ಬೆಂಗಳೂರಿನಲ್ಲಿ ಬಿಎಂಡಬ್ಲ್ಯು ಎಕ್ಸ್‌ಪೀರಿಯನ್ಸ್ ಟೂರ್ 2014
ದೇಶದ್ಯಾಂತ ನಡೆಸಿಕೊಂಡು ಬರುತ್ತಿರುವ ಬಿಎಂಡಬ್ಲ್ಯು ಡೈನಾಮಿಕ್ ಗರಿಷ್ಠ ನಿರ್ವಹಣೆ ಕಾರುಗಳ 'ಎಕ್ಸ್‌ಪೀರಿಯನ್ಸ್ ಟೂರ್ 2014' ಬೆಂಗಳೂರು ನಗರದಲ್ಲಿ ಆದ್ದೂರಿಯಾಗಿ ಆರಂಭವಾಗಿದೆ. ಇದು ಅಕ್ಟೋಬರ್ 9ರಿಂದ 12ರ ವರೆಗೆ ಸಾಗಲಿದೆ.
ದೇಶದ್ಯಾಂತ ಒಟ್ಟು 12 ನಗರಳಲ್ಲಿ ಬಿಎಂಡಬ್ಲ್ಯು ಎಕ್ಸ್‌ಪೀರಿಯನ್ಸ್ ಟೂರ್ ಹಮ್ಮಿಕೊಳ್ಳಲಾಗಿದೆ. ಇದರೊಂದಿಗೆ ಒಂಬತ್ತನೇ ನಗರದ ಭಾಗವಾಗಿ ಬೆಂಗಳೂರುನಲ್ಲಿ ಆಯೋಜನೆಯಾಗಿದೆ. ಈ ಸಂದರ್ಭದಲ್ಲಿ ಗ್ರಾಹಕರಿಗೆ ಬಿಎಂಡಬ್ಲ್ಯು ಕ್ರೀಡಾ ಬಳಕೆಯ ವಾಹನದ ಜೊತೆಗೆ ಸೆಡಾನ್ ಕಾರಿನ ಆಫ್ ರೋಡ್ ಅನುಭವ ಪರಿಚಯವಾಗಲಿದೆ.

ಬಿಎಂಡಬ್ಲ್ಯು ಎಕ್ಸ್‌ಪೀರಿಯನ್ಸ್ ಟೂರ್ ಬೆಂಗಳೂರು ಸೇರಿದಂತೆ ಜೈಪುರ, ಚಂಡೀಗಡ, ನವದಹಲಿ, ಅಹಮಾದಾಬಾದ್, ಪುಣೆ, ಮುಂಬೈ, ಚೆನ್ನೈ, ಹೈದರಾಬಾದ್, ಕೊಚ್ಚಿ, ಲಕ್ನೋ ಮತ್ತು ಕೋಲ್ಕತ್ತಾ ನಗರಗಳಲ್ಲಿ ಆಯೋಜನೆಯಾಗುತ್ತಿದೆ. ಬೆಂಗಳೂರಿನ ಜಾಲಹೊಬ್ಲಿಯಲ್ಲಿರುವ ಎಂಬಸ್ಸಿ ಇಂಟರ್ ನ್ಯಾಷನಲ್ ರೈಡಿಂಗ್ ಸ್ಕೂಲ್‌ನಲ್ಲಿ ಆಯೋಜನೆಯಾಗಿದೆ. ಇದರಂತೆ ಗ್ರಾಹಕರಿಗೆ ಅದ್ಭುತ ಚಾಲನಾ ಅನುಭವ ದೊರಕಲಿದೆ.
ಬಿಎಂಡಬ್ಲ್ಯು 1 ಸಿರೀಸ್, 3 ಸಿರೀಸ್, 5 ಸಿರೀಸ್ ಮತ್ತು 7 ಸಿರೀಸ್ ಹಾಗೆಯೇ ಬಿಎಂಡಬ್ಲ್ಯು ಎಕ್ಸ್3, ಎಕ್ಸ್5 ಮತ್ತು ಎಕ್ಸ್6ಗಳಂತಹ ದುಬಾರಿ ಕಾರುಗಳ ಆಫ್ ರೋಡ್ ಅನುಭವ ನಿಮ್ಮದಾಗಿಸಬಹುದಾಗಿದೆ. ರಿಜಿಸ್ಟ್ರೇಷನ್‌ಗಾಗಿ ಇಲ್ಲಿ ಭೇಟಿ ಕೊಡಿರಿ


Click it and Unblock the Notifications








