ಆಡಿ 10,000 ಗ್ರಾಹಕರ ಸಂಭ್ರಮ; ಆಫರ್ ಗಿಟ್ಟಿಸಿ

Written By:

ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಆಡಿ, ನಿಗದಿತ ಅವಧಿಯಲ್ಲಿ ಹೊಸ ಮಾದರಿಗಳನ್ನು ಪರಿಚಯಿಸುತ್ತಲೇ ಬಂದಿದೆ.

ತನ್ನ ಪ್ರತಿಸ್ಪರ್ಧಿಗಳಾದ ಮರ್ಸಿಡಿಸ್ ಬೆಂಝ್ ಹಾಗೂ ಬಿಎಂಡಬ್ಲ್ಯು ಸಂಸ್ಥೆಗಳಿಂದ ನಿಕಟ ಪೈಪೋಟಿ ಎದುರಾಗಿರುವ ಹೊರತಾಗಿಯೂ 2014 ಸಾಲಿನಲ್ಲಿ 10,000 ಹೆಮ್ಮೆಯ ಗ್ರಾಹಕರನ್ನು ಪಡೆದುಕೊಳ್ಳುವಲ್ಲಿ ಆಡಿ ಯಶಸ್ವಿಯಾಗಿದೆ.

ಈ ಸಂಭ್ರಮವನ್ನು ತನ್ನ ಬೆಲೆಬಾಳುವ ಗ್ರಾಹಕರೊಂದಿಗೆ ಆಚರಿಸಲು ಹೊರಡಿರುವ ಸಂಸ್ಥೆಯು, ವಿನೂತನ ಆಫರ್ ಅನ್ನು ಮುಂದಿಟ್ಟಿದೆ. ಆದರೆ ಇದು ಸೀಮಿತ ಗ್ರಾಹಕರಿಗೆ ಮಾತ್ರ ಲಭ್ಯವಾಗಲಿದೆ. ಅಂದರೆ ಆಡಿ ಎ4 ಹಾಗೂ ಎ6 ಮಾದರಿಯನ್ನು ಖರೀದಿಸುವ ಮೊದಲ 300 ಗ್ರಾಹಕರು ಇದರ ಗರಿಷ್ಠ ಪ್ರಯೋಜನ ಪಡೆಯಬಹುದಾಗಿದೆ.

ಆಡಿ ಎ4 ಅಥವಾ ಆಡಿ ಎ6 ಬುಕ್ಕಿಂಗ್ ಮಾಡಿದ ಮೊದಲ 300 ಗ್ರಾಹಕರಿಗೆ ಮೂರು ವರ್ಷಗಳ ವರೆಗೆ ಉಚಿತ ಸರ್ವೀಸ್, ವಿಮೆ, ರೋಡ್ ಸೈಡ್ ಅಸಿಸ್ಟನ್ಸ್ ಮತ್ತು ವಾರಂಟಿ ಸೌಲಭ್ಯಗಳು ಲಭ್ಯವಾಗಲಿದೆ. ಈ ಮೂಲಕ ಇನ್ನಷ್ಟು ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಸೆಳೆದುಕೊಳ್ಳುವ ಪ್ರಯತ್ನದಲ್ಲಿದೆ.

audi a6

ಅಂದ ಹಾಗೆ ಆಡಿ ಎ4, 13 ವೆರಿಯಂಟ್‌ ಹಾಗೂ ನಾಲ್ಕು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಇದು ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳಲ್ಲಿ ಆಗಮನವಾಗಿದೆ. ಆದರೆ ಆಟೋಮ್ಯಾಟಿಕ್ ವೆರಿಯಂಟ್‌ನಲ್ಲಿ ಮಾತ್ರ ಲಭ್ಯವಿರುವ ಆಡಿ ಎ4, 28.30 ಲಕ್ಷ ರು.ಗಳಿಂದ 57.82 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಇನ್ನೊಂದೆಡೆ 10 ವೆರಿಯಂಟ್‌ಗಳಲ್ಲಿ ಲಭ್ಯವಿರುವ ಆಡಿ ಎ6 ನಾಲ್ಕು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಇದು ಸಹ ಪೆಟ್ರೋಲ್ ಹಾಗೂ ಡೀಸೆಲ್ ಜೊತೆ ಸಿಂಗಲ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರುತ್ತದೆ. ಅಂತೆಯೇ 42.63 ಲಕ್ಷ ರು.ಗಳಿಂದ 87.33 ಲಕ್ಷ ರು.ಗಳ ವರೆಗೆ ದುಬಾರಿಯೆನಿಸಲಿದೆ.

English summary
German luxury car manufacturer Audi has witnessed a successful year in India. They have launched several new and interesting products this year. The manufacturer has faced competition from its compatriots Mercedes-Benz and BMW.
Story first published: Thursday, November 27, 2014, 12:55 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark