ಯಾತ್ರಿಕರಿಗೆ ಬಂಪರ್; 500 ರು.ಗೆ ಬೆಂಗ್ಳೂರು-ಕೊಚ್ಚಿ ವಿಮಾನಯಾನ

By Nagaraja

ದೇಶೀಯ ವಿಮಾನಯಾನ ಆರಂಭಿಸಿದ ಕೇವಲ ನಾಲ್ಕು ದಿನಗಳೊಳಗೆ ಯಾತ್ರಿಕರಿಗೆ ಬಂಪರ್ ಕೊಡುಗೆ ನೀಡಿರುವ ಏರ್‌ಏಷ್ಯಾ ಇಂಡಿಯಾ ವ್ಯೋಮಯಾನ ಸಂಸ್ಥೆಯು, ಕೇವಲ 500 ರು.ಗಳಿಗೆ ಬೆಂಗಳೂರಿನಿಂದ ಕೊಚ್ಚಿ ವಿಮಾನಯಾನ ಸೇವೆ ಒದಗಿಸಲು ಮುಂದಾಗಿದೆ.

ಬೆಂಗಳೂರಿನಿಂದ ಕೊಚ್ಚಿ ಸಾಮಾನ್ಯ ಬಸ್ ದರ 1000 ರು.ಗಳಷ್ಟು ದುಬಾರಿಯಾಗಿರುವಾಗ ಏರ್‌ಏಷ್ಯಾ 500 ರು.ಗಳಿಗೆ ಸೇವೆ ಒದಗಿಸುವ ಮೂಲಕ ನಿಜಕ್ಕೂ ಅಚ್ಚರಿ ಮೂಡಿಸಿದೆ.

ಯಾತ್ರಿಕರಿಗೆ ಬಂಪರ್; 500 ರು.ಗೆ ಬೆಂಗ್ಳೂರು-ಕೊಚ್ಚಿ ವಿಮಾನಯಾನ

ಬೆಂಗಳೂರು-ಕೊಚ್ಚಿ ಪಯಣ ಜುಲೈ 20ರಿಂದ ಆರಂಭವಾಗಲಿದ್ದು, ಸೀಮಿತ ಅವಧಿಯ ವರೆಗೆ ಮಾತ್ರ ಈ ಆಫರ್ ಜಾರಿಯಲ್ಲಿರಲಿದೆ. ಯಾತ್ರಿಕರು ಏರ್ ಏಷಿಯಾ ವೆಬ್‌ಸೈಟ್‌ಗೆ ತೆರಳಿ ಜೂನ್ 16ರಿಂದ 22ರ ನಡುವೆ ಬುಕ್ಕಿಂಗ್ ಮಾಡಬಹುದಾಗಿದೆ. ಈ ವಿಮಾನಯಾನ ಸೇವೆಯು ಜುಲೈ 20ರಿಂದ ಅಕ್ಟೋಬರ್ 25ರ ವರೆಗೆ ಮುಂದುವರಿಯಲಿದೆ. ಹಾಗೆಯೇ ಸೀಮಿತ 2000 ಸೀಟುಗಳು ಮಾತ್ರ ಲಭ್ಯವಿರಲಿದೆ.

ಯಾತ್ರಿಕರಿಗೆ ಬಂಪರ್; 500 ರು.ಗೆ ಬೆಂಗ್ಳೂರು-ಕೊಚ್ಚಿ ವಿಮಾನಯಾನ

ಮಲೇಷ್ಯಾ ಮೂಲದ ವ್ಯೋಮಯಾನ ಸಂಸ್ಥೆಯಾಗಿರುವ ಏರ್‌ಏಷ್ಯಾ ಪ್ರಸ್ತುತ ಬೆಂಗಳೂರು, ಚೆನ್ನೈ, ಕೊಚ್ಚಿ, ಕೋಲ್ಕತ್ತಾ ಮತ್ತು ಗೋವಾ ನಗರಗಳಿಗೆ ತನ್ನ ಸೇವೆಯನ್ನು ಒದಗಿಸುತ್ತಿದೆ.

ಯಾತ್ರಿಕರಿಗೆ ಬಂಪರ್; 500 ರು.ಗೆ ಬೆಂಗ್ಳೂರು-ಕೊಚ್ಚಿ ವಿಮಾನಯಾನ

ವಿಶ್ವದಲ್ಲೇ ಕಡಿಮೆ ವೆಚ್ಚದ ಏರ್‌ಲೈನ್ ಸೇವೆ ಒದಗಿಸುತ್ತಿರುವ ಏರ್‌ಏಷ್ಯಾ, 22 ರಾಷ್ಟ್ರಗಳಲ್ಲಾಗಿ 100ಕ್ಕೂ ಹೆಚ್ಚು ನಗರಗಳಿಗೆ ತನ್ನ ವಿಮಾನಯಾನ ಸಂಪರ್ಕವನ್ನು ವಿಸ್ತರಿಸಿದೆ.

ಯಾತ್ರಿಕರಿಗೆ ಬಂಪರ್; 500 ರು.ಗೆ ಬೆಂಗ್ಳೂರು-ಕೊಚ್ಚಿ ವಿಮಾನಯಾನ

ಭಾರತದಲ್ಲಿ ಟಾಟಾ ಸನ್ಸ್ ಜೊತೆ ಪಾಲುದಾರಿಕೆ ಹೊಂದಿರುವ ಏರ್‌ಏಷ್ಯಾ, ತನ್ನ ಮೊದಲ ದೇಶಿಯ ಯಾನವನ್ನು 2014 ಜೂನ್ 12ರಂದು ಬೆಂಗಳೂರಿನಿಂದ ಗೋವಾಗೆ ಹಮ್ಮಿಕೊಂಡಿತ್ತು.

ಯಾತ್ರಿಕರಿಗೆ ಬಂಪರ್; 500 ರು.ಗೆ ಬೆಂಗ್ಳೂರು-ಕೊಚ್ಚಿ ವಿಮಾನಯಾನ

ಈ ಮೂಲಕ ಏರ್‌ಏಷ್ಯಾ ಭಾರತದಲ್ಲಿ ಇಂಡಿಗೊ, ಸ್ಪೈಸ್‌ಜೆಟ್ ಮತ್ತು ಗೊ ಏರ್ ಬಳಿಕ ನಾಲ್ಕನೇ ಅತ್ಯಂತ ಕಡಿಮೆ ವೆಚ್ಚದ ವ್ಯೋಮಯಾನ ಸಂಸ್ಥೆ ಎನಿಸಿಕೊಳ್ಳಲಿದೆ.

More from DriveSpark

Article Published On: Tuesday, June 17, 2014, 10:38 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+