ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು ಭಾರತ ಲಾಂಚ್ ಅಧಿಕೃತ

By Nagaraja

ಬಹುನಿರೀಕ್ಷಿತ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು ಭಾರತ ಲಾಂಚ್ ಇದೀಗ ಅಧಿಕೃತಗೊಂಡಿದೆ. ಮುಂದಿನ ತಿಂಗಳು ರಾಷ್ಟ್ರ ರಾಜಧಾನಿಯಲ್ಲಿ ಸಾಗಲಿರುವ ಪ್ರತಿಷ್ಠಿತ 2014 ಆಟೋ ಎಕ್ಸ್ ಪೋದಲ್ಲಿ ಬಿಎಂಡಬ್ಲ್ಯು ಐ8 ಬಿಡುಗಡೆಯಾಗಲಿದೆ. ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮತ್ತು ಯ್ಯೂಟ್ಯೂಬ್ ಮುಖಾಂತರ ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯು ಇದನ್ನು ಖಚಿತಪಡಿಸಿದೆ.

ಇತರ ಮಾದರಿಗಳಲ್ಲಿ ಕಾಣಸಿಗದ ಅತ್ಯಾಕರ್ಷಕ ಆಧುನಿಕ ತಂತ್ರಗಾರಿಕೆ ಹಾಗೂ ವೈಶಿಷ್ಟ್ಯಗಳನ್ನು ನೀವು ಬಿಎಂಡಬ್ಲ್ಯು ಐ8 ಕಾರಿನಲ್ಲಿ ನೋಡಬಹುದಾಗಿದೆ. ಇದು ನಿಜಕ್ಕೂ ದೇಶದ ಗ್ರಾಹಕರಿಗೆ ಅತ್ಯುತ್ತಮ ಚಾಲನಾ ಅನುಭವ ನೀಡಲಿದೆ. ಬಿಎಂಡಬ್ಲ್ಯು ಐ8 ಆವೃತ್ತಿಯ ಸೀಮಿತ 7ರಿಂದ 8 ಯುನಿಟ್‌ಗಳು ಮಾತ್ರ ದೇಶವನ್ನು ಪ್ರವೇಶಿಸಲಿದೆ. ವರದಿಗಳ ಪ್ರಕಾರ ಇವೆಲ್ಲವೂ ಈಗಾಗಲೇ ಬುಕ್ಕಿಂಗ್ ಆಗಿವೆ. ಪ್ರಸಕ್ತ ಸಾಲಿನ ಅಂತ್ಯದಲ್ಲಿ ಅಥವಾ 2015 ವರ್ಷಾರಂಭದಲ್ಲಿ ಈ ಎಲ್ಲ ಕಾರುಗಳ ವಿತರಣೆ ಪ್ರಕ್ರಿಯೆ ನಡೆಯಲಿದೆ.

BMW i8

ಅಂದ ಹಾಗೆ ಬಿಎಂಡಬ್ಲ್ಯು ಐ8 ಜಾಗತಿಕ ಬಿಡುಗಡೆ 2013 ಸೆಪ್ಟೆಂಬರ್ ತಿಂಗಳಲ್ಲಿ ಫ್ರಾಂಕ್‌ಫರ್ಟ್ ಆಟೋ ಶೋದಲ್ಲಿ ನಡೆದಿತ್ತು. ಇದು 1.5 ಲೀಟರ್ ಟ್ವಿನ್ ಟರ್ಬೊಚಾರ್ಜ್ಡ್ (231 ಅಶ್ವಶಕ್ತಿ, 320 ಎನ್‌ಎಂ ಟಾರ್ಕ್) ಪೆಟ್ರೋಲ್ ಎಂಜಿನ್ ಮತ್ತು ಎಲೆಕ್ಟ್ರಿಕ್ ಮೋಟಾರು (131 ಅಶ್ವಶಕ್ತಿ, 250 ಎನ್‌ಎಂ ಟಾರ್ಕ್) ಪಡೆದಿದೆ. ಈ ಹಗುರ ಭಾರದ ಕಾರಿನ ಪೆಟ್ರೋಲ್ ಹಾಗೂ ವಿದ್ಯುತ್ ಮೋಟಾರು ಜತೆಯಾಗಿ 362 ಅಶ್ವಶಕ್ತಿ (570 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇದು ಕೇವಲ 4.5 ಸೆಕೆಂಡುಗಲ್ಲಿ ಗಂಟೆಗೆ 100 ಕೀ.ಮೀ. ಅಂತೆಯೇ ಗಂಟೆಗೆ ಗರಿಷ್ಠ 250 ಕೀ.ಮೀ. ವೇಗತೆಯಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಮೈಲೇಜ್ 40 ಕೀ.ಮೀ.
ಬಿಎಂಡಬ್ಲ್ಯು ಹೈಬ್ರಿಡ್ ಸೂಪರ್ ಕಾರಿನ ಮತ್ತೊಂದು ವೈಶಿಷ್ಟ್ಯವೆಂದರೆ ಇದು ಪ್ರತಿ ಲೀಟರ್‌ಗೆ 40 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಇದರಲ್ಲಿ ಬಳಸಲಾಗಿರುವ ಬಹುತೇಕ ಬಿಡಿಭಾಗಗಳನ್ನು ಮರು ಬಳಕೆ ಕೂಡಾ ಮಾಡಬಹುದಾಗಿದೆ. ಇವೆಲ್ಲವೂ ಬಿಎಂಡಬ್ಲ್ಯು ಐ8 ಹೈಬ್ರಿಡ್ ಕಾರನ್ನು ಸಂಪೂರ್ಣ ಪರಿಸರ ಸ್ನೇಹಿ ಎನಿಸಿಕೊಳ್ಳುವಲ್ಲಿ ಸಹಕಾರಿಯಾಗಿದೆ.
<center><iframe width="100%" height="450" src="//www.youtube.com/embed/o10t6HpSbNc" frameborder="0" allowfullscreen></iframe></center>

More from DriveSpark

Article Published On: Thursday, January 9, 2014, 14:15 [IST]
English summary
It has been officially confirmed by BMW India. Bavarian Motor Works will be launching the i8 hybrid sports car in India at the 2014 Auto Expo next month. The automaker has done this through social media platforms, by the way of a teaser image on its Facebook fan page and a YouTube video.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+