2014 ಆಟೋ ಎಕ್ಸ್ ಪೋ; ಡ್ರೈವ್‌ಸ್ಪಾರ್ಕ್‌ನಲ್ಲಿ ನೇರ ಪ್ರಸಾರ
ಬಹುನಿರೀಕ್ಷಿತ 2014 ಇಂಡಿಯಾ ಆಟೋ ಎಕ್ಸ್ ಪೋ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದರಂತೆ ದೇಶದ ವಾಹನೋದ್ಯಮವು ಈ ಮಹತ್ತರ ವಾಹನ ಪ್ರದರ್ಶನ ಮೇಳವನ್ನು ಬರಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿದೆ.
ಕಳೆದ ಬಾರಿಯಂತೆಯೇ ಈ ಬಾರಿಯೂ ಡ್ರೈವ್ ಸ್ಪಾರ್ಕ್ ನಿಮ್ಮ ಮುಂದೆ 2014 ಆಟೋ ಎಕ್ಸ್ ಪೋ ವಿಸೃತ ಮಾಹಿತಿಯೊಂದಿಗೆ ಮುಂದೆ ಬರಲಿದೆ. ಇದರಂತೆ ದೆಹಲಿಯಂತೆ ನಮ್ಮ ಪ್ರತಿನಿಧಿಗಳು ನೇರ ಪ್ರಸಾರದಲ್ಲಿ ಭಾಗಿಯಾಗಲಿದ್ದಾರೆ.
ಓದುಗರಿಗೆ ಹೊಸ ಲಾಂಚ್, ಕಾನ್ಸೆಪ್ಟ್ ಹಾಗೂ ಇನ್ನಿತರ ಆಸಕ್ತಿದಾಯಕ ಮಾಹಿತಿಗಳ ಬಗ್ಗೆ ತ್ವರಿತ ವೇಗದಲ್ಲಿ ಸುದ್ದಿ ತಲುಪಿಸಲು ನಮ್ಮ ಡ್ರೈವ್ ಸ್ಪಾರ್ಕ್ ತಂಡ ಪ್ರಮಾಣಿಕ ಪ್ರಯತ್ನ ಮಾಡಲಿದೆ.

ಮಾಧ್ಯಮ ಎಂಟ್ರಿ...
ವಾಹನ ಪ್ರದರ್ಶನ ಮೇಳದ ಮೊದಲೆರಡು ದಿನ ಸಂಪೂರ್ಣವಾಗಿಯೂ ಮಾಧ್ಯಮ ಮಿತ್ರದವರಿಗೆ ಮೀಸಲಿಡಲಾಗಿದೆ. ಇದು ಫೆಬ್ರವರಿ 5 ಹಾಗೂ 6ರಂದು ಆಯೋಜನೆಯಾಗಲಿದೆ. ಉಳಿದಂತೆ 7ರಿಂದ 11ರ ವರೆಗೆ ಸಾರ್ವಜನಿಕ ಪ್ರವೇಶವಿರಲಿದೆ. ಹಾಗೆಯೇ ಕಾಂಪೊನೆಟ್ಸ್ ಶೋ ಫೆಬ್ರವರಿ 6ರಿಂದ 9ರ ವರೆಗೆ ಏರ್ಪಡಲಿದೆ. ಒಟ್ಟಿನಲ್ಲಿ 2014 ಇಂಡಿಯಾ ಆಟೋ ಎಕ್ಸ್ ಪೋ ಕ್ಷಣಕ್ಷಣದ ಮಾಹಿತಿಗಳಿಗಾಗಿ ಸದಾ ಡ್ರೈವ್ ಸ್ಪಾರ್ಕ್ ಓದುತ್ತಿರಿ...


Click it and Unblock the Notifications








