ನನಸಾಗಲಿದೆ ಬೆಂಝ್-ಆಸ್ಟನ್ ಮಾರ್ಟಿನ್ ಎಸ್‌ಯುವಿ ಕನಸು
ನೂತನ ಕ್ರೀಡಾ ಬಳಕೆಯ ವಾಹನ (ಎಸ್‌ಯುವಿ) ಲಾಂಚ್ ಮಾಡುವುದಕ್ಕೆ ಸಂಬಂಧಿಸಿದಂತೆ ಡೈಮ್ಲರ್ ಮಾಲಿಕತ್ವ ಹೊಂದಿರುವ ಮರ್ಸಿಡಿಸ್ ಬೆಂಝ್ ಜತೆ ಬ್ರಿಟನ್‌ನ ಐಕಾನಿಕ್ ವಾಹನ ತಯಾರಕ ಸಂಸ್ಥೆಯಾಗಿರುವ ಆಸ್ಟನ್ ಮಾರ್ಟಿನ್ ಮಾತುಕತೆ ನಡೆಸಿದೆ.
ಬಲ್ಲ ಮೂಲಗಳ ಪ್ರಕಾರ, ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಎಸ್‌ಯುವಿ ಕನಸು ನನಸಾಗಲಿದೆ. ಇದೇ ಸಂದರ್ಭದಲ್ಲಿ ಆಸ್ಟನ್ ಮಾರ್ಟಿನ್‌ನಿಂದಲೂ ಇದಕ್ಕೆ ಪೂರಕವಾದ ನಿಲುವು ವ್ಯಕ್ತವಾಗಿದೆ. ಅಲ್ಲದೆ ಸದ್ಯ ಎಸ್‌ಯುವಿ ಯೋಜನೆಯನ್ನು ತಳ್ಳಿಹಾಕುವಂತಿಲ್ಲ ಎಂದಿದೆ.

ಹಾಗೊಂದು ವೇಳೆ ಜಂಟಿಯಾಗಿ ಎಸ್‌ಯುವಿ ಬಿಡುಗಡೆ ಮಾಡಲು ಯಶಸ್ವಿಯಾದ್ದಲ್ಲಿ ಅದು ಜಾಗತಿಕ ವಾಹನೋದ್ಯಮ ದೃಷ್ಟಿಕೋನದಲ್ಲಿ ಉತ್ತಮ ಬೆಳವಣಿಗೆಯಾಗಿರಲಿದೆ. ಇದರಂತೆ ಬೆಂಝ್ ತನ್ನ ಜಿಎಲ್ ಕ್ಲಾಸ್ ತಲಹದಿಯನ್ನು ಆಸ್ಟನ್ ಮಾರ್ಟಿನ್ ಜತೆ ಹಂಚಿಕೊಳ್ಳಲಿದೆ.
ಕಳೆದ ವರ್ಷದ ಒಪ್ಪಂದದಂತೆ ಭೆಂಝ್ ಎಎಂಜಿ ಘಟಕವು ಆಸ್ಟನ್ ಜತೆ ಎಂಜಿನ್ ತಂತ್ರಗಾರಿಕೆ ಹಂಚಿಕೊಳ್ಳಲಿದೆ.
ಮಿಸ್ ಮಾಡದಿರಿ; ಇಂದಿನ ಫೇಸ್‌ಬುಕ್ ವೀಡಿಯೋ


Click it and Unblock the Notifications








