ರಾತ್ರೋರಾತ್ರಿ ಬಿಎಂಟಿಸಿ ಬಸ್ ದರ ಏರಿಕೆ ಶಾಕ್; ಇದಕ್ಕೆ ಕೊನೆ ಇಲ್ಲವೇ?

By Nagaraja

ರಾತ್ರೋರಾತ್ರಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಸಾಮಾನ್ಯ ಹಾಗೂ ವೋಲ್ವೋ ಬಸ್ ದರಗಳನ್ನು ಹೆಚ್ಚಳಗೊಳಿಸಿದ್ದು, ಪ್ರಯಾಣಿಕರಿಗೆ ದೊಡ್ಡ ಶಾಕ್ ನೀಡಿದೆ. ಪರಿಷ್ಕೃತ ದರ ಗುರುವಾರ ಮಧ್ಯ ರಾತ್ರಿಯಿಂದಲೇ ಜಾರಿಗೆ ಬಂದಿದೆ. ಇದರಿಂದಾಗಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದ್ದು, ಬಿಎಂಟಿಸಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಏಕಾಕಕಿ ಬಿಎಂಟಿಸಿ ಬಸ್ ಪ್ರಯಾಣ ದರ ಶೇಕಡಾ 15ರಷ್ಟು ಹೆಚ್ಚಳಗೊಳಿಸಿದೆ.

ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಸಡಿಲಗೊಂಡಿರುವಂತೆಯೇ ಸರಕಾರವು ಬಸ್ ದರ ಏರಿಕೆ ಪ್ರಕಟಿಸಿದೆ. ಸಾಮಾನ್ಯ ಬಸ್ಸುಗಳಲ್ಲಿ ಕನಿಷ್ಠ ದರ ರು. 5 ಆಗಿತ್ತು. ಇದೀಗ ನೂತನ ದರ ರು. 6 ಆಗಿರಲಿದೆ. ಅದೇ ರೀತಿ ವೋಲ್ವೋ ಬಸ್ಸುಗಳ ಕನಿಷ್ಠ ದರ ರು. 10ರಿಂದ ರು. 15ಕ್ಕೆ ಏರಿಕೆಗೊಳಿಸಲಾಗಿದೆ. ಬಸ್ ಪಾಸ್ ದರವು ಗಣನೀಯ ವರ್ಧನೆ ಕಂಡುಬಂದಿದ್ದು, ಪ್ರಯಾಣಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬಸ್ ಏರಿಕೆಯ ಸಂಪೂರ್ಣ ಪಟ್ಟಿಗಾಗಿ ಫೋಟೊ ಫೀಚರ್‌ನತ್ತ ಮುಂದುವರಿಯಿರಿ...

ಬಿಎಂಟಿಸಿ ಬಸ್ ದರ ಏರಿಕೆ ಪಟ್ಟಿ ಇಂತಿದೆ (ರು.ಗಳಲ್ಲಿ)

ಬಿಎಂಟಿಸಿ ಬಸ್ ದರ ಏರಿಕೆ ಪಟ್ಟಿ ಇಂತಿದೆ (ರು.ಗಳಲ್ಲಿ)

ದಿನದ ಪಾಸ್ ಗುರುತಿನ ಚೀಟಿಯೊಂದಿಗೆ- 55ರಿಂದ 65ಕ್ಕೆ ಏರಿಕೆ

ದಿನದ ಪಾಸ್ ಗುರುತಿನ ಚೀಟಿ ಹೊರತುಪಡಿಸಿ - 60ರಿಂದ 70

ಗೋಲ್ಡ್ ಪಾಸ್ - 120ರಿಂದ 140

ಎ.ಸಿ. ಸುವರ್ಣ ಪಾಸ್ - 80ರಿಂದ 95

ಕೆಂಪು ಹಲಗೆ ಮಾಸಿಕ ಪಾಸ್‌ದಾರರ ಗೋಲ್ಡ್ ಪಾಸ್ - 60ರಿಂದ 70

ಡೆಡಿಕೇಟಡ್ ಪ್ರೀಮಿಯಂ ಮಾಸಿ ಪಾಸ್‌ದಾರರ ಗೋಲ್ಡ್ ಪಾಸ್ - 50ರಿಂದ 60

ಮಾಸಿಕ ಪಾಸ್ ವಿವರ (ರುಪಾಯಿಗಳಲ್ಲಿ)

ಮಾಸಿಕ ಪಾಸ್ ವಿವರ (ರುಪಾಯಿಗಳಲ್ಲಿ)

ಕಪ್ಪು ಹಲಗೆ ಪಾಸ್ - 725ರಿಂದ 825

ಕೆಂಪು ಹಲಗೆ ಪಾಸ್ - 925ರಿಂದ 1050

ಹಿರಿಯ ನಾಗರಿಕರ ಕಪ್ಪು ಹಲಗೆ ಪಾಸ್ - 650ರಿಂದ 740

ಹಿರಿಯ ನಾಗರಿಕರ ಕೆಂಪು ಹಲಗೆ ಪಾಸ್ - 830ರಿಂದ 945

ಟ್ರಂಪೆಟ್ ಪಾಸ್ - 1100ರಿಂದ 1300

ಗ್ರಾಮಾಂತರ ಹಸಿರು ಪಾಸ್ - 1100ರಿಂದ 1300

ಮಾಸಿಕ ಪಾಸ್ ವಿವರ (ರುಪಾಯಿಗಳಲ್ಲಿ)

ಮಾಸಿಕ ಪಾಸ್ ವಿವರ (ರುಪಾಯಿಗಳಲ್ಲಿ)

ವಜ್ರ ವಿದ್ಯಾರ್ಥಿ ಪಾಸ್ - 1300ರಿಂದ 1500

ವಜ್ರ ಪಾಸ್ - 1950ರಿಂದ 2250

ವಜ್ರ ಸ್ನೇಹಪರ ಪಾಸ್ - 2000ರಿಂದ 2300

ವಾಯುವಜ್ರ ಒಂದು ಪಾಸ್ ಖರೀದಿಗೆ - 2900ರಿಂದ 3350

ವಾಯುವಜ್ರ 50ಕ್ಕೂ ಹೆಚ್ಚು ಪಾಸ್ ಖರೀದಿಗೆ - 2,800ರಿಂದ 3,250

ವಾಯುವಜ್ರ 100ಕ್ಕೂ ಹೆಚ್ಚು ಪಾಸ್ ಖರೀದಿಗೆ - 2,700ರಿಂದ 3,200

ವಾಯುವಜ್ರ 225ಕ್ಕೂ ಹೆಚ್ಚು ಪಾಸ್ ಖರೀದಿಗೆ - 2,500ರಿಂದ 2,950

ಸಾಮಾನ್ಯ ಬಸ್ ದರ ಪಟ್ಟಿ

ಸಾಮಾನ್ಯ ಬಸ್ ದರ ಪಟ್ಟಿ

ಹಂತ, ಪ್ರಸ್ತುತ ದರ, ಪರಿಷ್ಕೃತ ದರ

1, 5, 6,

2, 10, 12

3, 12, 14

4, 15, 17

5 ಮತ್ತು 6, 16, 19

7, 17, 20

8, 18, 21

9 ರಿಂದ 11, 20, 23

12ರಿಂದ 15 21, 25,

ವೋಲ್ವೋ/ಕರೋನಾ ಟಿಕೆಟ್ ದರ ಪಟ್ಟಿ (ರು.ಗಳಲ್ಲಿ)

ವೋಲ್ವೋ/ಕರೋನಾ ಟಿಕೆಟ್ ದರ ಪಟ್ಟಿ (ರು.ಗಳಲ್ಲಿ)

ಹಂತ, ಪ್ರಸ್ತುತ ದರ, ಪರಿಷ್ಕೃತ ದರ

1, 10, 15

2, 15, 20

3, 30, 35

4, 40, 45

5, 45, 50

6, 50, 60

7, 50, 60

8, 60, 70

9, 60, 70

10, 60, 70

11, 70, 80

12, 70, 80

13, 70, 80

14, 80, 95

15, 80, 95

ರಾತ್ರೋರಾತ್ರಿ ಬಿಎಂಟಿಸಿ ಬಸ್ ದರ ಏರಿಕೆ ಶಾಕ್; ಇದಕ್ಕೆ ಕೊನೆ ಇಲ್ಲವೇ?

ಇದಕ್ಕೂ ಮೊದಲು ಸಂಸ್ಥೆಯ ನಷ್ಟ ಸರಿದೂಗಿಸಲು ಶೇಕಡಾ 17ರಷ್ಟು ದರ ಏರಿಕೆಗೆ ಸರಕಾರಕ್ಕೆ ಮನವಿ ಸಲ್ಲಿಸಿತ್ತು. ಇದರಂತೆ ಶೇಕಡಾ 15ರಷ್ಟು ಹೆಚ್ಚಳಕ್ಕೆ ಸರಕಾರ ಒಪ್ಪಿಗೆ ನೀಡಿದೆ.

