ಬಿಎಂಡಬ್ಲ್ಯು 3 ಸಿರೀಸ್ ಗ್ರ್ಯಾನ್ ಟರಿಸ್ಮೊ ಲಾಂಚ್
ಬಿಎಂಡಬ್ಲ್ಯು ಐಷಾರಾಮಿ ಕಾರುಗಳಿಗೆ ಭಾರತದಲ್ಲಿ ತನ್ನದೇ ಆದ ಸ್ಥಾನಮಾನವಿದೆ. ಇದೀಗ ದೇಶದ ಕಾರು ಮಾರುಕಟ್ಟೆ ಮೇಲಿನ ತನ್ನ ಬದ್ಧತೆಯನ್ನು ಇನ್ನಷ್ಟು ಪ್ರದರ್ಶಿಸಿರುವ ಜರ್ಮನಿ ಮೂಲದ ಈ ಐಷಾರಾಮಿ ವಾಹನ ತಯಾರಕ ಸಂಸ್ಥೆಯು 3 ಸಿರೀಸ್ ಗ್ರ್ಯಾನ್ ಟರಿಸ್ಮೊ ಕಾರನ್ನು ಬಿಡುಗಡೆಗೊಳಿಸಿದೆ.
ಸಂಪೂರ್ಣವಾಗಿ ಸ್ಥಳೀಯವಾಗಿ ನಿರ್ಮಾಣಗೊಂಡಿರುವ ಬಿಎಂಡಬ್ಲ್ಯು 3 ಸಿರೀಸ್ ಗ್ರ್ಯಾನ್ ಟರಿಸ್ಮೊ ದರ 42.75 ಲಕ್ಷ ರು.ಗಳಾಗಿವೆ. ಚೆನ್ನೈನಲ್ಲಿ ಸ್ಥಿತಗೊಂಡಿರುವ ಘಟಕದಲ್ಲಿ ಬಿಎಂಡ್ಲ್ಯು ಕಾರುಗಳು ಉತ್ಪಾದನೆಯಾಗುತ್ತದೆ. ಕೂಪೆ ಶೈಲಿಯ ಮೇಲ್ಚಾವಣಿ ಪಡೆದುಕೊಂಡಿರುವ ಬಿಎಂಡಬ್ಲ್ಯು 3 ಸಿರೀಸ್ ಫ್ರೇಮ್‌ಲೆಸ್ ವಿಂಡೋಗಳಂತಹ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಇನ್ನು ಹಿಂದುಗಡೆ ಲಗತ್ತಿಸಲಾಗಿರುವ ಸ್ಪಾಯ್ಲರ್ ಗಂಟೆಗೆ 110 ಕೀ.ಮೀ.ಗಿಂತಲೂ ಹೆಚ್ಚು ವೇಗದಲ್ಲಿ ಚಲಿಸುವಾಗ ಸ್ವಯಂಚಾಲಿತವಾಗಿ ತೆರೆದುಕೊಳ್ಳಲಿದ್ದು, ಗಂಟೆಗೆ 70 ಕೀ.ಮೀ.ಗಿಂತಲೂ ಕಡಿಮೆ ವೇಗದಲ್ಲಿ ಚಲಿಸವಾಗ ಮುದುಡಿಕೊಳ್ಳಲಿದೆ.
ನೂತನ ಬಿಎಂಡಬ್ಲ್ಯು 3 ಸಿರೀಸ್ ಗ್ರ್ಯಾನ್ ಟರಿಸ್ಮೆ ಕಾರಲ್ಲಿ, 2.0 ಲೀಟರ್ ಟ್ವಿನ್ ಟರ್ಬೊ, ಫೋರ್ ಸಿಲಿಂಡ್ ಎಂಜಿನ್ ಆಳವಡಿಸಲಾಗಿದೆ. ಇದು ಕೇವಲ 7.9 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ವೇಗವರ್ಧಿಸಲಿದ್ದು, ಹಾಗೆಯೇ ಗಂಟೆಗೆ ಗರಿಷ್ಠ 226 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.



Click it and Unblock the Notifications








