಿದೆ. 2012ನೇ ಸಾಲಿನಲ್ಲಿ ನಡೆದ ಐದು ಲಕ್ಷದಷ್ಟು ರಸ್ತೆ ಅಪಘಾತಗಳಲ್ಲಾಗಿ 1.42 ಲಕ್ಷ ಮಂದಿ ಸಾವನ್ನಪ್ಪಿದ್ದರು. ಅಂದರೆ ಪ್ರತಿ ನಾಲ್ಕು ನಿಮಿಷಕ್ಕೊಮ್ಮೆ ಅಪಘಾತ ಸಂಭವಿಸುತ್ತಲೇ ಇದೆ. ಈ ಪೈಕಿ ಶೇಕಡಾ 30ರಷ್ಟು ಹೆಚ್ಚಿನ ಅಪಘಾತ ಪ್ರಕರಣಗಳಲ್ಲಿ ಟ್ರಕ್, ಬಸ್ ಮತ್ತು ಮಲ್ಟಿ ಆಕ್ಸೆಲ್ ವಾಹನಗಳು ಭಾಗಿಯಾಗಿರುವುದು ಕಂಡುಬಂದಿದೆ.

ಕೈಗಾರಿಕಾ ಮಾಹಿತಿ ಪ್ರಕಾರ ಶೇಕಡಾ 77ರಷ್ಟು ಅಪಘಾತಗಳು ಪರಸ್ಪರ ಮುಖಾಮುಖಿ, ನಿಯಂತ್ರಣ ಕಳೆದುಕೊಳ್ಳುವುದು ಅಥವಾ ತಪ್ಪಾದ ಲೇನ್ ಚಲನೆಯಿಂದ ಸಂಭವಿಸುತ್ತದೆ. ಈ ಹಿನ್ನಲೆಯಲ್ಲಿ ಎಬಿಎಸ್ ಕಡ್ಡಾಯ ಆಳವಡಿಸುವ ಮೂಲಕ ಅಪಘಾತ ಪ್ರಮಾಣವನ್ನು ಸಾಧ್ಯವಾದಷ್ಟು ತಡೆಗಟ್ಟಬಹುದಾಗಿದೆ.

ಈ ಸಂಬಂಧ ಟ್ರಕ್, ಬಸ್ಸುಗಳಿಗೆ ಎಬಿಎಸ್ ಕಡ್ಡಾಯಗೊಳಿಸುವುದಕ್ಕೆ ಸರಕಾರವು ಪ್ರಸಕ್ತ ತಿಂಗಳಲ್ಲೇ ಆದೇಶ ಹೊರಡಿಸಲಿದೆ. ಹಾಗಿದ್ದರೂ ಇನ್ನಷ್ಟೇ ಲಾಂಚ್ ಆಗಬೇಕಾಗಿರುವ ಮಾದರಿಗಳು ಮುಂದಿನ ಆರ್ಥಿಕ ಸಾಲಿನಿಂದ ಕಡ್ಡಾಯವಾಗಿ ಎಬಿಎಸ್ ಹೊಂದಿರತಕ್ಕದ್ದು.

ಅಂದ ಹಾಗೆ ಪ್ರಯಾಣಿಕ ವಾಹನ ವಿಭಾಗದಲ್ಲಿ ಎಬಿಎಸ್ ಇದುವರೆಗೆ ಕಡ್ಡಾಯವಾಗಿಲ್ಲ. ಹಾಗಿದ್ದರೂ ಕೆಲವೊಂದು ವಾಹನ ತಯಾರಕ ಸಂಸ್ಥೆಗಳು ಇದನ್ನು ಟಾಪ್ ಎಂಡ್ ವೆರಿಯಂಟ್‌ಗಳಲ್ಲಿ ಅಥವಾ ಐಚ್ಛಿಕವಾಗಿ ನೀಡುತ್ತಿದೆ. ಟಾಪ್ ಎಂಡ್ ಟ್ರಕ್ ಹಾಗೂ ಬಸ್ಸುಗಳಲ್ಲಿ ಎಬಿಎಸ್ ಆಯ್ಕೆ ನೀಡಲಾಗುತ್ತಿದೆ. ಇದು ಮಾದರಿಗೆ ಅನುಗುಣವಾಗಿ 50,000 ರು.ಗಳಿಂದ 75,000 ರು.ಗಳಷ್ಟು ದುಬಾರಿಯೆನಿಸಿದೆ.

More from DriveSpark

Article Published On: Monday, June 30, 2014, 15:09 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+