ರಾತ್ರೋರಾತ್ರಿ ಬಿಎಂಟಿಸಿ ಬಸ್ ದರ ಏರಿಕೆ ಶಾಕ್; ಇದಕ್ಕೆ ಕೊನೆ ಇಲ್ಲವೇ?

ಮಾಸಿಕ ಡೀಸೆಲ್ ದರ ಪ್ರತಿ ಲೀಟರ್‌ಗೆ 60 ಪೈಸೆ ಜಾಸ್ತಿಯಾಗುತ್ತಿದೆ. ಡೀಸೆಲ್ ದರ ಹೆಚ್ಚಳ, ಸಿಬ್ಬಂದಿ ತುಟ್ಟಿಭತ್ಯೆ ಪರಿಷ್ಕೃರಣೆ ಹಾಗೂ ವಾಹನಗಳ ಬಿಡಿಭಾಗಗಳ ಬೆಲೆ ಏರಿಕೆಯಿಂದಾಗಿ ಸಂಸ್ಥೆಗೆ 300 ಕೋಟಿ ರು.ಗಿಂತಲೂ ಅಧಿಕ ಆರ್ಥಿಕ ಹೊರೆ ಬಿದ್ದಿದೆ. ಇದನ್ನು ಸರಿದೂಗಿಸಲು ದರ ಏರಿಕೆ ಅನಿವಾರ್ಯ ಎಂದು ಬಿಎಂಟಿಸಿ ತನ್ನ ನಿಲುವನ್ನು ಸಮರ್ಥಿಕೊಂಡಿದೆ.

ರಾತ್ರೋರಾತ್ರಿ ಬಿಎಂಟಿಸಿ ಬಸ್ ದರ ಏರಿಕೆ ಶಾಕ್; ಇದಕ್ಕೆ ಕೊನೆ ಇಲ್ಲವೇ?

ಡೀಸೆಲ್ ದರ ಏರಿಕೆಯಿಂದ 140 ಕೋಟಿ ರೂ, ಸಿಬ್ಬಂದಿ ವೇತನ ಹೆಚ್ಚಳದಿಂದ 100 ಕೋಟಿ ರೂ, ಸಂಸ್ಥೆಯ ಇತರೆ ವೆಚ್ಚಕ್ಕಾಗಿ 60 ಕೋಟಿ ರೂ ವ್ಯಯವಾಗುತ್ತಿದೆ. ಇದರಿಂದ ಸಂಸ್ಥೆಯ ಮೇಲೆ ವಾರ್ಷಿಕವಾಗಿ ಹೆಚ್ಚುವರಿ 300 ಕೋಟಿ ರೂ ಹೊರೆ ಬೀಳುತ್ತಿದೆ. ಈಗಾಗಲೇ ಸಂಸ್ಥೆ 140 ಕೋಟಿ ರೂ ಸಾಲದಲ್ಲಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ದರ ಹೆಚ್ಚಳದಿಂದ ಸಂಸ್ಥೆಗೆ 240 ಕೋಟಿ ರೂ ಆದಾಯ ಬರಲಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ರಾತ್ರೋರಾತ್ರಿ ಬಿಎಂಟಿಸಿ ಬಸ್ ದರ ಏರಿಕೆ ಶಾಕ್; ಇದಕ್ಕೆ ಕೊನೆ ಇಲ್ಲವೇ?

2013 ಜೂನ್‌ನ್ಲಲಿ ಶೇಕಡಾ 16ರಷ್ಟು ದರ ಏರಿಕೆಗೊಳಿಸಿದ್ದ ಸಂಸ್ಥೆಯು ಬಳಿಕ ಸಣ್ಣ ಪ್ರಮಾಣದ (ಪ್ರತಿ ಸ್ಟೇಜ್‌ಗೆ ರು. 1) ಇಳಿಕೆ ಮಾಡಿತ್ತು. ಇದಾದ ಬಳಿಕ ಪ್ರಸಕ್ತ ಸಾಲಿನಲ್ಲೇ ಫೆಬ್ರವರಿಯಲ್ಲಿ ರು.1ರಷ್ಟು ಹೆಚ್ಚಿಸಿತ್ತು. ಈ ಮೂಲಕ ಕಾಂಗ್ರೆಸ್ ಸರಕಾರದ ಅಧಿಕಾರವಧಿಯಲ್ಲಿ ಎರಡನೇ ಬಾರಿಗೆ ದರ ಏರಿಕೆ ಕಂಡುಬಂದಿದೆ.

Most Read Articles

Kannada
Story first published: Friday, April 25, 2014, 10:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X