ಬ್ಯಾಟರಿ ಕಾರಿನಲ್ಲಿ ಓಡಾಡಲಿರುವ ಬೆಂಗ್ಳೂರು ಸಾರಿಗೆ ಅಧಿಕಾರಿಗಳು
ನಾಯಕನಾದವನು ಇತರರಿಗೆ ಮಾದರಿಯಾಗಬೇಕು. ಇದನ್ನು ಅಕ್ಷರಶ ಪಾಲಿಸಿರುವ ಬೆಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (ಆರ್‌ಟಿಒ) ಜನ ಸಾಮಾನ್ಯರಿಗೆ ನಿದರ್ಶನವಾಗಿದ್ದಾರೆ. ನಿನ್ನೆಯಷ್ಟೇ ವಿಶ್ವದ್ಯಾಂತ 'ಭೂದಿನ' ಆಚರಿಸಲಾಗಿತ್ತು. ಈ ಸಂದರ್ಭದಲ್ಲಿ ಪರಿಸರ ಸ್ನೇಹಿ ವಾಹನಗಳನ್ನು ಪ್ರೋತ್ಸಾಹಿಸಿರುವ ಬೆಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಇನ್ನು ಮುಂದೆ ಬ್ಯಾಟರಿ ಚಾಲಿತ ವಾಹನಗಳನ್ನು ಬಳಸಿಕೊಳ್ಳಲು ನಿರ್ಧರಿಸಿದೆ.
ಮುಂದಿನ ತಿಂಗಳಿಂದ ನಗರಕ್ಕೆ ಅಪ್ಪಳಿಸಲಿರುವ ಈ ಪರಿಸರ ಸ್ನೇಹಿ ವಾಹನಗಳಲ್ಲಿ ಅಧಿಕಾರಿಗಳು ಸುತ್ತಾಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಸಾರಿಗೆ ಆಯುಕ್ತ ಹಾಗೂ ಪರಿಸರ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ವಿಶೇಷ ಪ್ರಶಸ್ತಿ ವಿಜೇತ ಕೆ. ಅಮರನಾರಾಯಣ, ಸಾರ್ವಜನಿಕರು ಸಹ ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳ ಬಳಕೆ ಕಡಿಮೆ ಮಾಡಬೇಕಾಗಿದೆ ಎಂದಿದ್ದಾರೆ.

ಅಷ್ಟೇ ಅಲ್ಲದೆ ವಿದ್ಯುತ್ ಚಾಲಿತ ಕಾರು ಬಳಕೆಯಿಂದ ಇಂಧನ ಸಹ ಉಳಿಸಬಹುದಾಗಿದೆ ಎಂದು ಸ್ವಯಂ ಎಲೆಕ್ಟ್ರಿಕ್ ವಾಹನದಲ್ಲಿ ಪಯಣಿಸುತ್ತಿರುವ ಆಯುಕ್ತರು ತಿಳಿಸಿದ್ದಾರೆ.
ಈ ವಿದ್ಯುತ್ ಚಾಲಿತ ವಾಹನಗಳಲ್ಲಿ ಚಾಲಕ ಸೇರಿದಂತೆ ನಾಲ್ಕು ಜನವರಿಗೆ ಪ್ರಯಣಿಸಬಹುದಾಗಿದೆ. ಇದೇ ಸಂದರ್ಭದಲ್ಲಿ ವಿದ್ಯುತ್ ಚಾಲಿತ ವಾಹನಗಳನ್ನು ಪ್ರೋತ್ಸಾಹಿಸುವುದರ ಸಲುವಾಗಿ ವಿಧಾನ ಸೌಧ ಸುತ್ತಮುತ್ತಲಿನಲ್ಲಿ ನಾಲ್ಕು ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್ ಆಳವಡಿಸುವ ಬಗ್ಗೆಯೂ ಪ್ರಸ್ತಾಪ ಸಲ್ಲಿಸಲಾಗಿದೆ.


Click it and Unblock the Notifications








